IPL 2023: ಡೆಲ್ಲಿಗೆ ಅದೃಷ್ಟ ತಂದ ಇಶಾಂತ್ ಶರ್ಮಾ
Team Udayavani, Apr 22, 2023, 7:21 AM IST
![ishanth sharma](https://www.udayavani.com/wp-content/uploads/2023/04/ishanth-sharma-620x372.jpg)
![ishanth sharma](https://www.udayavani.com/wp-content/uploads/2023/04/ishanth-sharma-620x372.jpg)
ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ವೇಗಿ ಇಶಾಂತ್ ಶರ್ಮ ಮತ್ತೆ ಸುದ್ದಿಯಲ್ಲಿದ್ದಾರೆ. ಇವರ ಪುನರಾಗಮನ ಎನ್ನುವುದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದೃಷ್ಟವನ್ನು ತಂದಿತ್ತಿದೆ. ಸತತ 5 ಪಂದ್ಯಗಳಲ್ಲಿ ಮುಗ್ಗರಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಡೆಲ್ಲಿ ಗುರುವಾರ ರಾತ್ರಿ ಕೆಕೆಆರ್‌ಗೆ 4 ವಿಕೆಟ್‌ಗಳ ಸೋಲುಣಿಸುವ ಮೂಲಕ ಪ್ರಸಕ್ತ ಕೂಟದಲ್ಲಿ ಮೊದಲ ಗೆಲುವು ಕಂಡಿತು.
ಬರೋಬ್ಬರಿ 717 ದಿನಗಳ ಐಪಿಎಲ್ ಆಡಲಿಳಿದ ಇಶಾಂತ್ ಶರ್ಮ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಕೆಡವಿ ಮಿಂಚಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಕುರಿತು ಪ್ರತಿಕ್ರಿಯಿಸಿದ ಡೆಲ್ಲಿ ನಾಯಕ ಡೇವಿಡ್ ವಾರ್ನರ್, “ಇಶಾಂತ್ ಶರ್ಮ ಅನಾರೋಗ್ಯದಿಂದ ಚೇತರಿಸಿಕೊಂದು ಇಂಥದೊಂದು ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ಹ್ಯಾಟ್ಸ್ ಆಫ್ ಇಶಾಂತ್…’ ಎಂದು ಪ್ರಶಂಸಿಸಿದ್ದಾರೆ.
ನನ್ನ ಸರದಿಗೆ ಕಾಯುತ್ತಿದ್ದೆ
“ನನ್ನ ಸರದಿಗಾಗಿ ಕಾಯುತ್ತ ಇದ್ದೆ. ಅವಕಾಶ ಸಿಕ್ಕಾಗ ತಂಡಕ್ಕೆ ಗೆಲುವನ್ನು ತಂದುಕೊಡುವುದೇ ನನ್ನ ಉದ್ದೇಶ. ಇಂದು ಇದು ಈಡೇರಿದೆ. ನೀವು ಎದುರಾಳಿ ಆಟಗಾರರ ವಿರುದ್ಧ ಯಾವ ಯೋಜನೆಯನ್ನು ಹಾಕಿಕೊಂಡಿದ್ದೀರಿ ಮತ್ತು ಅಂಗಳದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತೀರಿ ಎನ್ನುವುದು ಮುಖ್ಯ” ಎಂದು ಇಶಾಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)

IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