IPL 2021 : ಚೆನ್ನೈ ಮತ್ತೆ ಟಾಪ್, ಹೈದರಾಬಾದ್ ಲಾಸ್ಟ್
ಚೆನೈ ಪರ ಮಿಂಚಿದ ಗಾಯಕ್ವಾಡ್, ಡುಪ್ಲೆಸಿಕ್ಸ್
Team Udayavani, Apr 28, 2021, 11:19 PM IST
ಹೊಸದಿಲ್ಲಿ : ಡೇವಿಡ್ ವಾರ್ನರ್-ಮನೀಷ್ ಪಾಂಡೆ ಜೋಡಿಯ ಬ್ಯಾಟಿಂಗಿಗೆ ಸಡ್ಡು ಹೊಡೆದ ಋತುರಾಜ್ ಗಾಯಕ್ವಾಡ್-ಫಾ ಡು ಪ್ಲೆಸಿಸ್ ಚೆನ್ನೈಗೆ ಅಮೋಘ ಗೆಲುವನ್ನು ತಂದಿತ್ತಿದ್ದಾರೆ. ಬುಧವಾರ ರಾತ್ರಿಯ ಐಪಿಎಲ್ ಮುಖಾಮುಖೀಯಲ್ಲಿ ಧೋನಿ ಪಡೆ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 3 ವಿಕೆಟಿಗೆ 171 ರನ್ ಪೇರಿಸಿದರೆ, ಚೆನ್ನೈ18.3 ಓವರ್‌ಗಳಲ್ಲಿ 3 ವಿಕೆಟಿಗೆ 173 ರನ್ ಬಾರಿಸಿ ಗೆದ್ದು ಬಂದಿತು. ಗಾಯಕ್ವಾಡ್-ಡು ಪ್ಲೆಸಿಸ್ 13 ಓವರ್‌ಗಳಿಂದ 129 ರನ್ ರಾಶಿ ಹಾಕಿದರು. ಗಾಯಕ್ವಾಡ್ 44 ಎಸೆತಗಳಿಂದ ಸರ್ವಾಧಿಕ 75 ರನ್ (12 ಬೌಂಡರಿ) ಹಾಗೂ ಡು ಪ್ಲೆಸಿಸ್ 38 ಎಸೆತಗಳಿಂದ 56 ರನ್ (6 ಬೌಂಡರಿ, ಒಂದು ಸಿಕ್ಸರ್) ಬಾರಿಸಿದರು. ಡು ಪ್ಲೆಸಿಸ್ ಪಾಲಿಗೆ ಇದು ಸತತ 3ನೇ ಫಿಫ್ಟಿ.
ಇದು ಧೋನಿ ಪಡೆಗೆ ಒಲಿದ 5ನೇ ಗೆಲುವು. ಇನ್ನೊಂದೆಡೆ ಹೈದರಾಬಾದ್ ಐದನೇ ಸೋಲುಂಡು ಅಂತಿಮ ಸ್ಥಾನವನ್ನೇ ಗಟ್ಟಿ ಮಾಡಿಕೊಂಡಿತು.
ವಾರ್ನರ್ 3 ಮೈಲುಗಲ್ಲು!
ಹೈದರಾಬಾದ್ ಪರ ಆರಂಭಿಕರಿಬ್ಬರೂ ಅರ್ಧ ಶತಕ ಬಾರಿಸುವ ಜತೆಗೆ ದ್ವಿತೀಯ ವಿಕೆಟಿಗೆ 83 ಎಸೆತಗಳಿಂದ 106 ರನ್ ಬಾರಿಸಿದರು. 18ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ವಾರ್ನರ್ 55 ಎಸೆತಗಳಿಂದ 57 ರನ್ ಹೊಡೆದರೆ (3 ಬೌಂಡರಿ, 2 ಸಿಕ್ಸರ್), ಪಾಂಡೆ 46 ಎಸೆತ ಎದುರಿಸಿ ಸರ್ವಾಧಿಕ 61 ರನ್ ಮಾಡಿದರು (5 ಫೋರ್, ಒಂದು ಸಿಕ್ಸರ್). ಜವಾಬ್ದಾರಿಯುತ ಬ್ಯಾಟಿಂಗ್ ವೇಳೆ ವಾರ್ನರ್ ಮೂರು ಮೈಲುಗಲ್ಲು ನೆಟ್ಟರು. 15ನೇ ಓವರ್‌ನಲ್ಲಿ ಎನ್‌ಗಿಡಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ 4ನೇ ಸಾಧಕನಾಗಿ ಮೂಡಿಬಂದರು. ಜತೆಗೆ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನೂ ಪೂರ್ತಿಗೊಳಿಸಿದರು. ಸ್ವಲ್ಪವೇ ಹೊತ್ತಿನಲ್ಲಿ ಐಪಿಎಲ್‌ನಲ್ಲಿ 50ನೇ ಅರ್ಧ ಶತಕ ಬಾರಿಸಿದ ಸಾಧನೆಗೈದರು.
ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಡಿ ದಾಟಿದ ಉಳಿದ ಮೂವರೆಂದರೆ ಕ್ರಿಸ್ ಗೇಲ್ (13,839), ಕೈರನ್ ಪೊಲಾರ್ಡ್ (10,694) ಮತ್ತು ಶೋಯಿಬ್ ಮಲಿಕ್ (10,488). ಕೊನೆಯಲ್ಲಿ ಮಿಂಚಿನ ಆಟವಾಡಿದ ವಿಲಿಯಮ್ಸನ್ ಕೇವಲ 10 ಎಸೆತಗಳಿಂದ ಅಜೇಯ 26 ರನ್ ಸಿಡಿಸಿದರು (4 ಬೌಂಡರಿ, ಒಂದು ಸಿಕ್ಸರ್).
ಜಾನಿ ಬೇರ್‌ಸ್ಟೊ (7) ವಿಕೆಟ್ 4ನೇ ಓವರ್‌ನಲ್ಲೇ ಉರುಳಿಸಿದ ಚೆನ್ನೈ ಆರಂಭಿಕ ಮೇಲುಗೈ ಸಾಧಿಸಿತು. ಇದರೊಂದಿಗೆ ಈ ಐಪಿಎಲ್‌ನ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ತನ್ನ ದಾಖಲೆಯನ್ನು 14ಕ್ಕೆ ವಿಸ್ತರಿಸಿತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ನಾಯಕ ಡೇವಿಡ್ ವಾರ್ನರ್ ಮತ್ತು ಮನೀಷ್ ಪಾಂಡೆ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತಂದರು.
ಸ್ಕೋರ್ ಪಟ್ಟಿ
ಹೈದರಾಬಾದ್
ಡೇವಿಡ್ ವಾರ್ನರ್ ಸಿ ಜಡೇಜ ಬಿ ಎನ್‌ಗಿಡಿ 57
ಜಾನಿ ಬೇರ್‌ಸ್ಟೊ ಸಿ ಚಹರ್ ಬಿ ಕರನ್ 7
ಮನೀಷ್ ಪಾಂಡೆ ಸಿ ಡು ಪ್ಲೆಸಿಸ್ ಬಿ ಎನ್‌ಗಿಡಿ 61
ಕೇನ್ ವಿಲಿಯಮ್ಸನ್ ಔಟಾಗದೆ 26
ಕೇದಾರ್ ಜಾಧವ್ ಔಟಾಗದೆ 12
ಇತರ 8
ಒಟ್ಟು(3 ವಿಕೆಟಿಗೆ) 171
ವಿಕೆಟ್ ಪತನ:1-22, 2-128, 3-134.
ಬೌಲಿಂಗ್; ದೀಪಕ್ ಚಹರ್ 3-0-21-0
ಸ್ಯಾಮ್ ಕರನ್ 4-0-30-1
ಶಾದೂìಲ್ ಠಾಕೂರ್ 4-0-44-0
ಮೊಯಿನ್ ಅಲಿ 2-0-16-0
ಲುಂಗಿ ಎನ್‌ಗಿಡಿ 4-0-35-2
ರವೀಂದ್ರ ಜಡೇಜ 3-0-23-0
ಚೆನ್ನೈಸೂಪರ್ ಕಿಂಗ್ಸ್
ಋತುರಾಜ್ ಗಾಯಕ್ವಾಡ್ ಬಿ ರಶೀದ್ 75
ಫಾ ಡು ಪ್ಲೆಸಿಸ್ ಎಲ್‌ಬಿಡಬ್ಲ್ಯು ಬಿ ರಶೀದ್ 56
ಮೊಯಿನ್ ಅಲಿ ಸಿ ಜಾಧವ್ ಬಿ ರಶೀದ್ 15
ರವೀಂದ್ರ ಜಡೇಜ ಔಟಾಗದೆ 7
ಸುರೇಶ್ ರೈನಾ ಔಟಾಗದೆ 17
ಇತರ
ಒಟ್ಟು(18.3 ಓವರ್‌ಗಳಲ್ಲಿ 3 ವಿಕೆಟಿಗೆ) 173
ವಿಕೆಟ್ ಪತನ:1-129, 2 -148, 3-148.
ಬೌಲಿಂಗ್; ಸಂದೀಪ್ ಶರ್ಮ 3.3-0-24-0
ಖಲೀಲ್ ಅಹ್ಮದ್ 4-0-36-0
ಸಿದ್ದಾರ್ಥ್ ಕೌಲ್ 4-0-32-0
ಜಗದೀಶ್ ಸುಚಿತ್ 3-0-45-0
ರಶೀದ್ ಖಾನ್ 4-0-36-3
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.