ಬದಲಾದೀತೇ ಆಡಳಿತ ಪರ್ಯಾಯ ಸಂಪ್ರದಾಯ?


Team Udayavani, Mar 1, 2021, 6:45 AM IST

ಬದಲಾದೀತೇ ಆಡಳಿತ ಪರ್ಯಾಯ ಸಂಪ್ರದಾಯ?

“ದೇವರ ಸ್ವಂತ ನಾಡು’ ಎಂದೇ ಕರೆಯಲ್ಪಡುವ ಕೇರಳದಲ್ಲೀಗ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಾಗತೊಡಗಿದೆ. ಪಶ್ಚಿಮ ಬಂಗಾಲ, ತ್ರಿಪುರಾದ ಬಳಿಕ ಕಮ್ಯೂನಿಸ್ಟರ ಪಾಲಿಗೆ ಭದ್ರಕೋಟೆ ಎನಿಸಿರುವ ಕೇರಳದಲ್ಲಿ ಪ್ರತೀ ಐದು ವರ್ಷಗಳಿಗೊಮ್ಮೆ ಸಿಪಿಐ(ಎಂ)ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ನಡುವೆ ಅಧಿಕಾರ ಅದಲುಬದಲಾಗುವುದು ಸಾಮಾನ್ಯ ಪ್ರಕ್ರಿಯೆ. ಪ್ರತೀ ವಿಧಾನಸಭೆ ಚುನಾವಣೆಯಲ್ಲಿಯೂ ಈ ಎರಡು ಮೈತ್ರಿಕೂಟಗಳ ಸಂಖ್ಯಾಬಲ ಒಂದಿಷ್ಟು ಏರಿಳಿತ ಕಾಣುವುದನ್ನು ಬಿಟ್ಟರೆ ಆಡಳಿತ ಮಾತ್ರ ಸಂಗೀತ ಕುರ್ಚಿಯಂತೆ ಅತ್ತಿಂದಿತ್ತ ಬದಲಾಗುತ್ತಿರುತ್ತದೆ. ಈ ಬಾರಿಯೂ ಅದೇ ಸಾಧ್ಯತೆಯ ಬಗೆಗೆ ರಾಜಕೀಯ ವಿಶ್ಲೇಷಕರು ಬೆಟ್ಟು ಮಾಡುತ್ತಿ ರುವರಾದರೂ ಚುನಾವಣ ಪೂರ್ವ ಸಮೀಕ್ಷೆ ಈ ಬಾರಿ ಎಲ್‌ಡಿಎಫ್ ಮರಳಿ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ ಈಗಲೇ ಇಂತಹ ನಿರ್ಧಾರಕ್ಕೆ ಬರುವುದು ಕಷ್ಟಸಾಧ್ಯ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರಕಾರ ಐದು ವರ್ಷಗಳ ಆಡಳಿತಾವಧಿಯನ್ನು ಪೂರೈಸುತ್ತಿದೆ. ರಾಜಕೀಯ ಆರೋಪಗಳು, ಭಾರೀ ಹಗರಣ ಗಳು ಸದ್ದು ಮಾಡಿದುವಾದರೂ ಪಿಣರಾಯಿ ವಿಜಯನ್‌ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಪರಿಸ್ಥಿತಿ ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ದಶಕಗಳಿಂದ ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ದ್ವೇಷ ಸಾಧನೆಯಲ್ಲಿಯೂ ಪೈಪೋಟಿ ನಡೆಯುತ್ತಿರುವುದು ರಹಸ್ಯದ ವಿಚಾರವೇನಲ್ಲ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನೂತನವಾಗಿ ಸೇರ್ಪಡೆಯಾದುದು ಎಡ-ಬಲ ಸೈದ್ಧಾಂತಿಕ ಸಂಘರ್ಷ. ಈ ಎಲ್ಲ ದ್ವೇಷ ಸಾಧನೆ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ರಾಜ್ಯದ ಶಾಂತಿಗೆ ಪದೇ ಪದೆ ಭಂಗ ತರುತ್ತಿವೆ. ನೇರವಾಗಿ ಹೇಳುವುದಾದರೆ ಕೇರಳದ ಮಟ್ಟಿಗೆ ಈ ಹಿಂಸಾಚಾರ, ಗಲಭೆ ಮಾಮೂಲು. ಇದು ರಾಜಕೀಯ ಪಕ್ಷಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಒಂದು ವ್ಯವಸ್ಥಿತ ವೇದಿಕೆಯಾಗಿ ಮಾರ್ಪಟ್ಟಿರುವುದಂತೂ ಸುಳ್ಳಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 140 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಶೇ. 41.9ರಷ್ಟು ಮತಗಳನ್ನು ಪಡೆದಿದ್ದ ಎಲ್‌ಡಿಎಫ್ 91 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಆಗ ಆಡಳಿತದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ 47 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದರ ಮತಗಳಿಕೆ ಪ್ರಮಾಣ ಶೇ. 32.6. ಇನ್ನು ಬಿಜೆಪಿ ಶೇ. 12.1 ಮತಗಳನ್ನು ಪಡೆಯಿತಾದರೂ ಇದಕ್ಕೆ ದಕ್ಕಿದ್ದು ಕೇವಲ ಒಂದು ಸ್ಥಾನ. ಇನ್ನೊಂದು ಸ್ಥಾನ ಪಕ್ಷೇತರರ ಪಾಲಾಗಿತ್ತು.

