ಪತಿಯಿಂದ ದೂರ ಇರಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರ್ಧಾರ ?
Team Udayavani, Aug 31, 2021, 8:00 PM IST
ಮುಂಬೈ : ಅಶ್ಲೀಲ ಚಿತ್ರ ನಿರ್ಮಾಣ ಆರೋಪದಲ್ಲಿ ಬಂಧನದಲ್ಲಿರುವ ಉದ್ಯಮಿ ರಾಜ್ ಕುಂದ್ರಾರಿಂದ ಪ್ರತ್ಯೇಕವಾಗಿ ಇದ್ದು, ಹೊಸ ಜೀವನ ಕಟ್ಟಿಕೊಳ್ಳಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಬಾಲಿವುಡ್ನಲ್ಲಿ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ವೆಬ್ಸೈಟ್ ಒಂದರಲ್ಲಿ ಶಿಲ್ಪಾ ಶೆಟ್ಟಿ ಅವರ ಆಪ್ತ ಸ್ನೇಹಿತೆಯೊಬ್ಬರನ್ನು ಉಲ್ಲೇಖೀಸಿ ವರದಿ ಪ್ರಕಟವಾಗಿದೆ. ಅದರ ಪ್ರಕಾರ ಶಿಲ್ಪಾ ಶೆಟ್ಟಿಯವರಿಗೆ ಪತಿ ರಾಜ್ ಕುಂದ್ರಾರ ವಹಿವಾಟುಗಳು ಗೊತ್ತಿರಲಿಲ್ಲ. ಬೆಲೆಬಾಳುವ ವಜ್ರಗಳು ಮತ್ತು ಇತರ ಅದ್ಧೂರಿ ಉಡುಗೊರೆಗಳು ಬರುತ್ತಿದ್ದವು. ಜು.19ರಂದು ರಾಜ್ ಕುಂದ್ರಾ ಬಂಧನದ ಬಳಿಕ ಉಂಟಾದ ಆಘಾತದ ಹಿನ್ನೆಲೆಯಲ್ಲಿ ಪತಿ ಅಕ್ರಮ ವಹಿವಾಟಿನ ಮೂಲಕ ಸಂಗ್ರಹಿಸಿದ ಮೊತ್ತವನ್ನು ಬಳಕೆ ಮಾಡದಿರಲು ಮುಂದಾಗಿದ್ದಾರೆ ಮತ್ತು ಮಕ್ಕಳ ಜತೆಗೆ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ.
ಇದನ್ನೂ ಓದಿ :ತೇಜ್ಪಾಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಸೆಪ್ಟೆಂಬರ್ 20ಕ್ಕೆ ವಿಚಾರಣೆ ಮುಂದೂಡಿಕೆ
ಸಿನಿಮಾ ನಟಿಯಾಗಿ ಮತ್ತು ಕೆಲವೊಂದು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಅವರಿಗೆ ಉತ್ತಮ ರೀತಿಯಲ್ಲಿ ಸಂಭಾವನೆ ಬರುತ್ತಿವೆ ಎಂದೂ ಸ್ನೇಹಿತೆ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.