ಸುಸ್ಥಿರ ಬದುಕಿಗೆ ಮುನ್ನುಡಿ ಬರೆಯುವ ʼಇಂಟರ್ಯಾಕ್ಷನ್ಸ್’
ಇಫಿ ; ಈ ಚಿತ್ರ ಒಟ್ಟು 12 ಕಿರುಚಿತ್ರಗಳ ಒಂದು ಗುಚ್ಛ!
Team Udayavani, Nov 26, 2022, 9:22 PM IST
ಪಣಜಿ: ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ, ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ-ಇತ್ಯಾದಿ ಸುಸ್ಥಿರ ಬದುಕಿಗೆ ನಾವೆಲ್ಲರೂ ಮನಸ್ಸು ಮಾಡಿದರೆ ಸೊಗಸಾದ ಮುನ್ನುಡಿ ಬರೆಯಬಹುದು ಎಂಬುದನ್ನು ತೋರಿಸಲೆತ್ನಿಸಿದೆ “ಇಂಟರ್ಯಾಕ್ಷನ್ಸ್” (Interactions)ಚಿತ್ರ.
ಇಫಿ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರ ಒಟ್ಟು 12 ಕಿರುಚಿತ್ರಗಳ ಒಂದು ಗುಚ್ಛ. ಆರ್ಟ್ ಫಾರ್ ದಿ ವರ್ಲ್ಡ್ ನಿರ್ಮಿಸಿರುವ ಚಿತ್ರದಲ್ಲಿ ಭಾರತವೂ ಸೇರಿದಂತೆ 12 ವಿವಿಧ ದೇಶಗಳ ಹೆಸರಾಂತ ನಿರ್ದೇಶಕರು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಎಲ್ಲರ ಥೀಮ್ ಎಂದರೆ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪರಿಹಾರವನ್ನು ಹುಡುಕುವ, ಪರ್ಯಾಯ ದಾರಿಗಳನ್ನು ತೆರೆಯುವ ಪ್ರಯತ್ನ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಭಾರತದ ʼಎಲಿಫೆಂಟ್ ಇನ್ ದಿ ರೂಮ್ʼ(ನಿರ್ದೇಶನ-ನೀಲ್ ಮಾಧವ್ ಪಾಂಡಾ) ಅವರ ಚಿತ್ರದ ಬಗ್ಗೆ ನಿರ್ಮಾಪಕ ಮನಬಂದೋ ರಥ್ ಮಾತನಾಡಿ, ಯಾವುದೇ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಯನ್ನು ಒಂದು ಕೋಣೆಯಲ್ಲಿ ಬಂಧಿಸಿಟ್ಟ ಕೂಡಲೇ ಪರಿಹಾರವಾಗದು. ಆದ ಕಾರಣ, ನಾವೆಲ್ಲರೂ ಒಟ್ಟಿಗೇ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯ ಸಾಧ್ಯತೆಯನ್ನು ಹುಡುಕಬೇಕುʼ ಎಂದು ಹೇಳಿದರು.
ಎಲಿಫೆಂಟ್ ಇನ್ ದಿ ರೂಮ್, ಕೇರಳದ ವಯನಾಡು ಜಿಲ್ಲೆಯ ಒಂದು ಹಳ್ಳಿಯ ಕಥೆ. ಆ ಹಳ್ಳಿ ಎಲಿಫೆಂಟ್ ಕಾರಿಡಾರ್ ನ ಪ್ರದೇಶ ವ್ಯಾಪ್ತಿಗೆ ಬರುತ್ತಿದ್ದ ಕಾರಣ, ಸ್ಥಳೀಯರೇ ಸುಮಾರು 600 ಕುಟುಂಬಗಳ ವಸತಿ ಪ್ರದೇಶವನ್ನೇ ಬೇರೆಡೆಗೆ ಸ್ಥಳಾಂತರಿಸಿದರು. ಇದೊಂದು ಆರೋಗ್ಯಕರ ಹಾಗೂ ಸೌಹಾರ್ದ ನಡಿಗೆ. ಎರಡು ಸತ್ಯ ಘಟನೆಗಳನ್ನು ಆಧರಿಸಿ ಒಂದು ಕಥೆಯನ್ನು ಹೆಣೆದಿದ್ದೇವೆ. ಬರೀ ಸಮಸ್ಯೆ ಎನ್ನುವುದಕ್ಕಿಂತ ಪರಿಹಾರ ಸಾಧ್ಯತೆಗಳನ್ನು ಹುಡುಕುವುದು ನಮ್ಮ ಪ್ರಯತ್ನʼ ಎಂದರು ಮನಬಂದೋ.
