International Yoga Day: …ಮತ್ತು ಈಗ ಯೋಗ

Team Udayavani, Jun 21, 2023, 6:05 AM IST

YOGA 2

ಪತಂಜಲಿ ಮಹರ್ಷಿಗಳು ಯೋಗವನ್ನು ಚಿತ್ತವೃತ್ತಿ ನಿರೋಧ ಎಂದು ವ್ಯಾಖ್ಯಾನಿಸಿದ್ದಾರೆ. ಇದರರ್ಥ ಮನಸ್ಸಿನಲ್ಲಿ ಬದಲಾವಣೆ ಮತ್ತು ಸಕ್ರಿಯ ಚಟುವಟಿಕೆಗಳನ್ನು ಹೊಂದಿದ್ದರೆ ನೀವು ಯೋಗದಲ್ಲಿದ್ದೀರಿ. ಹಾಗೆಯೇ ನಿಮ್ಮ ಸುಪ್ತ ಪ್ರಜ್ಞೆಯಲ್ಲಿ ಎಲ್ಲವೂ ಒಂದಾಗಿದೆ ಎಂದರ್ಥ.

ನಾವು ನಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಅನುಸರಿಸುತ್ತಿರುತ್ತೇವೆ ಮತ್ತು ನಾವು ಸಾಧನೆಗಳು ಎಂಬ ಹೆಸರಿನಲ್ಲಿ ಏನೇನನ್ನೋ ಮಾಡುತ್ತಿರುತ್ತೇವೆ. ಆದರೆ ಮನಸ್ಸಿನ ಚಂಚಲತೆಗಳನ್ನು ಮೀರಿ ಹೋಗುವುದು ಅತ್ಯಂತ ಮೂಲಭೂತ ಮತ್ತು ಒಬ್ಬರು ಸಾಧಿಸಬಹುದಾದ ಅತ್ಯುನ್ನತ ಸಾಧನೆಯಾಗಿದೆ. ಏಕೆಂದರೆ ಇದು ಮನುಷ್ಯನನ್ನು ಅವನು ಹುಡುಕುತ್ತಿರುವ ಆಂತರಿಕ ಮತ್ತು ಬಾಹ್ಯ ಸಂಗತಿಗಳಿಂದ ಬಿಡುಗಡೆ ಮಾಡುತ್ತದೆ. ಅವನು ತನ್ನ ಮನಸ್ಸನ್ನು ಶಾಂತಗೊಳಿಸಿದರೆ ಸಾಧಕನಾಗುತ್ತಾನೆ.

ಮನಸ್ಸು ಸರಳ ಕನ್ನಡಿಯಾಗುತ್ತದೆಯೇ ಹೊರತು, ಚಂಚಲ ಕನ್ನಡಿಯಾಗುವುದಿಲ್ಲ. ಚಂಚಲ ಕನ್ನಡಿಯು ಜೀವನದ ಬಗ್ಗೆ ಒಬ್ಬರ ಸಂಪೂರ್ಣ ಗ್ರಹಿಕೆಯನ್ನು ವಿರೂಪಗೊಳಿಸುತ್ತದೆ. ಕನಿಷ್ಠ ನೀವು ಅದನ್ನು ನೋಡದಿದ್ದರೆ, ನೀವು ಹೇಗಿದ್ದೀರಿ ಎಂದು ನಿಮಗೆ ಸ್ವಲ್ಪ ಕಲ್ಪನೆ ಇರಬಹುದು, ಆದರೆ ನೀವು ಪ್ರತಿದಿನ ಅದನ್ನು ನೋಡಿದರೆ, ಅದು ನಿಮಗೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ವಿರೂಪಗೊಂಡ ನೋಟವನ್ನು ನೀಡುತ್ತದೆ.

