IPL 2021 : ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು
Team Udayavani, Apr 9, 2021, 11:35 PM IST
ಚೆನ್ನೈ: ಹದಿನಾಲ್ಕನೇ ಐಪಿಎಲ್ ಹಣಾಹಣಿಗೆ ರೋಚಕ ಆರಂಭ ಲಭಿಸಿದೆ. ಹರ್ಷಲ್ ಪಟೇಲ್ ಮತ್ತು ಎಬಿ ಡಿ ವಿಲಿಯರ್ ಅವರ ದಿಟ್ಟ ಹೋರಾಟದ ಫಲದಿಂದ ಆರ್‌ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ ಅಂತರದ ರೋಚಕ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ 9 ವಿಕೆಟಿಗೆ 159 ರನ್ ಗಳಿಸಿದರೆ, ಆರ್‌ಸಿಬಿ ಡೆತ್ ಓವರ್‌ಗಳ ಒತ್ತಡವನ್ನು ಮೆಟ್ಟಿನಿಂತು ಅಂತಿಮ ಎಸೆತದಲ್ಲಿ ಗುರಿ ಮುಟ್ಟಿತು.
ಚೇಸಿಂಗ್ ವೇಳೆ ಆರ್‌ಸಿಬಿ ಆಗಾಗ ಒತ್ತಡಕ್ಕೆ ಸಿಲುಕಿದರೂ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಎಬಿಡಿ ಮುಂಬೈಗೆ ಸವಾಲಾಗಿ ಪರಿಣಮಿಸಿದರು. ಕೊನೆಯ 5 ಓವರ್‌ಗಳಲ್ಲಿ 54 ರನ್ ತೆಗೆಯುವ ಸವಾಲು ಎದುರಾದಾಗ ಎಬಿಡಿ ಸಿಡಿದು ನಿಂತರು. ಆದರೆ ಗೆಲುವಿನ ಗಡಿಯಲ್ಲಿ ರನೌಟಾಗಿ ನಿರ್ಗಮಿಸಿದರು. 27 ಎಸೆತಗಳಿಂದ 48 ರನ್ ಬಾರಿಸಿದ ಎಬಿಡಿ ಆರ್‌ಸಿಬಿ ಸರದಿಯ ಟಾಪ್ ಸ್ಕೋರರ್ ಆಗಿ ಮೂಡಿಬಂದರು (4 ಬೌಂಡರಿ, 2 ಸಿಕ್ಸರ್).
ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಕೊಹ್ಲಿ ಪಡೆ ಬಿಗಿಯಾದ ಬೌಲಿಂಗ್ ನಡೆಸಿ ಗಮನ ಸೆಳೆಯಿತು. ಮಧ್ಯಮ ವೇಗಿ ಹರ್ಷಲ್ ಪಟೇಲ್ 27 ರನ್ನಿಗೆ 5 ವಿಕೆಟ್ ಹಾರಿಸಿದರು. ಇದರಲ್ಲಿ 3 ವಿಕೆಟ್‌ಗಳನ್ನು ಅವರು ಕೊನೆಯ ಓವರ್‌ನಲ್ಲಿ, 4 ಎಸೆತಗಳ ಅಂತರದಲ್ಲಿ ಹಾರಿಸಿದರು.
ಮುಂಬಯಿಗೆ ಕಡಿವಾಣ
ರೋಹಿತ್ ಶರ್ಮ ಹಾಗೂ ಇದೇ ಮೊದಲ ಸಲ ಮುಂಬೈ ತಂಡವನ್ನು ಪ್ರತಿನಿಧಿಸಿದ ಆಸ್ಟ್ರೇಲಿಯದ ಕ್ರಿಸ್ ಲಿನ್ ನಿರೀಕ್ಷಿತ ಆರಂಭ ನೀಡಲು ವಿಫಲರಾದರು. 4 ಓವರ್‌ಗಳಿಂದ ಕೇವಲ 24 ರನ್ ಒಟ್ಟುಗೂಡಿಸಿದರು. ಆಗ ಲಿನ್ ಜತೆ ಮಿಕ್ಸಪ್ ಮಾಡಿಕೊಂಡ ರೋಹಿತ್ ರನೌಟಾದರು. ಮುಂಬೈ ಕಪ್ತಾನನ ಗಳಿಕೆ 19 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸರ್). ಇದರೊಂದಿಗೆ ರೋಹಿತ್ ಶರ್ಮ ಐಪಿಎಲ್‌ನಲ್ಲಿ 11 ಸಲ ರನೌಟ್ ಆದಂತಾಯಿತು. ಜತೆಗೆ ಅತ್ಯಧಿಕ 36 ರನೌಟ್‌ಗಳಲ್ಲಿ ಕಾಣಿಸಿಕೊಂಡರು.
