ಪ್ಲಾಸ್ಮಾ ಅಧ್ಯಯನಕ್ಕೆ ಇಸ್ರೋ ಹೆಜ್ಜೆ
Team Udayavani, Mar 14, 2021, 7:00 AM IST
ಶ್ರೀಹರಿಕೋಟಾ: ಭೂಮಂಡಲದಲ್ಲಿನ ವಿದ್ಯಮಾನ ಅಧ್ಯಯನಿಸುವ ಸಲುವಾಗಿ ಇಸ್ರೋ ಶುಕ್ರವಾರ ರಾತ್ರಿ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನ ಕೇಂದ್ರದಿಂದ “ಆರ್‌ಎಚ್-560′ ಸಂಶೋಧನ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದೆ.
“ತಟಸ್ಥ ಗಾಳಿಯಲ್ಲಿ ನಿಯಾನ್ ಅನಿಲಗಳ ವರ್ತನೆ ವ್ಯತ್ಯಾಸಗಳು ಮತ್ತು ಪ್ಲಾಸ್ಮಾ ಡೈನಾಮಿಕ್ಸ್‌ನ ಅಧ್ಯಯನಕ್ಕಾಗಿ ಆರ್ಎಚ್-560 ಸೌಂಡಿಂಗ್ ರಾಕೆಟನ್ನು ಹಾರಿಬಿಡಲಾಗಿದೆ’ ಎಂದು ಇಸ್ರೋ ಟ್ವೀಟ್‌ನಲ್ಲಿ ಖಚಿತಪಡಿಸಿದೆ. ಅಲ್ಲದೆ ರಾಕೆಟ್ ಉಡಾವಣೆಯ ಚಿತ್ರಗಳನ್ನೂ ಸಂಸ್ಥೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
“ರೋಹಿಣಿ’ ಸರಣಿಯಲ್ಲಿ 1965ರಿಂದಲೇ ಸೌಂಡಿಂಗ್ ರಾಕೆಟ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಿರಿಮೆ ಇಸ್ರೋದ್ದು. “ಆರ್‌ಎಚ್-200′, “ಆರ್‌ಎಚ್-300 ಎಂಕೆ2′ ಬಳಿಕ ಈಗ “ಆರ್‌ಎಚ್-560ಎಂಕೆ2′ ಹಾರಿ ಬಿಡಲಾಗಿದೆ. 8-100 ಕಿಲೋ ಪೇಲೋಡ್ ಸಾಮರ್ಥ್ಯದ ಈ ರಾಕೆಟ್‌ಗಳು 80ರಿಂದ 475 ಕಿ.ಮೀ.ವರೆಗಿನ ಕಕ್ಷೆ ತಲುಪುವ ಸಾಮರ್ಥ್ಯ ಹೊಂದಿದೆ.
ಉದ್ದೇಶ: ಪ್ಲಾಸ್ಮಾ ಎಂಬುದು ವಾತಾವರಣದಲ್ಲಿ ಹೇರಳವಾಗಿರುವ ಅನಿಲ. ಪ್ಲಾಸ್ಮಾವು ಐಯೋನೈಸೇಷನ್ ಪ್ರಕ್ರಿಯೆಗೆ ಒಳಗಾದಾಗ ಆಕಾಶದಲ್ಲಿ ದೀರ್ಘ ಕಾಲದ ವರೆಗಿನ ವಿದ್ಯುತ್ಕಾಂತೀಯ ಅಲೆಗಳು ಸೃಷ್ಟಿಯಾಗುತ್ತವೆ. ಭೂಮಿಯಿಂದ ಮೇಲೆ ಹೋದಂತೆಲ್ಲಾ ಪ್ಲಾಸ್ಮಾದ ವರ್ತನೆ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನೂ ಅರಿಯುವ ಉದ್ದೇಶವನ್ನು ಈ ಅಧ್ಯಯನ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.