IPL 2023: ಮೊಹಾಲಿ ಕಣದಲ್ಲಿ ಪಂಜಾಬ್-ಗುಜರಾತ್
Team Udayavani, Apr 13, 2023, 7:50 AM IST
ಮೊಹಾಲಿ: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ಗೆ ಪ್ರಸಕ್ತ ಋತುವಿನಲ್ಲಿ ರಿಂಕು ಸಿಂಗ್ ಎಂಬ ಸ್ಫೋಟಕ ಬ್ಯಾಟರ್ ಮೊದಲ ಸೋಲಿನ ರುಚಿ ತೋರಿಸಿದ್ದು, ತವರಿನ ಅಹ್ಮದಾಬಾದ್ ಅಂಗಳದಲ್ಲೇ ಗುಜರಾತ್ ಮೊದಲ ಸೋಲನುಭವಿಸಿದ್ದೆಲ್ಲ ಈಗ ಇತಿಹಾಸ. ಆದರೆ ಕೇವಲ ಎರಡು ದಿನಗಳ ಹಿಂದಿನ ಈ ಆಘಾತಕಾರಿ ಹಾಗೂ ಅನಿರೀಕ್ಷಿತ ವಿದ್ಯಮಾನವನ್ನು ಗುಜರಾತ್ ಪಡೆ ಮರೆಯುವುದು ಅಷ್ಟು ಸುಲಭವಲ್ಲ. ಅಷ್ಟರಲ್ಲಿ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ಸವಾಲು ಎದುರಾಗಿದೆ. ಗುರುವಾರ ರಾತ್ರಿ ಇತ್ತಂಡಗಳು ಇಲ್ಲಿ ಎದುರಾಗಲಿವೆ.
ಹೇಳಿ ಕೇಳಿ ಮೊಹಾಲಿ ಪಂಜಾಬ್ ತಂಡದ ತವರಿನ ಅಂಗಳ. ಇಲ್ಲಿ ಆಡಲಾದ ಕೆಕೆಆರ್ ಎದುರಿನ ಮೊದಲ ಪಂದ್ಯವನ್ನು ಪಂಜಾಬ್ ಡಿ-ಎಲ್ ನಿಯಮದಂತೆ 7 ರನ್ನುಗಳಿಂದ ಜಯಿಸಿತ್ತು. ಹೋಮ್ ಗ್ರೌಂಡ್‌ನಲ್ಲಿ ಗೆಲುವಿನ ಲಯವನ್ನು ಮುಂದು ವರಿಸಿಕೊಂಡು ಹೋಗುವುದು ಪಂಜಾಬ್ ಗುರಿ ಯಾದರೆ, ಸೋಲಿನ ಸುಳಿಯಿಂದ ಹೊರಬಂದು ಮತ್ತೆ ಗೆಲುವಿನ ಹಳಿ ಏರುವುದು ಗುಜರಾತ್ ಯೋಜನೆ.
ಹಾರ್ದಿಕ್ ಪಾಂಡ್ಯ ಆಗಮನ
ಕೆಕೆಆರ್ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ನಾಯಕ ಹಾರ್ದಿಕ್ ಪಾಂಡ್ಯ ಸೇವೆಯಿಂದ ವಂಚಿತವಾಗಿತ್ತು. ಅನಾರೋಗ್ಯದಿಂದ ಅವರು ಹೊರಗುಳಿದಿದ್ದರು. ಇವರ ಬದಲು ತಂಡವನ್ನು ಮುನ್ನಡೆಸಿದ ರಶೀದ್ ಖಾನ್ ಹ್ಯಾಟ್ರಿಕ್ ಹೀರೋ ಎನಿಸಿಕೊಂಡು ಯಶಸ್ಸಿನ ಹಾದಿಯಲ್ಲಿದ್ದರು. ಆದರೆ ರಿಂಕು ಸಿಂಗ್ ಎಲ್ಲವನ್ನೂ ಬುಡಮೇಲು ಮಾಡಿಬಿಟ್ಟರು.