ಇದೇ ರೀತಿ ಜೀವ ವೈವಿಧ್ಯತೆ, ಜಾಗತಿಕ ತಾಪಮಾನ, ಅರಣ್ಯ ನಾಶ, ಪರಿಸರ, ಅಪಾಯದಲ್ಲಿರುವ ಜಲಮೂಲಗಳು-ಇತ್ಯಾದಿ ಸಂಗತಿಗಳ ಬಗ್ಗೆ ಸಿನಿಮಾಗಳಿವೆ. ನೀಲ ಮಾಧವ್ ಪಾಂಡಾವಲ್ಲದೇ ಫೌಜಿ ಬೆನಸೈದಿ (Faouzi Bensaïdi) ಕ್ಲೆಮೆಂಟೆ ಬಿಕೊಚಿ(Clemente Bicocchi), ಆನಾ ದಿ ಕರಬುಚಿಯಾ(Anne de Carbuccia), ತಕುಮಾ ಕಿಕೊರೊ(Takumã Kuikuro), ಓಸ್ಕರ್ ಮೆಟ್ಸವಹ್ತ್(Oskar Metsavaht), ಎರಿಕ್ ನಜರಿಹಾನ್(Eric Nazarian), ಬೆಥಿನ್ ಒಬೆರ್ಲಿ(Bettina Oberli), ಇದ್ರಿಸಾ ಉದ್ರಗೊ(Idrissa Ouedraogo), ಜನಿಸ್ ರಫಾ(Janis Rafa), ಇಸಬೆಲ್ಲಾ ರೊಸೆಲ್ಲಿನಿ(Isabella Rossellini), ಯುಲೆನ್ ಒಲೈಜೊಲ(Yulene Olaizola) ಹಾಗೂ ರುಬೆನ್ ಇಮಾಜ್(Rubén Imaz) ಸಿನಿಮಾ ನಿರ್ದೇಶಿಸಿದ್ದಾರೆ.
ಜಿಎಐಎಲ್ ಕಾರ್ಪೋರೇಟ್ ಕಮ್ಯುನಿಕೇಷನ್ಸ್ ಮ್ಯಾನೇಜರ್ ರೂಪೇಶ್ ಕುಮಾರ್ ಮಾತನಾಡಿ, ಹವಾ ಬದಲೊ ಎಂಬ ಉಪಕ್ರಮದಡಿ ಪರಿಸರ ಸ್ನೇಹಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರಡಿ ಈ ಸಿನಿಮಾವೂ ಒಂದು. ಈ ಹಿಂದೆಯೂ ಕೆಲವು ಕಿರುಚಿತ್ರ, ಸಿನಿಮಾಗಳನ್ನುನಿರ್ಮಿಸಲಾಗಿದೆ ಹಾಗೂ ಪ್ರಶಸ್ತಿಯನ್ನೂ ಪಡೆದಿದೆʼ ಎಂದರು.
ಆರ್ಟ್ ಫಾರ್ ದಿ ವರ್ಲ್ಡ್ ನ ಭಾರತೀಯ ಭಾಗದ ಪ್ರೊಡಕ್ಷನ್ ಸಲಹೆಗಾರ ಪ್ರತೀಕ್ ಮಜುಂದಾರ್ ತಮ್ಮ ಸಂಸ್ಥೆಯ ಕ್ರಮಗಳ ಕುರಿತು ವಿವರಿಸಿದರು.
ಮೊರೊಕ್ಕೊ, ಜಪಾನ್, ಅಮೆರಿಕ, ಭಾರತ ಸೇರಿದಂತೆ ಯರೋಪ್, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ ಸೇರಿದಂತೆ ವಿವಿಧ ಭಾಗದ 12 ದೇಶಗಳು ಈ ಚಿತ್ರ ಯೋಜನೆಯಲ್ಲಿ ಪಾಲ್ಗೊಂಡಿವೆ. ಈ ಚಿತ್ರವು ಅಕ್ಟೋಬರ್ ನಲ್ಲಿ ರೋಮ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶ್ವಪ್ರೀಮಿಯರ್ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.