IPL 2023: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ RCBಗೆ ಮಧ್ಯಮ ಕ್ರಮಾಂಕದ ಚಿಂತೆ
Team Udayavani, May 1, 2023, 8:15 AM IST
ಲಕ್ನೋ: ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಸೋಮವಾರದ ಐಪಿಎಲ್ ಪಂದ್ಯದಲ್ಲಿ ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೊದಲ ಮುಖಾಮುಖೀಯಲ್ಲಿ ಲಕ್ನೋ ವಿರುದ್ಧ ಆಘಾತಕಾರಿ ಸೋಲನ್ನು ಕಂಡಿದ್ದ ಆರ್‌ಸಿಬಿ ತಂಡವು ಈ ಬಾರಿ ತಿರುಗೇಟು ನೀಡಲು ಸಿದ್ಧವಾಗಿದೆ. ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿ ವಹಿಸಿ ಆಡಿದರೆ ಆರ್‌ಸಿಬಿ ಮೇಲುಗೈ ಸಾಧಿಸಬಹುದು.
ಇಷ್ಟರವರೆಗಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಆಟಗಾರರಾದ ಕೊಹ್ಲಿ, ನಾಯಕ ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಅವರು ಭರ್ಜರಿಯಾಗಿ ಆಡುತ್ತಿದ್ದಾರೆ. ಆವರ ಆಟದ ಉತ್ಸಾಹ, ವೇಗವನ್ನು ಮುಂದುವರಿಸಿಕೊಂಡು ಹೋಗಲು ತಂಡ ಬಹಳಷ್ಟು ಒದ್ದಾಡುತ್ತಿದೆ. ಈ ನಿಟ್ಟಿನಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಪ್ರಯತ್ನಿಸಬೇಕಾಗಿದೆ. ದಿನೇಶ್ ಕಾರ್ತಿಕ್ ಸಹಿತ ಇತರ ಆಟಗಾರರ ವೈಫಲ್ಯ ಆರ್‌ಸಿಬಿಯ ಚಿಂತೆಗೆ ಕಾರಣವಾಗಿದೆ. ಕಾರ್ತಿಕ್ ಅವರಲ್ಲದೇ ಮಹಿಪಾಲ್ ಲೊನ್ರೋರ್, ಶಾಬಾಜ್ ಅಹ್ಮದ್ ಮಿಂಚುವುದು ಅನಿವಾರ್ಯವಾಗಿದೆ.
ಬ್ಯಾಟಿಂಗ್ ಜತೆಗೆ ತಂಡದ ಫೀಲ್ಡಿಂಗ್ ಮತ್ತು ಕ್ಯಾಚ್ ಪಡೆಯುವುದು ಕೂಡ ಉತ್ತಮಗೊಳ್ಳಬೇಕಾಗಿದೆ. ನಮ್ಮಲ್ಲಿ ವೃತ್ತಿಪರತೆಯ ಕೊರತೆಯಿದೆ. ಇದರಿಂದಲೇ ನಾವು ಹಿನ್ನಡೆ ಕಾಣುತ್ತಿದ್ದೇವೆ ಎಂದು ಕೆಕೆಆರ್ ವಿರುದ್ಧ ಸೋತ ಬಳಿಕ ಸ್ವತಂ ಕೊಹ್ಲಿ ತಿಳಿಸಿದ್ದರು. ಪೂರ್ಣ ಫಿಟ್‌ನೆಸ್‌ಗೆ ಮರಳುವವರೆಗೆ ಪ್ಲೆಸಿಸ್ ಇಂಫ್ಯಾಕ್ಟ್ ಆಟಗಾರರಾಗಿ ಕಾಣಿಸಿಕೊಳ್ಳುವ ಕಾರಣ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ
ಆರ್‌ಸಿಬಿಯ ಯಶಸ್ವಿ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಇತರ ಬೌಲರ್‌ಗಳು ಬೆಂಬಲ ನೀಡಬೇಕಾಗಿದೆ. ಹರ್ಷಲ್ ಪಟೇಲ್ ಕೊನೆ ಹಂತದಲ್ಲಿ ನಿಯಂತ್ರಿತ ಬೌಲಿಂಗ್ ಮಾಡಬೇಕಾಗಿದೆ. ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್ ಹಾಗೂ ಇತರರು ಬಿಗು ದಾಳಿ ನಡೆಸಿದರೆ ಆರ್‌ಸಿಬಿ ಗೆಲುವಿನ ಕನಸು ಕಾಣಬಹುದಾಗಿದೆ.
