ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್
Team Udayavani, Mar 31, 2023, 7:23 PM IST
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ಐಪಿಎಲ್ 2023 ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ.
ಅರ್ಜಿತ್ ಸಿಂಗ್ ಅವರ ಸುಶ್ರಾವ್ಯ ಸಂಗೀತ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಖ್ಯಾತ ನಟಿಯರಾದ ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರಿಂದ ಡ್ಯಾನ್ಸ್ ಕ್ಯಾಮಿಯೋಗಳು ನಡೆದವು.
ಅಭಿಮಾನಿಗಳು ಸಿಎಸ್ಕೆ ನಾಯಕ ಎಂಎಸ್ ಧೋನಿ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ವೇದಿಕೆಗೆ ಆಕರ್ಷಕವಾಗಿ ಆಹ್ವಾನಿಸಲಾಯಿತು. ಕ್ರೀಡಾಂಗಣ ಕಿಕ್ಕಿರಿದ ಅಭಿಮಾನಿಗಳಿಂದ ತುಂಬಿತ್ತು. ಇಬ್ಬರನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಸಿಂಗ್ ಧುಮಾಲ್ ಅಭಿನಂದಿಸಿದರು. ಹಾರ್ದಿಕ್ ಕೈಯಲ್ಲಿ ಟ್ರೋಫಿ ಹಿಡಿದು ಬಂದರು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ತಂಡ ಇಂತಿದೆ
ಗುಜರಾತ್ ಟೈಟಾನ್ಸ್
ಎಸ್ ಗಿಲ್, ಸಹಾ (ವಿಕೆ), ಕೆ ವಿಲಿಯಮ್ಸನ್, ಪಾಂಡ್ಯ (ಸಿ), ವಿ. ಶಂಕರ್, ಆರ್. ತೆವಾಟಿಯಾ, ರಶೀದ್ ಖಾನ್, ಎಂ. ಶಮಿ, ಜೆ.ಲಿಟಲ್, ವೈ ದಯಾಳ್, ಎ. ಜೋಸೆಫ್.
ಸಿಎಸ್ ಕೆ
ಆರ್ ಗಾಯಕ್ವಾಡ್, ಡಿ ಕಾನ್ವೇ, ಬಿ ಸ್ಟೋಕ್ಸ್, ಅಂಬಟಿ ರಾಯುಡು, ಎಂ ಅಲಿ, ಆರ್ ಜಡೇಜಾ, ಎಂ ಧೋನಿ (ನಾಯಕ, ವಿಕೀ), ಎಸ್ ದುಬೆ, ದೀಪಕ್ ಚಾಹರ್, ಎಂ ಸ್ಯಾಂಟ್ನರ್, ಆರ್ ಹಂಗರ್ಗೇಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.