Indonesia Open Badminton: ಸಿಂಧುಗೆ ಸೋಲು- ಶ್ರೀಕಾಂತ್, ಪ್ರಣಯ್ ಕ್ವಾರ್ಟರ್‌ಫೈನಲಿಗೆ
Team Udayavani, Jun 16, 2023, 6:25 AM IST
ಜಕಾರ್ತಾ: ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ತಮ್ಮ ಪಂದ್ಯ ಗಳಲ್ಲಿ ಸುಲಭ ಜಯ ಸಾಧಿಸಿ ಇಂಡೋನೇಷ್ಯಾ ಓಪನ್ ವಿಶ್ವ ಟೂರ್ ಸೂಪರ್ 1000 ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ. ಇದೇ ವೇಳೆ ವನಿತೆಯರ ವಿಭಾಗದಲ್ಲಿ ಪಿ.ವಿ. ಸಿಂಧು ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.
ದ್ವಿತೀಯ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್ ತನ್ನ ದೇಶದವರೇ ಆದ ಲಕ್ಷ್ಯ ಸೇನ್ ಅವರನ್ನು 21-17, 22-20 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲಿ ಚೀನದ ಲಿ ಶಿ ಫೆಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಸಿಂಗಾಪುರದ ನಾಲ್ಕನೇ ಶ್ರೇಯಾಂಕದ ಲೋಹ್ ಕೀನ್ ಯ್ಯು ಅವರನ್ನು 21-19, 21-14 ಗೇಮ್‌ಗಳಿಂದ ಕೆಡಹಿದ್ದರು.
ಪ್ರಣಯ್ ಮುನ್ನಡೆ
ಏಳನೇ ಶ್ರೇಯಾಂಕದ ಪ್ರಣಯ್ ಕೇವಲ 43 ನಿಮಿಷಗಳ ಹೋರಾಟ ದಲ್ಲಿ ಹಾಂಕಾಂಗ್‌ನ ಆ್ಯಂಗಸ್ ಎನ್‌ಜಿ ಕ ಲಾಂಗ್ ಅವರನ್ನು 21-18, 21-16 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಮುಂದಿನ ಸುತ್ತಿನಲ್ಲಿ ಅವರು ಜಪಾನಿನ ಮೂರನೇ ಶ್ರೇಯಾಂಕದ ಕೊಡಾಯ್ ನರೋಕ ಅವರನ್ನು ಎದುರಿಸಲಿದ್ದಾರೆ.
ಸಿಂಧುಗೆ ಆಘಾತ
ವಿಶ್ವದ 14ನೇ ರ್‍ಯಾಂಕಿನ ಸಿಂಧು ಮತ್ತೂಮ್ಮೆ ಬೇಗನೇ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ಅವರು ವಿಶ್ವದ ಮೂರನೇ ರ್‍ಯಾಂಕಿನ ಚೈನೀಸ್ ತೈಪೆಯ ತೈ ಟಿಝು ಯಿಂಗ್ ಅವರಿಗೆ 18-21, 16-21 ಗೇಮ್‌ಗಳಿಂದ ಶರಣಾದರು. ಸಿಂಧು ಕಳೆದ ಎರಡು ಕೂಟಗಳಲ್ಲಿ ಕೂಡ ಮೊದಲ ಸುತ್ತಿನಲ್ಲಿ ಸೋಲನ್ನು ಕಂಡಿದ್ದರು. ಈ ಸೋಲಿನಿಂದಾಗಿ ವನಿತೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ರಾಜಾವತ್‌ಗೆ ಸೋಲು
ಭಾರತದ ಉದಯೋನ್ಮುಖ ತಾರೆ ಪ್ರಿಯಾಂಶು ರಾಜಾವತ್ ಕಠಿನ ಹೋರಾಟದಲ್ಲಿ ಸ್ಥಳೀಯ ಫೇವರಿಟ್ ಅಂತೋನಿ ಗಿಂಟಿಂಗ್ ಅವರಿಗೆ 22-20, 15-21, 15-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. 2022ರಲ್ಲಿ ಥಾಮಸ್ ಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ರಾಜಾವತ್ ಈ ವರ್ಷದ ಆರಂಭದಲ್ಲಿ ಆರ್ಲಿಯಾನ್ಸ್ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ್ದರು. ಇದು ಅವರ ಚೊಚ್ಚಲ ವಿಶ್ವ ಟೂರ್ ಪ್ರಶಸ್ತಿ ಯಾಗಿತ್ತು.
ಚಿರಾಗ್-ಸಾತ್ವಿಕ್ ಮುನ್ನಡೆ
ಪುರುಷರ ಡಬಲ್ಸ್‌ನಲ್ಲಿ ವಿಶ್ವದ 5ನೇ ರ್‍ಯಾಂಕಿನ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನದ ಹೆ ಜಿ ತಿಂಗ್ ಮತ್ತು ಝೋ ಹಾವೊ ಡಾಂಗ್ ಅವರನ್ನು 21-17, 21-15 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಮುಂದಿನ ಸುತ್ತಿನಲ್ಲಿ ಅವರು ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂತೊ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.