ನದಿಯ ಮೂಲಕ ಹರಿದು ಬಂತೇ ವೈರಸ್‌?

Team Udayavani, May 24, 2020, 7:40 PM IST

ನದಿಯ ಮೂಲಕ ಹರಿದು ಬಂತೇ ವೈರಸ್‌?

ಟ್ರೆಸ್‌ ಯುನಿಡೋಸ್‌: ಬ್ರೆಜಿಲ್‌ನ ಅಮೆಜಾನ್‌ ಮಳೆಕಾಡಿನಲ್ಲಿ ದೇಶೀ ಹಳ್ಳಿ ಎನಿಸಿರುವ ಟ್ರೆಸ್‌ ಯುನಿಡೋಸ್‌ಗೆ ಈಗ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಐಸೊಲೇಶನ್‌ ಮೂಲಕ ಈ ಹಳ್ಳಿಯನ್ನು ರಕ್ಷಿಸುವ ನಿರೀಕ್ಷೆ ಇತ್ತಾದರೂ ಅಲ್ಲಿಗೆ ವೈರಸ್‌ ಪ್ರವೇಶಿಸಿದೆ.

ಟ್ರೆಸ್‌ ಯುನಿಡೋಸ್‌ ಗ್ರಾಮವನ್ನು ಅಮೆಜಾನ್‌ನ ಅತಿದೊಡ್ಡ ನಗರ ಮಿನೌಸ್‌ಗೆ ರಿಯೋ ನಿಗ್ರೋ ನದಿಯ ಮೂಲಕ ಸಂಪರ್ಕಿಸಬಹುದಾಗಿದೆ. ದೋಣಿಯಲ್ಲಿ ಸಂಚರಿಸಿದರೆ ಐದು ತಾಸಿನ ದಾರಿ. ಈ ಹಳ್ಳಿಯ ಜನರ ಜೀವನದಿಯಾದ ರಿಯೋ ನಿಗ್ರೋ ಈಗ ರೋಗ ವಾಹಕವಾಗಿಯೂ ಪರಿಣಮಿಸಿದೆ.

ರಿಯೋ ನಿಗ್ರೋ ನದಿಪಾತ್ರದ ಹಲವು ಹಳ್ಳಿಗಳಲ್ಲಿ ಕೋವಿಡ್‌ ಸಾವು-ನೋವುಗಳು ವರದಿಯಾಗಿವೆ. ಕಂಬೆಬಾ ಗ್ರಾಮದ ಮುಖಂಡ ವಾಲೆಮಿರ್‌ ಡ ಸಿಲ್ವ ಅವರ ಪ್ರಕಾರ, ವೈರಾಣು ಸದ್ದಿಲ್ಲದೆ ಬಂದಿದೆ. ಗಾಳಿಯಲ್ಲೇ ತೇಲಿ ಬಂದಂತೆ ಭಾಸವಾಗುತ್ತಿದೆ. ಈ ವೈರಾಣು ವಿಶ್ವಾಸಘಾತಕವಾಗಿದೆ! ಜನರು ಕಾಯಿಲೆ ಬೀಳಲಾರಂಭಿಸಿದರು. ತೀವ್ರ ಚಳಿಯಿಂದ ಹೀಗಾಗುತ್ತಿದೆ ಎಂದು ಭಾವಿಸಿದ್ದೆವು. ಆದರೆ, ಹಲವರ ಸ್ಥಿತಿ ಚಿಂತಾಜನಕಗೊಂಡಿತು. ದೇವರ ದಯ, ಮಕ್ಕಳಿಗೆ ಅಪಾಯವಾಗಿಲ್ಲ ಎಂದು ನಿಟ್ಟುಸಿರುಬಿಟ್ಟರು.

ಕಂಬೆಬಾ ಹಳ್ಳಿಯಲ್ಲಿ ಸುಮಾರು 35 ಕುಟುಂಬಗಳು ಕೋವಿಡ್‌ ಬಾಧೆಗೊಳಪಟ್ಟಿವೆ. ಅಮೆಜಾನ್‌ ಮಳೆಕಾಡಿನ ಹಲವು ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದ ಹಲವು ಕುಟುಂಬಗಳನ್ನೂ ಕಾಡುತ್ತಿದೆ. ಬ್ರೆಜಿಲ್‌ ದೇಶದಲ್ಲಿ ಮಿನೌಸ್‌ ನಗರ ಕೋವಿಡ್‌ಪೀಡಿತವಾಗಿದೆ. ಇಲ್ಲಿನ ಆಸ್ಪತ್ರೆಗಳ ಐಸಿಯುಗಳು ಭರ್ತಿಯಾಗಿವೆ. ಶ್ಮಶಾನಗಳಲ್ಲಿ ಸ್ಥಳವಿಲ್ಲದೆ ಶವಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಈಗ ನಗರದ ಆಸುಪಾಸಿನ ಗ್ರಾಮಗಳಿಗೂ ಸೋಂಕು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ.

