ನಾಸಾದ “ಜೆಪಿಎಲ್’ ಮಾದರಿ ಇಸ್ರೋ ಅಳವಡಿಕೆ : ಕೇರಳದ ಐಐಎಸ್‌ಟಿ ಜತೆಗೂಡಿ ಸಂಶೋಧನಾ ಚಟುವಟಿಕೆ
Team Udayavani, Mar 26, 2021, 7:30 PM IST
ನವದೆಹಲಿ: ಭಾರತದಲ್ಲಿ ಇಸ್ರೋ, ನಾಸಾದ ಸಹಭಾಗಿತ್ವ ಮಾದರಿ ಅಳವಡಿಸಿಕೊಳ್ಳಲು ಮುಂದಾಗಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ) ಜತೆಗೂಡಿ ಭವಿಷ್ಯದ ಸಂಶೋಧನಾ ಕಕ್ಷೆಯ ಯೋಜನೆ ರೂಪಿಸಲು ಇಸ್ರೋ ಯೋಜನೆ ಸಿದ್ಧಪಡಿಸಿದೆ.
ಭಾರತದ ಐಐಎಸ್‌ಟಿಯು ಅಮೆರಿಕದ ಜೆಪಿಎಲ್‌ನ (ಜೆಟ್ ಪ್ರೊಪುಲ್ಶನ್ ಲ್ಯಾಬೊರೇಟರಿ) ಕಾರ್ಯವಿಧಾನ ಹೋಲುವಂಥ ಸಂಸ್ಥೆ. ಕ್ಯಾಲಿಫೊರ್ನಿಯಾದ ಜೆಪಿಎಲ್, ನಾಸಾದ ಧನ ಸಹಾಯದೊಂದಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳುವಂತೆ, ತಿರುವನಂತಪುರದಲ್ಲಿರುವ ಐಐಎಸ್‌ಟಿ ಕೂಡ ಇಸ್ರೋಗೆ ಪೂರಕವಾಗಿ ಜನ್ಮತಾಳಿದಂಥ ಸಂಸ್ಥೆ. ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆ ಮುನ್ನಡೆಸುತ್ತಿರುವ ಐಐಎಸ್ಟಿ, ಬಾಹ್ಯಾಕಾಶ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನ ಕೇಂದ್ರವೂ ಹೌದು.
ಪ್ರಸ್ತುತ 28 ಬಾಹ್ಯಾಕಾಶ ಸಂಶೋಧನಾ ಯೋಜನೆಗಳನ್ನು ಇಸ್ರೋ ಗುರುತಿಸಿದ್ದು, ಇದರ ಕೆಲವು ಹೊಣೆಗಳನ್ನು ಐಐಎಸ್ಟಿಗೆ ನೀಡಲಿದೆ. ಐಐಎಸ್‌ಟಿ ಸಿಬ್ಬಂದಿ ಅನುಸರಿಸಬೇಕಾದ 2, 3-5 ಮತ್ತು ಏಳೂವರೆ ವರ್ಷದ ಯೋಜನೆಗಳು ಇದರಲ್ಲಿ ಸೇರಿವೆ.
ಇದನ್ನೂ ಓದಿ :ಕೋವಿಡ್ ಮಾರ್ಗಸೂಚಿ-ನೀತಿಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.