ಲಕ್ನೋ ಭರ್ಜರಿ ಬ್ಯಾಟಿಂಗ್ ನಿರೀಕ್ಷೆ
ಪಂಜಾಬ್ ವಿರುದ್ಧ ಬೃಹತ್ ಮೊತ್ತ ಪೇರಿಸಿದ್ದ ಲಕ್ನೋ ತಂಡವು ಆರ್‌ಸಿಬಿ ವಿರುದ್ಧವೂ ಇದೇ ಉತ್ಸಾಹದಲ್ಲಿ ಬ್ಯಾಟಿಂಗ್ ಪ್ರದರ್ಶಿಸುವ ಆತ್ಮವಿಶ್ವಾಸದಲ್ಲಿದೆ. ಕೈಲ್ ಮೇಯರ್, ಕೃಣಾಲ್ ಪಾಂಡ್ಯ, ಸ್ಟೋಯಿನಿಸ್, ನಿಕೋಲಾಸ್ ಪೂರಣ್, ಆಯುಷ್ ಬಧೋನಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ರಾಹುಲ್ ಪಡೆ ಗೆಲುವಿನ ಉತ್ಸಾಹವನ್ನು ಮುಂದುವರಿಸಲು ಪ್ರಯತ್ನಿಸಲಿದೆ.
ತಲಾ ಎಂಟು ಪಂದ್ಯ
ಈ ಐಪಿಎಲ್‌ನಲ್ಲಿ ಉಭಯ ತಂಡಗಳು ಇಷ್ಟರವರೆಗೆ ತಲಾ ಎಂಟು ಪಂದ್ಯಗಳನ್ನು ಆಡಿದ್ದು ಲಕ್ನೋ ಐದರಲ್ಲಿ ಮತ್ತು ಬೆಂಗಳೂರು ನಾಲ್ಕರಲ್ಲಿ ಜಯ ಸಾಧಿಸಿದೆ. ಸದ್ಯ ಹತ್ತಂಕ ಹೊಂದಿರುವ ಲಕ್ನೋ ಭಾರೀ ಉತ್ಸಾಹದಲ್ಲಿದೆ. ಪಂಜಾಬ್ ವಿರುದ್ಧ ಈ ಐಪಿಎಲ್‌ನ ಬೃಹತ್ ಮೊತ್ತ (5ಕ್ಕೆ 257) ಪೇರಿಸಿದ ಲಕ್ನೋ ಭರ್ಜರಿ ಫಾರ್ಮ್ನಲ್ಲಿದೆ.
ಲಕ್ನೋ ಮತ್ತು ಆರ್‌ಸಿಬಿ ಇಷ್ಟರವರೆಗೆ ಮೂರು ಬಾರಿ ಮುಖಾಮುಖೀಯಾಗಿದ್ದು ಒಮ್ಮೆ ಲಕ್ನೋ ಜಯ ಸಾಧಿಸಿದೆ. ಆರ್‌ಸಿಬಿ ಎರಡು ಬಾರಿ ಗೆದ್ದಿದೆ. ಇದರಲ್ಲಿ 2022ರ ಎಲಿಮಿನೇಟರ್ ಪಂದ್ಯದ ಫಲಿತಾಂಶವೂ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.