ವನ್‌ಡೌನ್‌ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಆಕ್ರಮಣಕಾರಿ ಆಟದ ಸೂಚನೆಯಿತ್ತರು. ಪವರ್ ಪ್ಲೇ ಅವಧಿಯಲ್ಲಿ ಮುಂಬೈ ಒಂದು ವಿಕೆಟಿಗೆ 41 ರನ್ ಮಾಡಿತು.
ಪವರ್ ಪ್ಲೇ ಬಳಿಕ ಬಿರುಸು
ಪವರ್ ಪ್ಲೇ ಬಳಿಕ ಮುಂಬೈ ಆಟ ಬಿರುಸುಗೊಂಡಿತು. ಅರ್ಧ ಹಾದಿ ಕ್ರಮಿಸುವ ವೇಳೆ ಮುಂಬೈ ಒಂದು ವಿಕೆಟಿಗೆ 86 ರನ್ ಮಾಡಿತ್ತು. ಆಗಲೇ ಆರ್‌ಸಿಬಿ 6 ಬೌಲರ್‌ಗಳನ್ನು ದಾಳಿಗಿಳಿಸಿತ್ತು.
ಲಿನ್-ಸೂರ್ಯಕುಮಾರ್ ಭರ್ತಿ 7 ಓವರ್ ನಿಭಾಯಿಸಿ ದ್ವಿತೀಯ ವಿಕೆಟಿಗೆ ಹತ್ತರ ಸರಾಸರಿಯಲ್ಲಿ 70 ರನ್ ಪೇರಿಸಿದರು. ಆಗ ಜಾಮೀಸನ್ ಮೊದಲ ಐಪಿಎಲ್ ವಿಕೆಟ್ ಬೇಟೆಯಾಡಿದರು. 31 ರನ್ ಮಾಡಿದ ಸೂರ್ಯಕುಮಾರ್, ಎಬಿಡಿಗೆ ಕ್ಯಾಚಿತ್ತು ವಾಪಸಾದರು. ಅವರ 23 ಎಸೆತಗಳ ಆಟದಲ್ಲಿ 4 ಫೋರ್, ಒಂದು ಸಿಕ್ಸರ್ ಸೇರಿತ್ತು.
ಅರ್ಧ ಶತಕದ ಹಾದಿಯಲ್ಲಿದ್ದ ಕ್ರಿಸ್ ಲಿನ್ ಓಟ 49 ರನ್ನಿಗೇ ಕೊನೆಗೊಂಡಿತು. ವಾಷಿಂಗ್ಟನ್ ಸುಂದರ್ ತಮ್ಮ ಮೊದಲ ಓವರಿನಲ್ಲೇ ಈ ವಿಕೆಟ್ ಉಡಾಯಿಸಿದರು. 35 ಎಸೆತ ಎದುರಿಸಿದ ಲಿನ್ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು.
ಮುಂಬೈ ಸರದಿಯಲ್ಲಿ ಲಿನ್ ಅವರದೇ ಸರ್ವಾಧಿಕ ಸ್ಕೋರ್. 15 ಓವರ್ ಅಂತ್ಯಕ್ಕೆ ಮುಂಬೈ ಸ್ಕೋರ್ 3 ವಿಕೆಟಿಗೆ 128ಕ್ಕೆ ಏರಿತ್ತು.