ಎಲ್‌ಡಿಎಫ್ಗೆ ಜನಬಲ?: ಪಿಣರಾಯಿ ವಿಜಯನ್‌ ಅಧಿಕಾರಾವಧಿಯಲ್ಲಿ ರಾಜ್ಯ ಹಲವಾರು ಹಗರಣಗಳಿಗೆ ಸಾಕ್ಷಿಯಾಯಿತು. ಚಿನ್ನ ಕಳ್ಳಸಾಗಣೆ ಹಗರಣದಲ್ಲಿ ಸ್ವತಃ ಪಿಣರಾಯಿ ಅವರ ಹೆಸರೇ ಕೇಳಿಬಂದಿತು. ಅವರ ರಾಜೀನಾಮೆಗಾಗಿ ವಿಪಕ್ಷ ಯುಡಿಎಫ್ ಮತ್ತು ಬಿಜೆಪಿಯಿಂದ ಭಾರೀ ಆಗ್ರಹಗಳು ಕೇಳಿಬಂದವು. ಅಲ್ಲದೆ ಈ ಅವಧಿಯಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪನ ಸನ್ನಿಧಾನಕ್ಕೆ ಎಲ್ಲ ವಯೋಮಿತಿಯ ಮಹಿಳೆಯರ ಪ್ರವೇಶದ ವಿಷಯವಾಗಿ ಭಾರೀ ರಾದ್ಧಾಂತವೇ ನಡೆದುಹೋಯಿತು. ಈ ವಿಷಯದಲ್ಲಿ ಸರಕಾರ ಕೈಗೊಂಡ ಕೆಲವೊಂದು ಗೊಂದಲದ ನಿಲುವುಗಳು ತೀವ್ರ ವಿವಾದಕ್ಕೀ ಡಾಯಿತಲ್ಲದೆ ಆಸ್ತಿಕರ ಆಕ್ರೋಶಕ್ಕೂ ಕಾರಣವಾಯಿತು. ಇನ್ನು ದೇವಸ್ಥಾನಗಳಲ್ಲಿನ ಧಾರ್ಮಿಕ ಆಚರಣೆಗಳಲ್ಲಿ ಆನೆಗಳ ಬಳಕೆ ವಿಷಯದಲ್ಲೂ ಒಂದಿಷ್ಟು ಗೊಂದಲಗಳು ಸೃಷ್ಟಿಯಾದವು. ಈ ವಿಚಾರದಲ್ಲೂ ಎಲ್‌ಡಿಎಫ್ ಸರಕಾರ ಹಿಂದೂ ಸಮುದಾ ಯದವರ ವಿರೋಧವನ್ನು ಎದುರಿಸಬೇಕಾಯಿತು. ಇವೆಲ್ಲದರ ಪರಿಣಾಮ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಕೊಂಚ ಹಿನ್ನಡೆ ಅನುಭವಿಸುವಂತಾಯಿತು. ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ಪಂಚಾಯತ್‌ ಚುನಾವಣೆಗಳಲ್ಲಿ ಎಲ್‌ಡಿಎಫ್ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಸಫ‌ಲವಾಗಿದೆ. ಇದು ಮೈತ್ರಿಕೂಟದಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ. ಸದ್ಯ ಎಲ್‌ಡಿಎಫ್ನಲ್ಲಿ ಒಟ್ಟು 14 ಪಕ್ಷಗಳಿವೆ. ರಾಷ್ಟ್ರೀಯ ಮಟ್ಟದಲ್ಲಿ ಎಡಪಕ್ಷಗಳು ಕೊಂಚ ಹಿನ್ನೆಲೆಗೆ ಸರಿದಿರುವುದರಿಂದ ರಾಜ್ಯ ಮಟ್ಟದ ನಾಯಕರೇ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಯುಡಿಎಫ್ಗೆ ರಾಹುಲ್‌ ಬಲ: ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಭಾರೀ ರಣೋತ್ಸಾಹದೊಂದಿಗೆ ಎದುರಿಸಲು ಸಜ್ಜಾಗಿದೆ. ಕಳೆದ ಚುನಾವಣೆಯಲ್ಲಿನ ಹಿನ್ನಡೆ, ಪಕ್ಷದ ನಾಯಕರ ನಡುವಣ ವೈಮನಸ್ಸು ಮತ್ತು ಮೈತ್ರಿಕೂಟದಲ್ಲಿನ ಮಿತ್ರ ಪಕ್ಷಗಳ ಗೊಂದಲಗಳ ನಡುವೆಯೇ ಯುಡಿಎಫ್ ಚುನಾವಣ ಕಣಕ್ಕೆ ಧುಮುಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ವಯನಾಡು ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಣಕ್ಕಿಳಿದು ಜಯಶಾಲಿಯಾಗುವ ಮೂಲಕ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಕಳೆಯನ್ನು ತಂದಿತ್ತಿದ್ದಾರೆ. ರಾಹುಲ್‌ ಗಾಂಧಿ ಅವರ ಸ್ಪರ್ಧೆಯೇ ಯುಡಿಎಫ್ಗೆ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆಯನ್ನು ತಂದುಕೊಟ್ಟಿತ್ತು. ರಾಹುಲ್‌ ಗಾಂಧಿ ಅವರೂ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಈಗಾಗಲೇ ಹಲವಾರು ಬಾರಿ ತನ್ನ ಕ್ಷೇತ್ರವಾದ ವಯನಾಡು ಮಾತ್ರವಲ್ಲದೆ ಕೇರಳದ ವಿವಿಧೆಡೆಗೆ ಭೇಟಿ ನೀಡಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿನ ಭೇಟಿಯ ವೇಳೆಯಲ್ಲಂತೂ ಉತ್ತರ-ದಕ್ಷಿಣ ಭಾರತದ ವಿಚಾರವಾಗಿ ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಯಿತಾದರೂ ಇದು ದಕ್ಷಿಣ ಭಾರತದ ಅದರಲ್ಲೂ ಕೇರಳದ ಮತದಾರರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಎಂದೇ ಬಿಂಬಿತವಾಗಿದೆ. ಸದ್ಯ ಯುಡಿಎಫ್ನಲ್ಲಿ ಮುಸ್ಲಿಂ ಲೀಗ್‌ ಸಹಿತ 5 ಪಕ್ಷಗಳು ಗುರುತಿಸಿಕೊಂಡಿವೆ.

