IPL 2023: ಆರರಿಂದ ಮೇಲೇರಬೇಕಿದೆ ಮುಂಬೈ
Team Udayavani, May 21, 2023, 7:10 AM IST
ಮುಂಬಯಿ: ಐದು ಬಾರಿಯ ಚಾಂಪಿಯನ್, ಕಳೆದ ಸಲ ಕೊನೆಯ ಸ್ಥಾನದ ಸಂಕಟ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಆದರೆ ಆರರಿಂದ ಮೇಲೆದ್ದು ಅಗ್ರ ನಾಲ್ಕರೊಳಗೆ ಬಂದು ನಿಲ್ಲುವ ಒತ್ತಡದಲ್ಲಿದೆ. ಇದಕ್ಕಿರುವುದು ಒಂದೇ ಅವಕಾಶ.
ರವಿವಾರ ತವರಿನ ವಾಂಖೇಡೆ ಅಂಗಳದಲ್ಲಿ ಸನ್‌ರೈಸರ್ ಹೈದ ರಾಬಾದ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿರುವ ರೋಹಿತ್ ಪಡೆ ಇಲ್ಲಿ ದೊಡ್ಡ ಗೆಲುವನ್ನು ದಾಖಲಿಸಿದರಷ್ಟೇ ಮುನ್ನಡೆ ಸಾಧ್ಯ. ಮುಂಬೈ ರನ್‌ರೇಟ್ ಇನ್ನೂ ಮೈನಸ್‌ನಲ್ಲಿ ಇರುವುದರಿಂದ ಒತ್ತಡ ಹೆಚ್ಚು. ಆರ್‌ಸಿಬಿ, ರಾಜಸ್ಥಾನ್ ತಂಡಗಳೆರಡು ಮುಂಬೈಗೆ ಭಾರೀ ಪೈಪೋಟಿ ನೀಡುತ್ತಿವೆ.
ಮುಂಬೈ ಕಳೆದೆರಡು ಪಂದ್ಯಗಳಲ್ಲಿ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಗುಜರಾತ್ ವಿರುದ್ಧ ವಾಂಖೇಡೆಯಲ್ಲಿ 5ಕ್ಕೆ 218 ರನ್ ಪೇರಿಸಿಯೂ ಗೆಲುವಿನ ಅಂತರ 27 ರನ್ನಿಗೆ ಸೀಮಿತಗೊಂಡಿತು. ಬಳಿಕ ಲಕ್ನೋ ವಿರುದ್ಧ ಅವರದೇ ಅಂಗಳದಲ್ಲಿ 5 ರನ್ ಸೋಲುಂಡಿತು. ಇಲ್ಲವಾದರೆ ಮುಂಬೈ ಈಗ ತೃತೀಯ ಸ್ಥಾನದಲ್ಲಿ ನೆಲೆಸಿರಬೇಕಿತ್ತು.
ಬೌಲರ್ ಬಹಳ ದುಬಾರಿ
ವಾಂಖೇಡೆಯಲ್ಲಿ ಮುಂಬೈ ಬೌಲರ್ ಬಹಳ ದುಬಾರಿ ಆಗುತ್ತಿ ರುವುದನ್ನು ಗಮನಿಸಬಹುದು. ಸತತ 4 ಪಂದ್ಯಗಳಲ್ಲಿ ಅದು ಎದುರಾಳಿಗೆ 200 ರನ್ ಬಿಟ್ಟುಕೊಟ್ಟಿತ್ತು; ಆರ್‌ಸಿಬಿ ಈ ಮೊತ್ತದಿಂದ ಒಂದೇ ರನ್ ಹಿಂದುಳಿದಿತ್ತು. ರವಿವಾರದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್ ಮತ್ತೆ ಕೈಕೊಟ್ಟರೆ ಬ್ಯಾಟರ್‌ಗಳು ಒತ್ತಡಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಕೂಟದಿಂದ ನಿರ್ಗಮಿ ಸಿದ್ದರಿಂದ ಹೈದರಾಬಾದ್‌ಗೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಕೊನೆಯಲ್ಲೊಂದು ಜೋಶ್ ತೋರಿ ಗೆಲುವಿನೊಂದಿಗೆ ಗುಡ್‌ಬೈ ಹೇಳುವ ಯೋಜನೆಯಂತೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.