ಡೆತ್ ಓವರ್ ವೇಳೆ ಸಿಡಿಯಲು ಸ್ಕೆಚ್ ಹಾಕಿದ್ದ ಹಾರ್ದಿಕ್ ಪಾಂಡ್ಯ (13) ಅವರಿಗೆ ಹರ್ಷಲ್ ಪಟೇಲ್ ಅಡ್ಡಗಾಲಿಕ್ಕಿದರು. ಇಶಾನ್ ಕಿಶನ್ ಗಳಿಕೆ 28 ರನ್ (19 ಎಸೆತ, 2 ಫೋರ್, 1 ಸಿಕ್ಸರ್). ಈ ವಿಕೆಟ್ ಕೂಡ ಪಟೇಲ್ ಪಾಲಾಯಿತು. ಪೊಲಾರ್ಡ್, ಕೃಣಾಲ್ ಸಿಡಿಯಲು ವಿಫಲರಾದರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ರನೌಟ್ 19
ಕ್ರಿಸ್ ಲಿನ್ ಸಿ ಮತ್ತು ಬಿ ಸುಂದರ್ 49
ಸೂರ್ಯಕುಮಾರ್ ಸಿ ಎಬಿಡಿ ಬಿ ಜಾಮೀಸನ್ 31
ಇಶಾನ್ ಕಿಶನ್ ಎಲ್‌ಬಿಡಬ್ಲ್ಯು ಬಿ ಹರ್ಷಲ್ 28
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಬಿ ಹರ್ಷಲ್ 13
ಪೊಲಾರ್ಡ್ ಸಿ ಸುಂದರ್ ಬಿ ಹರ್ಷಲ್ 7
ಕೃಣಾಲ್ ಪಾಂಡ್ಯ ಸಿ ಕ್ರಿಸ್ಟಿಯನ್ ಬಿ ಹರ್ಷಲ್ 7
ಮಾರ್ಕೊ ಜಾನೆÕನ್ ಬಿ ಹರ್ಷಲ್ 0
ರಾಹುಲ್ ಚಹರ್ ರನೌಟ್ 0
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಇತರ 4
ಒಟ್ಟು (20 ಓವರ್‌ಗಳಲ್ಲಿ 9ವಿಕೆಟಿಗೆ) 159
ವಿಕೆಟ್ ಪತನ:1-24, 2-94, 3-105, 4-135, 5-145, 6-158, 7-158, 8-158, 9-159.
ಬೌಲಿಂಗ್:
ಮೊಹಮ್ಮದ್ ಸಿರಾಜ್ 4-0-22-0
ಕೈಲ್ ಜಾಮೀಸನ್ 4-0-27-1
ಯಜುವೇಂದ್ರ ಚಹಲ್ 4-0-41-0
ಶಾಬಾಜ್ ಅಹ್ಮದ್ 1-0-14-0
ಹರ್ಷಲ್ ಪಟೇಲ್ 4-0-27-5
ಡೇನಿಯಲ್ ಕ್ರಿಸ್ಟಿಯನ್ 2-0-21-0
ವಾಷಿಂಗ್ಟನ್ ಸುಂದರ್ 1-0-7-1
ರಾಯಲ್ ಚಾಲೆಂಜರ್ ಬೆಂಗಳೂರು
ಸುಂದರ್ ಸಿ ಲಿನ್ ಬಿ ಕೃಣಾಲ್ 10
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬುಮ್ರಾ 33
ರಜತ್ ಪಾಟೀದರ್ ಬಿ ಬೌಲ್ಟ್ 8
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಲಿನ್ ಬಿ ಜಾನ್ಸೆನ್ 39
ಎಬಿ ಡಿ ವಿಲಿಯರ್ ರನೌಟ್ 48
ಶಾಬಾಜ್ ಅಹ್ಮದ್ ಸಿ ಕೃಣಾಲ್ ಬಿ ಜಾನ್ಸೆನ್ 1
ಕ್ರಿಸ್ಟಿಯನ್ ಸಿ ಚಹರ್ ಬಿ ಬುಮ್ರಾ 1
ಕೈಲ್ ಜಾಮೀಸನ್ ರನೌಟ್ 4
ಹರ್ಷಲ್ ಪಟೇಲ್ ಔಟಾಗದೆ 4
ಮೊಹಮ್ಮದ್ ಸಿರಾಜ್ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್ ಪತನ:1-36, 2-46, 3-98, 4-103, 5-106, 6-122, 7-152.
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-36-1
ಜಸ್‌ಪ್ರೀತ್ ಬುಮ್ರಾ 4-0-26-2
ಮಾರ್ಕೊ ಜಾನ್ಸೆನ್ 4-0-28-2
ಕೃಣಾಲ್ ಪಾಂಡ್ಯ 4-0-25-1
ರಾಹುಲ್ ಚಹರ್ 4-0-43-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.