ಈಗ ಹೆಚ್ಚಿನ ಮಾನವರು ತಮ್ಮ ಮನಸ್ಸನ್ನು ನೆನಪು ಮತ್ತು ಕಲ್ಪನೆಗಾಗಿ ಮಾತ್ರ ಬಳಸುತ್ತಿದ್ದಾರೆ. ಸ್ಮರಣೆ ಮತ್ತು ಕಲ್ಪನಾಶಕ್ತಿ ಎರಡು ಪ್ರತ್ಯೇಕ ವಿಷಯಗಳಲ್ಲ. ನೆನಪು ಗತಕಾಲದ ಸಂಗ್ರಹವಾಗಿದ್ದರೆ, ಕಲ್ಪನೆಯು ಅದರ ಉತ್ಪ್ರೇಕ್ಷಿತ ಆವೃತ್ತಿಯಾಗಿದೆ. ನೀವು ನೆನಪಿನಿಂದ ಕಲುಷಿತಗೊಳ್ಳದ ಅಥವಾ ಕಲ್ಪನಾಶಕ್ತಿಯಿಂದ ಭ್ರಮನಿರಸನಗೊಳ್ಳದ ಸ್ಥಿತಿಗೆ ನಿಮ್ಮ ಮನಸ್ಸನ್ನು ತಂದರೆ, ಅದು ನಿಜವಾಗಿಯೂ ಬುದ್ಧಿವಂತ, ಭೇದಿಸುವ ಮನಸ್ಸಾಗಿರುತ್ತದೆ. ಅದು ಜೀವನ ಮತ್ತು ಅದರ ಮೂಲವನ್ನು ನೋಡುತ್ತದೆ. ನಿಮ್ಮ ಜೀವನದ ಪ್ರಕ್ರಿಯೆಗೆ ನಿಮ್ಮ ಸ್ಮರಣೆ ಮತ್ತು ಕಲ್ಪನೆ ಸಾಕಷ್ಟು ಒಳ್ಳೆಯದು.

ಆದರೆ ನೀವು ಜೀವನದ ಇತರ ಆಯಾಮಗಳನ್ನು ಅನ್ವೇಷಿಸಲು ಬಯಸಿದರೆ, ಸ್ಮರಣೆ ಮತ್ತು ಕಲ್ಪನಾಶಕ್ತಿ ಸಾಕಾಗುವುದಿಲ್ಲ. ಏಕೆಂದರೆ ಅವು ನಿಮ್ಮ ಗತಕಾಲದ ನೆನಪುಗಳಷ್ಟೇ ಆಗಿರುತ್ತವೆ. ನಿಮ್ಮ ಭೂತಕಾಲವನ್ನು ಮರುನೆನಪು ಮಾಡಿಕೊಂಡ ಅನಂತರ, ನಿಮ್ಮ ಜೀವನಕ್ಕೆ ಒಂದು ಮಾದರಿ ಸಿಗುತ್ತದೆ. ನಿಮ್ಮ ಮನಸ್ಸು ಕೇವಲ ನೆನಪು ಮತ್ತು ಕಲ್ಪನೆಯಲ್ಲಿ ತೊಡಗಿಸಿಕೊಂಡಿದ್ದರೆ ಅದು ಬದಲಾವಣೆಯಾಗದ ಮಾದರಿಯಂತಾಗುತ್ತದೆ. ನೀವು ಈ ಮಾದರಿಯಲ್ಲಿ ಸಿಕ್ಕಿಹಾಕಿಕೊಂಡರೆ ಅದು ಒಂದು ರೀತಿಯ ಗುಲಾಮಗಿರಿಯಾಗುತ್ತದೆ. ಆಗ ಒಬ್ಬನು ಮಾನಸಿಕ ವಾಸ್ತವತೆಯಲ್ಲಿ ಸಿಕ್ಕಿಹಾಕಿಕೊಂಡು, ಈಗಿನ ಅನುಭವವನ್ನು ಕಳೆದುಕೊಂಡಿದ್ದಾನೆ ಎಂದರೆ ಆತ ವಿಮೋಚನೆಗೆ ಹೆಜ್ಜೆ ಇಡಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ, ಚಿತ್ತವೃತ್ತಿ ನಿರೋಧ ಎಂಬ ವಿವರಣೆಯನ್ನು ಪತಂಜಲಿ ಮಹರ್ಷಿಗಳು ಆರಿಸಿಕೊಂಡರು – ಇದು ನಿಮ್ಮನ್ನು ಮುಕ್ತಿ ಅಥವಾ ಸಾಕ್ಷಾತ್ಕಾರದ ಕಡೆಗೆ ಕರೆದೊಯ್ಯುವ ದಾರಿಯಾಗಿದೆ. ಯೋಗದ ಸಂಪೂರ್ಣ ವಿಜ್ಞಾನವನ್ನು ವಿವಿಧ ರೀತಿಯ ಸೂತ್ರಗಳ ರೂಪದಲ್ಲಿ ವಿಸ್ತರಿಸಲಾಗಿದೆ. ಸುಮಾರು ಇನ್ನೂರು ಸೂತ್ರಗಳು ಯೋಗ ಜ್ಞಾನದ ಸಂಪೂರ್ಣ ಅರಿವನ್ನು ಮೂಡಿಸುತ್ತವೆ. ಪತಂಜಲಿ ಮಹರ್ಷಿ ಯೋಗವನ್ನು ಕಂಡುಹಿಡಿಯಲಿಲ್ಲ; ಅವರು ಅದನ್ನು ಒಂದು ವ್ಯವಸ್ಥೆಯಲ್ಲಿ ಸಮೀಕರಿಸಿದ್ದಾರೆ. ಅದಕ್ಕಾಗಿಯೇ ಅವರನ್ನು “ಆಧುನಿಕ ಯೋಗದ ಪಿತಾಮಹ” ಎಂದು ಕರೆಯಲಾಗುತ್ತದೆ. ಯೋಗವು ಮೊದಲು ವಿವಿಧ ರೂಪಗಳಲ್ಲಿತ್ತು, ಅವರು ಅದನ್ನು ಸೂತ್ರಗಳಾಗಿ ವಿಂಗಡಿಸಿದರು.

