ಐಪಿಎಲ್ ಸಿದ್ದತಾ ಸಭೆ: ಅಭ್ಯಾಸಕ್ಕೆ ಮುಂಬಯಿಯ ಐದು ಕ್ರೀಡಾಂಗಣಗಳು
ಪಂದ್ಯಾವಳಿ ಸುಗಮವಾಗಿ ನಡೆಯಲು ಮಹಾರಾಷ್ಟ್ರ ಸರ್ಕಾರ ಸಕಲ ನೆರವು
Team Udayavani, Mar 2, 2022, 6:41 PM IST
ಮುಂಬಯಿ : ಮಾರ್ಚ್ 14 ಅಥವಾ 15ರಿಂದ ನಗರದಲ್ಲಿ 10 ಐಪಿಎಲ್ ತಂಡಗಳು ತರಬೇತಿ ಆರಂಭಿಸಲಿದ್ದು, ಐದು ಅಭ್ಯಾಸ ಸ್ಥಳಗಳನ್ನು ಗುರುತಿಸಲಾಗಿದೆ.
ಮಾರ್ಚ್ 26 ರಂದು ಪ್ರಾರಂಭವಾಗುವ ಪಂದ್ಯಾವಳಿಗೆ ಅಧಿಕಾರಿಗಳು ಅಭ್ಯಾಸ ಸ್ಥಳಗಳನ್ನು ನಿಗದಿ ಮಾಡಿದ್ದಾರೆ. ಉಪನಗರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಸಿಎ ಮೈದಾನ, ಥಾಣೆಯ ಎಂಸಿಎ ಮೈದಾನ, ಡಾ ಡಿವೈ ಪಾಟೀಲ್ ವಿಶ್ವವಿದ್ಯಾಲಯದ ಮೈದಾನ ಮತ್ತು ಫುಟ್‌ಬಾಲ್ ಪಿಚ್ ಜೊತೆಗೆ ಸಿಸಿಐ (ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ) ಮತ್ತು ಘನ್ಸೋಲಿಯ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಮೈದಾನವನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಮೇ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ನಡುವೆ ಉದ್ಘಾಟನಾ ಪಂದ್ಯದ ಮೂಲಕ ಸರಣಿಗೆ ಚಾಲನೆ ದೊರಕಲಿದೆ. ಮೇ 29 ರಂದು ಅಹಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮಾರ್ಚ್ 8 ರಿಂದ ಆಟಗಾರರು ನಗರಕ್ಕೆ ಬರಲು ಪ್ರಾರಂಭಿಸುವ ಸಾಧ್ಯತೆಯಿದ್ದು, ಐಪಿಎಲ್ ಅನ್ನು ಸುಗಮವಾಗಿ ನಡೆಸಲು ಮಹಾರಾಷ್ಟ್ರ ಸರ್ಕಾರ ಬುಧವಾರ ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ನೊಂದಿಗೆ ದಕ್ಷಿಣ ಮುಂಬೈನಲ್ಲಿ ಸಭೆ ನಡೆಸಿತು.ಸಚಿವರಾದ ಆದಿತ್ಯ ಠಾಕ್ರೆ ಮತ್ತು ಏಕನಾಥ್ ಶಿಂಧೆ, ಎಂಸಿಎ ಮುಖ್ಯಸ್ಥ ವಿಜಯ್ ಪಾಟೀಲ್ ಮತ್ತು ಅಪೆಕ್ಸ್ ಕೌನ್ಸಿಲ್ ಸದಸ್ಯರಾದ ಅಜಿಂಕ್ಯ ನಾಯಕ್ ಮತ್ತು ಅಭಯ್ ಹಡಪ್, ಖಜಾಂಚಿ ಜಗದೀಶ್ ಅಚ್ರೇಕರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಆದಿತ್ಯ ಠಾಕ್ರೆ ಸರಣಿ ಟ್ವೀಟ್‌ಗಳಲ್ಲಿ, ಐಪಿಎಲ್ ನ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು,ಪೊಲೀಸ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ರಾಜ್ಯದ ಉಪಮುಖ್ಯಮಂತ್ರಿ ಶೀಘ್ರದಲ್ಲೇ ಐಪಿಎಲ್‌ನ ಇತರ ಸ್ಥಳವಾದ ಪುಣೆಗೆ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
”ಐಪಿಎಲ್ ಆಟಗಳನ್ನು ವಿದೇಶದಲ್ಲಿ ಆಡುವುದಿಲ್ಲ ಎಂದು ಮಹಾರಾಷ್ಟ್ರಕ್ಕೆ ಖಚಿತಪಡಿಸುತ್ತದೆ. ಇದು ದೇಶಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಆರ್ಥಿಕತೆ, ನೈತಿಕತೆ ಮತ್ತು ಕ್ರಿಕೆಟ್ ಅಭಿಮಾನಿಗಳ ಉತ್ಸಾಹಕ್ಕೆ ದೊಡ್ಡ ಉತ್ತೇಜನವಾಗಿದೆ” ಭಾಗವಹಿಸುವವರು 48 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಲಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.
