IPL 2023: ರಾಜಸ್ಥಾನ್ ರಾಯಲ್ಸ್-ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಹೋರಾಟ
Team Udayavani, May 19, 2023, 7:57 AM IST
ಧರ್ಮಶಾಲಾ: ಈ ಐಪಿಎಲ್‌ನ ಕೊನೆಯ ಸುತ್ತಿನ ಹೋರಾಟವು ಶುಕ್ರವಾರದಿಂದ ಆರಂಭವಾಗಲಿದ್ದು ಪ್ಲೇ ಆಫ್ಗೇರಲು ಎಲ್ಲ ತಂಡಗಳು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದು ಗೆದ್ದ ತಂಡಕ್ಕೆ ಪ್ಲೇ ಆಫ್ಗೇರುವ ಸ್ವಲ್ಪ ಅವಕಾಶವಿದೆ.
ಪಂಜಾಬ್ ಮತ್ತು ರಾಜಸ್ಥಾನ್ ತಲಾ 12 ಅಂಕ ಹೊಂದಿದ್ದರೂ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ರಾಜಸ್ಥಾನ್ ಆರನೇ ಸ್ಥಾನದಲ್ಲಿದ್ದರೆ ಪಂಜಾಬ್ ಎಂಟನೇ ಸ್ಥಾನದಲ್ಲಿದೆ. ಪಂಜಾಬ್ ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 15 ರನ್ನುಗಳಿಂದ ಸೋಲನ್ನು ಕಂಡಿತ್ತು. ಪಂಜಾಬ್ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದರೂ ಬೌಲಿಂಗ್ ಅಷ್ಟೊಂದು ನಿಖರವಾಗಿರಲಿಲ್ಲ. ದುರ್ಬಲ ಬೌಲಿಂಗ್‌ನಿಂದಾಗಿ ಡೆಲ್ಲಿ ತಂಡ 200 ಪ್ಲಸ್ ರನ್ ಗಳಿಸಲು ಸಾಧ್ಯವಾಗಿತ್ತು.
ಪಂಜಾಬ್ ಇಷ್ಟರವರೆಗಿನ ಪಂದ್ಯಗಳಲ್ಲಿ ನಿರೀಕ್ಷಿತ ನಿರ್ವಹಣೆ ನೀಡಿಲ್ಲ. ನಿರ್ಣಾಯಕ ಹಂತದಲ್ಲಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರಿಂದ ಸೋಲನ್ನು ಕಾಣುವಂತಾಯಿತು. ವೇಗದ ಪಡೆ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಹರಿತವಾಗಿರಲಿಲ್ಲ. ಬಹಳಷ್ಟು ರನ್ ಬಿಟ್ಟುಕೊಟ್ಟಿದೆ. ಕಾಗಿಸೊ ರಬಾಡ, ಸ್ಯಾಮ್ ಕರನ್ ಮತ್ತು ಅರ್ಷದೀಪ್ ಓವರೊಂದಕ್ಕೆ 10 ರನ್ನಿನಂತೆ ನೀಡಿದ್ದರಿಂದ ತಂಡ ಒತ್ತಡಕ್ಕೆ ಸಿಲುಕುವಂತಾಯಿತು.
ಈ ಐಪಿಎಲ್‌ನಲ್ಲಿ ರಬಾಡ ಅವರ ನಿರ್ವಹಣೆ ಶ್ರೇಷ್ಠ ಮಟ್ಟದಲ್ಲಿರಲಿಲ್ಲ. ಬುಧವಾರದ ಪಂದ್ಯದ ವೇಳೆ ಅರ್ಷದೀಪ್ ಅವರನ್ನು ಪವರ್‌ಪ್ಲೇ ಮತ್ತು ಡೆತ್ ಓವರ್ ವೇಳೆ ಬಳಸಿಕೊಳ್ಳದಿರುವುದು ಪ್ರಶ್ನಿಸುವಂತಾಗಿದೆ. ಅರ್ಷದೀಪ್ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ದಾಳಿ ಮಾಡುವಲ್ಲಿ ಸಮರ್ಥರಿದ್ದರು. ಅವರು ಗೆಲ್ಲಲೇಬೇಕಾದ ಶುಕ್ರವಾರದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ.
ಪಂಜಾಬ್‌ನ ಬ್ಯಾಟಿಂಗ್ ಬಲಿಷ್ಠವಾಗಿದೆ. ಶಿಖರ್ ಧವನ್ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿಲ್ಲ. ಅವರಿಂದ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ. ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿವಿಂಗ್‌ಸ್ಟೋನ್ ಮುಂತಾದವರು ಉತ್ತಮ ಫಾರ್ಮ್ನಲ್ಲಿದ್ದಾರೆ.
ರಾಜಸ್ಥಾನ್ ಬಲಿಷ್ಠ
ಪಂಜಾಬ್‌ಗ ಹೋಲಿಸಿದರೆ ರಾಜಸ್ಥಾನ್ ಬಲಿಷ್ಠವಾಗಿದೆ. ಆದರೆ ಆರಂಭದ ಅಬ್ಬರ ಅನಂತರ ಕಂಡಿಲ್ಲ. ರಾಜಸ್ಥಾನ್ ಆರಂಭದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿತ್ತು. ಆಬಳಿಕ ತಂಡ ಸಮಸ್ಯೆಯಲ್ಲಿ ಸಿಲುಕಿತ್ತು. ಯಶಸ್ವಿ ಜೈಸ್ವಾಲ್, ಯುಜುವೇಂದ್ರ ಚಹಲ್ ಅಸಾಧಾರಣ ನಿರ್ವಹಣೆ ನೀಡಿದ್ದರೂ ತಂಡ ನಿರ್ಣಾಯಕ ಹಂತದಲ್ಲಿ ಕುಸಿದಿದೆ. ಜಾಸ್ ಬಟ್ಲರ್ ಕೆಲವೊಂದು ಪಂದ್ಯದಲ್ಲಿ ಭರ್ಜರಿಯಾಗಿ ಆಡಿ ದ್ದರೂ ಸ್ಥಿ ನಿರ್ವಹಣೆ ನೀಡುವಲ್ಲಿ ವಿಫಲರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.