ಒಬ್ಬ ಮನುಷ್ಯನಿಗೆ ಜೀವನದ ಬಗ್ಗೆ ಇಷ್ಟು ತಿಳಿವಳಿಕೆ ಇರಬಹುದೆಂದು ನಂಬುವುದು ಕಷ್ಟ. ಹೀಗಾಗಿಯೇ ಅವರ ತಿಳುವಳಿಕೆಯ ವಿಶಾಲತೆಯ ಬಗ್ಗೆ ಸರಳವಾಗಿ ನಂಬಲಾಗದು. ಇಂದಿನ ವಿದ್ವಾಂಸರು ಇದು ಪತಂಜಲಿಯಂಥ ಒಬ್ಬ ವ್ಯಕ್ತಿಯ ಕೆಲಸವಲ್ಲ, ಇದನ್ನು ಸಾಧ್ಯವಾಗಿಸಲು ಅನೇಕ ಜನರು ಕೆಲಸ ಮಾಡಿರಬೇಕು, ಏಕೆಂದರೆ ಇದು ತುಂಬಾ ವಿಶಾಲವಾಗಿದ್ದು, ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಗೆ ಸರಿಹೊಂದುವುದಿಲ್ಲ ಎಂದು ವಾದಿಸುತ್ತಾರೆ.

ಆದರೆ ಇದು ನಿಜವಾಗಿಯೂ ಒಬ್ಬ ಮನುಷ್ಯನ ಕೆಲಸ. ಪತಂಜಲಿ ಬಹುಶಃ ಈ ಭೂಮಿಯ ಮೇಲಿನ ಮಹಾನ್‌ ಬುದ್ಧಿಜೀವಿಗಳಲ್ಲಿ ಒಬ್ಬರು.

ಯೋಗ ಸೂತ್ರಗಳು ಬಹುಶಃ ಜೀವನದ ಶ್ರೇಷ್ಠ ದಾಖಲೆಗಳಾ ಗಿವೆ. ಭೂಮಿಯ ಅತ್ಯಂತ ಆಸಕ್ತಿದಾಯಕ ಪುಸ್ತಕವಾಗಿದೆ. ಇವು ಜೀವನವನ್ನು ತೆರೆಯುವ ಸೂತ್ರಗಳಾಗಿರುವುದರಿಂದ ಪತಂಜಲಿ ಮಹರ್ಷಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಬರೆದಿದ್ದಾರೆ. ಆದರೆ ಇವು ಸಾಹಿತ್ಯ ಅಥವಾ ತತ್ವಶಾಸ್ತ್ರವಲ್ಲ. ಪತಂಜಲಿ ಅವರ ಭಾಷೆಯ ಮೇಲಿನ ಪಾಂಡಿತ್ಯವು ಹೇಗಿತ್ತೆಂದರೆ, ಅವರು ಅದನ್ನು ಸೂತ್ರಗಳ ರೂಪದಲ್ಲಿ ಬರೆದಿದ್ದಾರೆ. ಆದ್ದರಿಂದ ಯಾವುದೇ ವಿದ್ವಾಂಸರು ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ವಿಚಿತ್ರವೆಂದರೆ ಇದು ಅತ್ಯಂತ ಆಸಕ್ತಿದಾಯಕವಲ್ಲ, ಆದರೆ ಒಂದು ಸೂತ್ರವು ನಿಮ್ಮೊಳಗೆ ವಾಸ್ತವವಾದರೆ, ಅದು ನಿಮ್ಮನ್ನು ಅನುಭವದ ಸಂಪೂರ್ಣ ಹೊಸ ಆಯಾಮಕ್ಕೆ ಸ್ಫೋಟಿಸುತ್ತದೆ. ನೀವು ಒಂದನ್ನು ಓದಿ ನಿಮ್ಮ ಜೀವನದಲ್ಲಿ ಅದನ್ನು ನಿಜವಾಗಿಸಿದರೆ, ಅಷ್ಟೇ ನೀವು ಎಲ್ಲ ಸೂತ್ರಗಳನ್ನು ಓದಬೇಕಾಗಿಲ್ಲ.