ಸೋಂಕಿನೊಂದಿಗೆ ಭಯವೂ ವ್ಯಾಪಿಸುತ್ತಿದೆ. ಯಾರಲ್ಲಿ ಸೋಂಕು ಇದೆ ಎನ್ನುವುದು ತಿಳಿಯುತ್ತಿಲ್ಲ. ಆರೋಗ್ಯ ಸೇವೆಯೂ ಉತ್ಕೃಷ್ಟ ಮಟ್ಟದ್ದಾಗಿಲ್ಲ. ಹೀಗಾಗಿ, ಈ ಹಳ್ಳಿಗಳ ಜನರಲ್ಲಿ ಭವಿಷ್ಯದ ಕುರಿತು ಆತಂಕ ಮನೆಮಾಡಿದೆ. ಮಿನೌಸ್‌ನಲ್ಲಿರುವ ಫ‌ಂಡಕಾವೋ ಅಮೇಜಾನಿಯಾ ಸಸ್ಟೆನಾrವೆಲ್‌ ಎಂಬ ಎನ್‌ಜಿಒ ಈಗ ಇವರ ನೆರವಿಗೆ ನಿಂತಿದೆ. ಕಂಬೆಬಾ ಗ್ರಾಮಕ್ಕೆ ಗುರುವಾರ 80 ಕೋವಿಡ್‌ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿದೆ. 106 ಜನಸಂಖ್ಯೆಯ ಈ ಹಳ್ಳಿಯಲ್ಲಿ ಈ ಮೊದಲು 13 ಕೋವಿಡ್‌ ಪ್ರಕರಣಗಳಿದ್ದವು. ಈ ಸಲದ ಪರೀಕ್ಷೆಯಲ್ಲಿ ಮೂವರಿಗೆ ಪಾಸಿಟಿವ್‌ ಬಂದಿದೆ. ಹಲವರಿಗೆ ಸೋಂಕಿನ ಲಕ್ಷಣಗಳಿರುವ ಕಾರಣ, ಇಡೀ ಊರಿಗೇ ಹಬ್ಬಿದೆಯೋ ಎನಿಸುತ್ತಿದೆ ಎಂದು ಗ್ರಾಮಸ್ಥರನ್ನು ಪರೀಕ್ಷಿಸಿದ ದಾದಿ ಆತಂಕ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಬಲಿ ಪಡೆಯದೆ ಸೋಂಕು ನಿವಾರಣೆಯಾಗಬೇಕು ಎಂದು ಶ್ರಮಿಸುತ್ತಿದ್ದೇವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದೂರದ ಮಿನೌಸ್‌ ನಗರಕ್ಕೆ ಕರೆದೊಯ್ಯಲು ಸಮಯವಾದರೂ ಸಿಗುತ್ತದೋ ಇಲ್ಲವೋ ಎಂದು ಅನ್ನಿಸುತ್ತಿದೆ ಎಂದರು.

ಬಿಲ್ಗಾರಿಕೆಗೆ ಪ್ರಸಿದ್ಧ
ಕಂಬೆಬಾ ಗ್ರಾಮವು ಬಿಲ್ಗಾರಿಕೆಗೆ ಪ್ರಸಿದ್ಧವಾಗಿದೆ. ಪೆರುವಿನ ಅಮೆಜಾನ್‌ ಕಾಡಿಗೆ ಅಂಟಿಕೊಂಡಂತಿರುವ ಈ ಗ್ರಾಮದ ಇಬ್ಬರು ಬಿಲ್ಗಾರರು ಬ್ರೆಜಿಲ್‌ ರಾಷ್ಟ್ರೀಯ ತಂಡದಲ್ಲಿ ಪಾಲ್ಗೊಂಡು ಪದಕಗಳನ್ನು ಗಳಿಸಿದ್ದಾರೆ.

ಈ ಗ್ರಾಮದಲ್ಲಿ ಕೋವಿಡ್‌ ಸೋಂಕಿತರನ್ನು ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ಕುಡಿಸಿ ಉಪಚರಿಸಲಾಗುತ್ತಿದೆ. ಕಫ‌, ಕೆಮ್ಮು ನಿವಾರಣೆಗಾಗಿ ಶುಂಠಿ ಹಾಗೂ ಲಿಂಬೆಹಣ್ಣು ಬಳಸುತ್ತಿದ್ದಾರೆ.

ಮಿನೌಸ್‌ ನಗರಕ್ಕೆ ಸಮೀಪದಲ್ಲಿರುವ ಹಳ್ಳಿಗಳಲ್ಲಿ ಕೋವಿಡ್‌ ವೈರಸ್‌ ಹರಡುವ ಸಾಧ್ಯತೆ ದಟ್ಟವಾಗಿದೆ. ಕೋವಿಡ್‌ ಪರೀಕ್ಷೆಯಲ್ಲಿ ಬ್ರೆಜಿಲ್‌ ಸಾಕಷ್ಟು ಹಿಂದಿದೆ. ಅಮೆಜಾನ್‌ ಮಳೆಕಾಡಿನ ಹಳ್ಳಿಗಳಲ್ಲಿ ಸವಾಲು ಇನ್ನೂ ಹೆಚ್ಚು. ಕೋವಿಡ್‌ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದರೂ ವಹಿವಾಟನ್ನು ಪುನರಾರಂಭಿಸುವ ಸಿದ್ಧತೆಯಲ್ಲಿರುವ ಬ್ರೆಜಿಲ್‌ ಈಗ ಸೋಂಕು ತಪಾಸಣೆಯನ್ನು ತೀವ್ರಗೊಳಿಸಿದೆ. ಪ್ರಕರಣಗಳು ದೃಢಪಟ್ಟರೆ ಸಾಮಾಜಿಕ ಅಂತರ ಸಹಿತ ಎಲ್ಲ ಕ್ರಮಗಳನ್ನು ಕೈಗೊಂಡು ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಫ‌ಂಡಕಾವೋ ಅಮೇಜಾನಿಯಾ ಸಸ್ಟೆನಾrವೆಲ್‌ ಸಂಸ್ಥೆಯ ಮುಖ್ಯಸ್ಥ ವರ್ಜಿಲಿಯೋ ವಿಯಾನಾ ವಿವರಿಸಿದ್ದಾರೆ.

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.