ಇರಾನ್‌ನ ಪರಮಾಣು ಘಟಕ ಮೇಲೆ ದಾಳಿ : ಇಸ್ರೇಲ್ ವಿರುದ್ಧ ಗುಟುರು ಹಾಕಿದ ಇರಾನ್
Team Udayavani, Apr 12, 2021, 11:50 PM IST
ದುಬೈ: ಟೆಹ್ರಾನ್ ಸಮೀಪದ ನತಾನ್l ಭೂಗತ ಪರಮಾಣು ಅಭಿವೃದ್ಧಿ ಘಟಕದ ಮೇಲೆ ದಾಳಿ ನಡೆಸಿದ ಇಸ್ರೇಲ್ ವಿರುದ್ಧ ಇರಾನ್ ಕೆಂಡಾ ಮಂಡಲವಾಗಿದೆ. ಇದಕ್ಕೆ ಶೀಘ್ರವೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ವಿದೇಶಾಂಗ ಇಲಾಖೆ ಎಚ್ಚರಿಸಿದೆ.
“ಇದು ಇಸ್ರೇಲ್ ನಡೆಸಿದ ಪರಮಾಣು ಭಯೋತ್ಪಾದನೆ. ನತಾನ್lನಲ್ಲಿನ ಯುರೇನಿಯಂ ಘಟಕದ ಕೇಂದ್ರಾಪಗಾಮಿ ವ್ಯವಸ್ಥೆಗೆ ಇಸ್ರೇಲ್ ಸೇನೆಯ ದಾಳಿಯಿಂದ ಹಾನಿಯಾಗಿದೆ. ಇದರಿಂದ ಭಾನುವಾರ ಇಡೀ ದಿನ ವಿದ್ಯುತ್ ಇಲ್ಲದೆ ಭಾರೀ ತೊಂದರೆಯಾಗಿದೆ. ಇರಾನ್ ಇದಕ್ಕೆ ತನ್ನದೇ ದಾರಿಯಲ್ಲಿ ಪ್ರತ್ಯುತ್ತರ ನೀಡಲಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯೀದ್ ಖಾಟಿ ಭಾ ದೇಹ್ ಎಚ್ಚರಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ರನ್ನು ಭಾನುವಾರ ಭೇಟಿಯಾಗಿ, ಜಾಗತಿಕ ರಾಷ್ಟ್ರಗಳ ಪರಮಾಣು ಒಪ್ಪಂದಗಳ ಸ್ಥಗಿತಕ್ಕೆ ಶಪಥ ತೊಟ್ಟ ಬೆನ್ನಲ್ಲೇ ಇಸ್ರೇಲ್ ಸೇನೆ ಈ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ. ಆದರೆ, ಇಸ್ರೇಲ್ ಇದುವರೆಗೂ ಈ ದಾಳಿಯ ಬಗ್ಗೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ :ರಫೇಲ್ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿಕೆ ಆರೋಪ : ವಿಚಾರಣೆಗೆ ಸುಪ್ರೀಂ ಅಸ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.