ಪಂಜಾಬ್ ವಿರುದ್ಧ ಆಡುವಾಗ ಗುಜರಾತ್ ಮೊದಲು “ರಿಂಕು ಸಿಂಗ್ ಭೀತಿ”ಯನ್ನು ಹೊಡೆ ದೋಡಿಸಬೇಕು. ಹಾರ್ದಿಕ್ ಪಾಂಡ್ಯ ಮರಳುವುದರಿಂದ ಗುಜರಾತ್ ಪೂರ್ಣ ಸಾಮರ್ಥ್ಯದೊಂದಿಗೆ ಹಾಗೂ ಆತ್ಮವಿಶ್ವಾಸದೊಂದಿಗೆ ಆಡ ಬಹುದಾಗಿದೆ.
ಮೊಹಾಲಿ ಕೂಡ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಗುಜರಾತ್ ತಂಡದ ಬ್ಯಾಟಿಂಗ್ ಪಂಜಾಬ್‌ಗಿಂತ ಬಲಿಷ್ಠ. ಗಿಲ್, ಸಾಹಾ, ಸಾಯಿ ಸುದರ್ಶನ್, ವಿಜಯ್ ಶಂಕರ್, ತೆವಾಟಿಯಾ ಮೊದಲಾದ ಬಿಗ್ ಹಿಟ್ಟರ್ ಇದ್ದಾರೆ. ಪಾಂಡ್ಯ ಬ್ಯಾಟ್‌ನಿಂದ ಮಾತ್ರ ಇನ್ನೂ ರನ್ ಬಂದಿಲ್ಲ. 2 ಪಂದ್ಯಗಳಲ್ಲಿ ಅವರು ಗಳಿಸಿದ್ದು ತಲಾ 8 ರನ್ ಮಾತ್ರ. ಆದರೆ ನಾಯಕತ್ವದ ವಿಷಯದಲ್ಲಿ ಪಾಂಡ್ಯ ನಿಜಕ್ಕೂ ಲಕ್ಕಿ. ಬೌಲಿಂಗ್‌ಗೆ ಶಮಿ, ರಶೀದ್ ಖಾನ್, ಜೋಸೆಫ್, ಲಿಟ್ಲ ಇದ್ದಾರೆ. ಆದರೆ ಯಶ್ ದಯಾಳ್‌ಗೆ ಗೇಟ್‌ಪಾಸ್ ಖಾತ್ರಿ!
ಚೇತರಿಸಬೇಕಿದೆ ಪಂಜಾಬ್
ಪಂಜಾಬ್ ಕಳೆದ ಪಂದ್ಯದಲ್ಲಿ ಶೋಚನೀಯ ಬ್ಯಾಟಿಂಗ್ ನಡೆಸಿ ಹೈದರಾಬಾದ್‌ಗೆ ಮೊದಲ ಗೆಲುವನ್ನು ಕೊಡಿಸಿತ್ತು. 143ರ ಮೊತ್ತದಲ್ಲಿ ನಾಯಕ ಧವನ್ ಒಬ್ಬರೇ 99 ರನ್ ಮಾಡಿ ಹೋರಾಟ ನಡೆಸಿದ್ದರು. ಆದರೆ ಬ್ಯಾಟಿಂಗ್ ಸುಧಾರಣೆ ಆಗದ ಹೊರತು ಪಂಜಾಬ್ ಗೆಲುವಿನ ನಿರೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಲಿಯಮ್ ಲಿವಿಂಗ್‌ಸ್ಟೋನ್ ಸೇರ್ಪಡೆಯಾದರೆ ತಂಡಕ್ಕೆ ಹೆಚ್ಚಿನ ಬಲ ಲಭಿಸುವುದು ಖಂಡಿತ.
ಪಂಜಾಬ್ ಬೌಲಿಂಗ್ ಕೂಡ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಈವರೆಗೆ ಪರಿಣಾಮ ಬೀರಿದ್ದು ಅರ್ಷದೀಪ್ ಸಿಂಗ್ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.