Lakshadweep ವಿವಾದ ಎಬ್ಬಿಸಿದ ಮಾಲ್ದೀವ್ಸ್ ಸರಕಾರಕ್ಕೇ ಕುತ್ತು?
ಮುಯಿಜ್ಜು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ವಿಪಕ್ಷಗಳ ಚಿಂತನೆ
Team Udayavani, Jan 10, 2024, 6:13 AM IST
ಹೊಸದಿಲ್ಲಿ: ವಿನಾಕಾರಣ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳ ಮಾಡಿದ ಮಾಲ್ದೀವ್ಸ್ ಸಂಪೂರ್ಣವಾಗಿ ಇಕ್ಕಟ್ಟಿಗೆ ಸಿಲುಕಿದೆ. ಆಡಳಿತಾ ರೂಢ ಪಿಎನ್‌ಸಿ ನಾಯಕ, ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ವಿರುದ್ಧ ಅಲ್ಲಿನ ವಿಪಕ್ಷಗಳು ತಿರುಗಿಬಿದ್ದಿದ್ದು, ಸರಕಾರದ ವಿರುದ್ಧ ಅವಿ ಶ್ವಾಸ ಗೊತ್ತು ವಳಿ ಮಂಡಿ ಸಲು ಮುಂದಾಗಿವೆ.
ಮುಯಿಜ್ಜು ಸರಕಾರ ದೇಶವನ್ನು ಅತಂತ್ರಗೊಳಿಸುತ್ತಿದೆ, ಅದನ್ನು ಅಧಿಕಾರದಿಂದ ಕಿತ್ತೂಗೆಯಲು ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದು ವಿಪಕ್ಷ ಎಂಡಿಪಿ ನಾಯಕ ಅಜೀಮ್ ಅಲಿ ಆಗ್ರಹಿಸಿದ್ದಾರೆ. “ಎಂಡಿಪಿ ಪಕ್ಷ ದೇಶದ ವಿದೇಶಾಂಗ ನೀತಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಬದ್ಧವಾಗಿದೆ. ಯಾವುದೇ ನೆರೆಯ ದೇಶವನ್ನು ಏಕಾಂಗಿ ಮಾಡುವುದಕ್ಕೆ ನಾವು ಸಿದ್ಧವಿಲ್ಲ. ಅಧ್ಯಕ್ಷ ಮುಯಿಜ್ಜುರನ್ನು ಕಿತ್ತೂಗೆಯುವುದಕ್ಕೆ ನೀವು ಸಿದ್ಧವಿದ್ದೀರಾ? ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಾ’ ಎಂದು ಸ್ವಪಕ್ಷೀಯರನ್ನು ಅಲಿ ಪ್ರಶ್ನಿಸಿದ್ದಾರೆ.
ಮಾಲ್ದೀವ್ಸ್‌ನ ಪದಚ್ಯುತ ಸಚಿವರು ಜನಾಂ ಗೀಯ ಭೇದವನ್ನುಂಟು ಮಾಡುವ ಹೇಳಿಕೆ ನೀಡಿ ದ್ದಾರೆ. ಭಾರತೀಯ ಜನತೆಗೆ ಮಾಲ್ದೀವ್ಸ್ ಸರಕಾರ ಅಧಿಕೃತವಾಗಿ ಕ್ಷಮೆ ಕೇಳಬೇಕು ಎಂದು ಮಾಲ್ದೀವ್ಸ್ ಮಾಜಿ ಸ್ಪೀಕರ್ ಇವಾ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಸರಕಾರದ ವಿರುದ್ಧ ಮುಗಿಬಿದ್ದ ಪ್ರವಾಸೋದ್ಯಮ ಒಕ್ಕೂಟ
ಸಚಿವರ ಕೀಳು ಹೇಳಿಕೆಯು ತಮ್ಮ ಉದ್ಯಮಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡುತ್ತಲೇ ಮಾಲ್ದೀವ್ಸ್‌ನ ಪ್ರವಾಸೋದ್ಯಮ ಒಕ್ಕೂಟ ಅಲ್ಲಿನ ಸರಕಾರದ ವಿರುದ್ಧವೇ ಮುಗಿಬಿದ್ದಿದೆ. “ಭಾರತವು ನಮ್ಮ ಪ್ರವಾಸೋದ್ಯಮಕ್ಕೆ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ. ಕೊರೊನಾ ಕಾಲದಲ್ಲೂ ನಾವು ಮತ್ತೆ ಚೇತರಿಕೆ ಕಾಣಲು ಭಾರತೀಯರೇ ಕಾರಣ. ಅಂತಹ ದೇಶದ ಬಗ್ಗೆ, ಅದರ ನಾಯಕರ ಬಗ್ಗೆ ನಮ್ಮ ಸರಕಾರದ ಉನ್ನತ ಹುದ್ದೆಯಲ್ಲಿರುವವರು ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಮಾಲ್ದೀವ್ಸ್ ಪ್ರವಾಸೋದ್ಯಮಗಳ ಸಂಘ ಹೇಳಿದೆ.
ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಖಾಸಗಿ ಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಾವು ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ವಿಟ್ಟುಕೊಳ್ಳಬೇಕು. ಸಮಯಕ್ಕೆ ತಕ್ಕಂತೆ ನಾವು ವರ್ತಿಸಬೇಕು, ನಾವು ನೆರೆಯ ವರನ್ನು ಬದಲಿಸಲು ಸಾಧ್ಯವಿಲ್ಲ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಮೋದಿ ನಮ್ಮ ದೇಶದ ಪ್ರಧಾನಿ. ಇತರ ಯಾವುದೇ ದೇಶದ, ಯಾವುದೇ ಸ್ಥಾನದಲ್ಲಿರುವ ವ್ಯಕ್ತಿ, ನಮ್ಮ ದೇಶದ ಪ್ರಧಾನಿ ಮೇಲೆ ಕೀಳು ಹೇಳಿಕೆ ನೀಡಿ ದರೆ ನಾವದನ್ನು ಸಹಿಸಲ್ಲ. ನಮ್ಮ ದೇಶದ ಹೊರಗಿನ ವ್ಯಕ್ತಿಗಳು, ದೇಶದ ಪ್ರಧಾನಿ ವಿರುದ್ಧ ವಾಗಿ ಯಾವುದೇ ಮಾತುಗಳನ್ನಾಡಿ ದರೂ ನಾವು ಸಮ್ಮತಿಸುವುದಿಲ್ಲ.
ಶರದ್ ಪವಾರ್,ಎನ್‌ಸಿಪಿ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.