![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 24, 2021, 7:00 AM IST
ಮುಂಬಯಿ: ಬಿಗ್ ಹಿಟ್ಟರ್‌ಗಳನ್ನು ಒಳಗೊಂಡೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ಶನಿವಾರದ ಐಪಿಎಲ್ ಮುಖಾಮುಖೀಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಒಂದು ತಂಡ ಸೋಲಿನ ಸುಳಿಯಿಂದ ಹೊರಬರುವ ಕಾರಣ ಈ ಕದನ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.
ರಾಜಸ್ಥಾನ್ ಮತ್ತು ಕೆಕೆಆರ್ ಒಂದೇ ದೋಣಿಯಲ್ಲಿ ಪಯಣಿಸುವ ತಂಡಗಳಾಗಿವೆ. ಎರಡೂ ತಂಡಗಳು 4 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಮುಗ್ಗರಿಸಿವೆ. ಒಂದನ್ನಷ್ಟೇ ಗೆದ್ದಿವೆ. ಹೀಗಾಗಿ ಎರಡೂ ತಂಡಗಳ ಮುಂದಿನ ಹಂತದ ಪ್ರಯಾಣಕ್ಕೆ ಇನ್ನಷ್ಟು ಗೆಲುವು ಅಗತ್ಯವಿದೆ. ಅದು ಇಲ್ಲಿಂದಲೇ ಆರಂಭವಾಗಬೇಕಿದೆ.
ಕೆಕೆಆರ್ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲವನ್ನು ನೆಚ್ಚಿಕೊಂಡಿರುವ ತಂಡ. ಭಾರತದ ತ್ರಿವಳಿಗಳಾದ ರಾಣಾ, ಗಿಲ್, ತ್ರಿಪಾಠಿ ಇಲ್ಲಿನ ಹೀರೋಗಳು. ಆದರೆ ಚೆನ್ನೈ ವಿರುದ್ಧ ಎಲ್ಲರೂ ಮುಗ್ಗರಿಸಿದ್ದರು. ನಾಯಕ ಮಾರ್ಗನ್ ಇನ್ನೂ ಬ್ಯಾಟಿಂಗ್ ಲಯ ಕಂಡುಕೊಂಡಿಲ್ಲ. ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್ ಪರ್ವಾಗಿಲ್ಲ. ಸುನೀಲ್ ನಾರಾಯಣ್ ಸೇರ್ಪಡೆಯಿಂದ ಯಾವುದೇ ಲಾಭವಾಗಿಲ್ಲ. ಬೌಲಿಂಗ್ ವಿಭಾದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್‌ಕೋಟಿ ಇನ್ನಷ್ಟು ಹರಿತಗೊಳ್ಳಬೇಕಿದೆ.
ರಾಜಸ್ಥಾನ್ ಬರಗಾಲ
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜಸ್ಥಾನ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡಕ್ಕೂ ಮೇಜರ್ ಸರ್ಜರಿಯ ಅಗತ್ಯವಿದೆ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸಾಕಷ್ಟು ಮಂದಿ ಬಿಗ್ ಹಿಟ್ಟರ್ ಇದ್ದರೂ ಯಾರೂ ಸಿಡಿಯುತ್ತಿಲ್ಲ. ಸ್ಟೋಕ್ಸ್ ಹೊರಬಿದ್ದರೂ ಬಟ್ಲರ್, ಮಿಲ್ಲರ್ ಅವರಂಥ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿಯೂ ರಾಜಸ್ಥಾನ್ ರನ್ ಬರಗಾಲ ಅನುಭವಿಸುತ್ತಿರುವುದೊಂದು ದುರಂತ. ಮನನ್ ವೋಹ್ರಾ, ರಿಯಾನ್ ಪರಾಗ್, ಮುಸ್ತಫಿಜುರ್ ರೆಹಮಾನ್ ಬದಲು ಇತರ ಆಟಗಾರರಿಗೆ ಅವಕಾಶ ನೀಡಿದರೆ ತಂಡಕ್ಕೆ ಹೆಚ್ಚಿನ ಲಾಭವಾದೀತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.