ವಿಧಾನಸಭೆಯಲ್ಲಿ ಬಿಜೆಪಿ ಬಲ ವೃದ್ಧಿ?: ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಇನ್ನೂ ಅಂಬೆಗಾಲಿ ಡುತ್ತಿರುವ ಶಿಶು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಮೈತ್ರಿಕೂಟಗಳಿಗೆ ಸಡ್ಡು ಹೊಡೆಯುವ ನಿರೀಕ್ಷೆಯನ್ನು ಬಿಜೆಪಿ ಮೂಡಿಸಿ ತ್ತಾದರೂ ಅದು ಯಶ ಕಂಡಿರಲಿಲ್ಲ. ಆದರೆ ವಿಧಾನಸಭೆಯಲ್ಲಿ ಖಾತೆ ತೆರೆಯುವ ಮೂಲಕ ಕಾರ್ಯಕರ್ತರಲ್ಲಿ ಹೊಸಹುಮ್ಮಸ್ಸು ಮೂಡುವಂತೆ ಮಾಡಿತ್ತು. 2016ರ ವಿಧಾನಸಭೆ ಚುನಾವಣೆ ಆದಿಯಾಗಿ ಆ ಬಳಿಕ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆ ಗಳಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಾಗ ದಿದ್ದರೂ ಅದರ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಸಾಗಿರುವುದು ರಾಜ್ಯದಲ್ಲಿ ಪಕ್ಷ ನಿಧಾನಗತಿಯಲ್ಲಿ ಬೇರೂರು ತ್ತಿರುವುದರ ಸಂಕೇತ ಎಂದೇ ಪರಿಗಣಿಸಲಾಗಿದೆ. ಇತ್ತೀಚಿನ ಪಂಚಾಯತ್‌ ಚುನಾವ ಣೆಯಲ್ಲೂ ಕೆಲವೊಂದು ಪಂಚಾ ಯತ್‌ ಮತ್ತು ಕಾರ್ಪೊರೇಶನ್‌ಗಳನ್ನು ತನ್ನ ತೆಕ್ಕೆಗೆ ಸೆಳೆದು ಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ನೇತೃ ತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಸದ್ಯ 5 ಪಕ್ಷಗಳಿವೆ.