ಪತಂಜಲಿ ಯೋಗ ಸೂತ್ರಗಳನ್ನು ಬಹಳ ವಿಚಿತ್ರ ರೀತಿಯಲ್ಲಿ ಪ್ರಾರಂಭಿಸುತ್ತಾರೆ. ಮೊದಲ ಸೂತ್ರವೆಂದರೆ “… ಮತ್ತು ಈಗ, ಯೋಗ.’ ಆ ಅರ್ಧ ವಾಕ್ಯವು ಒಂದು ಅಧ್ಯಾಯವಾಗಿದೆ. ಈ ಆಯಾಮದ ಪುಸ್ತಕವನ್ನು ಪ್ರಾರಂಭಿಸುವುದು ತುಂಬಾ ವಿಚಿತ್ರ ಮಾರ್ಗವಾಗಿದೆ. ಬೌದ್ಧಿಕವಾಗಿ, ಇದು ಯಾವುದೇ ಅರ್ಥವನ್ನು ಹೊಂದಿಲ್ಲ, ಆದರೆ ಪ್ರಾಯೋಗಿಕವಾಗಿ ಅದು ಏನು ಹೇಳುತ್ತಿದೆ ಎಂದರೆ “ಹೊಸ ಮನೆಯನ್ನು ನಿರ್ಮಿಸುವುದು ಅಥವಾ ಹೊಸ ಹೆಂಡತಿಯನ್ನು ಹುಡುಕುವುದು ಅಥವಾ ನಿಮ್ಮ ಮಗಳನ್ನು ಮದುವೆ ಮಾಡುವುದು ನಿಮ್ಮ ಜೀವನವನ್ನು ಸೆಟಲ್‌ ಮಾಡುತ್ತದೆ ಎಂದು ನೀವು ಇನ್ನೂ ನಂಬಿದ್ದರೆ, ಯೋಗಕ್ಕೆ ಇನ್ನೂ ಸಮಯ ಬಂದಿಲ್ಲ ಎಂದರ್ಥ.

ಆದರೆ ನೀವು ಹಣ, ಅಧಿಕಾರ, ಸಂಪತ್ತು ಮತ್ತು ಎಲ್ಲ ರೀತಿಯ ಸಂತೋಷವನ್ನು ನೋಡಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವನ್ನೂ ಸವಿದಿದ್ದರೆ ಮತ್ತು ನಿಜವಾದ ಅರ್ಥದಲ್ಲಿ ಇನ್ನು ಮಾಡಲು ಏನೂ ಕೆಲಸ ಉಳಿದಿಲ್ಲ ಎಂದು ಅರಿತುಕೊಂಡರೆ ಅದು ಯೋಗದ ಸಮಯ.

ಇಡೀ ಜಗತ್ತು ಒಳಗೊಂಡಿರುವ ಎಲ್ಲ ಅಸಂಬದ್ಧತೆಗಳನ್ನು ಪತಂಜಲಿ ಅರ್ಧ ವಾಕ್ಯದೊಂದಿಗೆ ಬದಿಗಿಡುತ್ತಾರೆ. ಅದಕ್ಕಾ ಗಿಯೇ ಮೊದಲ ಸೂತ್ರವು “… ಮತ್ತು ಈಗ, ಯೋಗ.” ಇದರರ್ಥ, ನಿಮಗೆ ಮಾಡಲು ಏನೂ ಕೆಲಸ ಉಳಿದಿಲ್ಲ, ಮುಂದೇನು ಮಾಡಬೇಕು ಎಂಬುದು ತಿಳಿದಿಲ್ಲ ಎಂಬುದು ಬಾಧಿಸುತ್ತಿದ್ದರೆ ಆಗ ಯೋಗದತ್ತ ಮುಖ ಮಾಡಲು ಒಂದು ದಾರಿ ಸಿಕ್ಕಂತಾಗುತ್ತದೆ.

~ ಸದ್ಗುರು

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.