IPL coming to Maharashtra ensures that the games aren’t played overseas. This is a huge boost for the country, as well as Maharashtra in terms of economy, morale and for the passion of cricket fans.
— Aaditya Thackeray (@AUThackeray) March 2, 2022
ಆಟಗಾರರು ತಮ್ಮ ಬಬಲ್‌ಗಳನ್ನು ಪ್ರವೇಶಿಸುವ ಮೊದಲು 3-5 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ. ಪ್ರತ್ಯೇಕವಾಗಿ, ಭಾಗವಹಿಸುವವರು ಮೂರು ಬಾರಿ ರೂಮ್‌ನಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಾರೆ, ಮೊದಲ ದಿನ, ಎರಡನೇ ದಿನ ಮತ್ತು ಕೊನೆಯ ದಿನ.
ಮೂರು ದಿನಗಳ ಕ್ವಾರಂಟೈನ್‌ನ ಸಂದರ್ಭದಲ್ಲಿ, ಭಾಗವಹಿಸುವವರು ಪ್ರತಿದಿನ ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ಎಲ್ಲಾ ಮೂರು ಫಲಿತಾಂಶಗಳು ನಕಾರಾತ್ಮಕವಾಗಿದ್ದರೆ, ಅವರು ಕ್ವಾರಂಟೈನ್‌ನಿಂದ ನಿರ್ಗಮಿಸಲು ಮತ್ತು ತಂಡದ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗುತ್ತದೆ.
ಮುಂಬೈನಲ್ಲಿ 10 ಐಷಾರಾಮಿ ಹೋಟೆಲ್‌ಗಳನ್ನು ಗುರುತಿಸಿದ್ದರೆ, ಪುಣೆಯಲ್ಲಿ ಎರಡು ಹೋಟೆಲ್‌ಗಳನ್ನು ಐಪಿಎಲ್ ಗಾಗಿ ಸಿದ್ಧವಾಗಿಡಲಾಗುತ್ತದೆ.
ವಿಶೇಷವಾದ ಗ್ರೀನ್ ಕಾರಿಡಾರ್” ಮೂಲಕ ತಂಡಗಳು ಅಭ್ಯಾಸಕ್ಕಾಗಿ ಅಥವಾ ಪಂದ್ಯ ನಡೆಯುವ ಸ್ಥಳಗಳನ್ನು ತಲುಪಲಿವೆ ಮತ್ತು ತಂಡಗಳು ದಕ್ಷಿಣ ಮುಂಬೈನಿಂದ ನವಿ ಮುಂಬೈ ಅಥವಾ ಥಾಣೆಗೆ ಹೋಗಲು ಪೂರ್ವ ಫ್ರೀವೇ ಅನ್ನು ಬಳಸಲು ಅನುಮತಿಸಲಾಗುವುದು ಎಂದು ತಿಳಿದುಬಂದಿದೆ.
ಪಂದ್ಯಗಳು ನಡೆಯುತ್ತಿರುವ ನಗರಗಳನ್ನು ”ಸುಂದರಗೊಳಿಸಲು” ನಾಗರಿಕ ಅಧಿಕಾರಿಗಳನ್ನು ಕೇಳಲಾಗಿದೆ. 25 ರಷ್ಟು ಜನಸಂದಣಿಯನ್ನು ಪಂದ್ಯಗಳಲ್ಲಿ ಅನುಮತಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರೊಬ್ಬರು ಹೇಳಿದ್ದಾರೆ.
ಐಪಿಎಲ್‌ನ ಲೀಗ್ ಹಂತವನ್ನು ಮುಂಬೈ ಮತ್ತು ಪುಣೆಯಲ್ಲಿ ನಡೆಸಲಾಗುತ್ತಿದೆ. ವಾಂಖೆಡೆ ಸ್ಟೇಡಿಯಂ ಮತ್ತು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಲಾ 20 ಪಂದ್ಯಗಳನ್ನು ಆಯೋಜಿಸಿದರೆ, ಡಿವೈ ಪಾಟೀಲ್ ಕ್ರೀಡಾಂಗಣ ಮತ್ತು ಪುಣೆಯ ಗಹುಂಜೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ 15 ಪಂದ್ಯಗಳನ್ನು ಆಯೋಜಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.