ಪಿ.ಸಿ.ಜಾರ್ಜ್‌ ನೇತೃತ್ವದ ಕೇರಳ ಜನತಾ ಪ್ರಕಾಶಂ ಪಾರ್ಟಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಈಗಾಗಲೇ “ಮೆಟ್ರೋ ಮ್ಯಾನ್‌’ ಖ್ಯಾತಿಯ ಇ.ಶ್ರೀಧರನ್‌ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿರುವ ಬಿಜೆಪಿ, ಪಿ.ಟಿ. ಉಷಾ ಅವರಿಗೂ ಗಾಳ ಹಾಕುತ್ತಿದೆ. ಇದಲ್ಲದೆ ಕೆಲವೊಂದು ಸಿನಿ ನಟರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿ ಆರೆಸ್ಸೆಸ್‌ ಸಕ್ರಿಯವಾಗಿರುವುದರಿಂದ ಆ ಮೂಲಕ ತಳಮಟ್ಟದಿಂದ ಕಾರ್ಯಕರ್ತರನ್ನು ಸಂಫ‌ಟಿಸುವ ಪ್ರಯತ್ನಗಳು ನಿರಂತರವಾಗಿ ನಡೆದುಕೊಂಡು ಬಂದಿವೆಯಾದರೂ ಅದು ನಿರೀಕ್ಷಿತ ಫ‌ಲ ನೀಡಿಲ್ಲ. ಕೇರಳ ಉಗ್ರರ ನೆಲೆಯಾಗಿ ಮಾರ್ಪಡುತ್ತಿರುವುದು, ರಾಜ್ಯ ಸರಕಾರದ ಹಿಂದೂ ವಿರೋಧಿ ನಿಲುವು, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರ, ಲವ್‌ ಜೆಹಾದ್‌, ಗೋಹತ್ಯೆ ನಿಷೇಧ ಮತ್ತಿತರ ವಿಷಯಗಳನ್ನು ಮುಂದಿಟ್ಟು ಬಿಜೆಪಿ ಈ ಬಾರಿಯ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಪಕ್ಷದ ರಾಷ್ಟ್ರೀಯ ಮುಖಂಡರೂ ರಾಜ್ಯಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ತನ್ನ ಸ್ಥಾನವನ್ನು ವೃದ್ಧಿಸಿಕೊಳ್ಳುವಲ್ಲಿ ಸಫ‌ಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಾರೆ ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ಕುತೂಹಲ ಕೆರಳಿಸಿದೆ. ಪ್ರತೀ ಬಾರಿಯೂ ಎರಡು ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಏರ್ಪಡುತ್ತಿದ್ದರೆ ಈ ಬಾರಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳೂ ಪ್ರಬಲ ಸ್ಪರ್ಧೆಯೊಡ್ಡುವ ಸಾಧ್ಯತೆಗಳಿವೆ. ಇದು ಪಕ್ಷಗಳ ಮತಗಳಿಕೆ ಪ್ರಮಾಣದ ಮೇಲೆ ಪರಿಣಾಮ ಬೀರಲಿದ್ದು ಅಂತಿಮ ಫ‌ಲಿತಾಂಶವನ್ನು ತಲೆಕೆಳಗೆ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಅಷ್ಟು ಮಾತ್ರವಲ್ಲದೆ ಈ ಬಾರಿ ಬಿಜೆಪಿ ರಾಷ್ಟ್ರೀಯ ನಾಯಕರೇ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ರಾಜಕೀಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದ್ದಾರೆ.

– ಹರೀಶ್‌ ಕೆ.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.