ಪದಕಗಳೆಲ್ಲ ಭಾರತದ ವನಿತೆಯರ ಪಾಲು : ಚಿಂಕಿ ಯಾದವ್, ಪ್ರತಾಪ್ ಸಿಂಗ್ ಬಂಗಾರ ಸಾಧಕರು
ಐಎಸ್ಎಸ್ಎಫ್ ವರ್ಲ್ಡ್ ಕಪ್ ಶೂಟಿಂಗ್ ಚಾಂಪಿಯನ್ ಶಿಪ್
Team Udayavani, Mar 25, 2021, 6:40 AM IST
ಹೊಸದಿಲ್ಲಿ: ಐಎಸ್ಎಸ್ಎಫ್ ವರ್ಲ್ಡ್ ಕಪ್ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ವನಿತೆಯರು ಪಾರಮ್ಯ ಸಾಧಿಸಿದ್ದಾರೆ. ಈ ವಿಭಾಗದ ಮೂರೂ ಪದಕಗಳನ್ನು ಗೆದ್ದು ಸಂಭ್ರಮಿಸಿದ್ದಾರೆ. ಚಿಂಕಿ ಯಾದವ್ ಚಿನ್ನ, ರಾಹಿ ಸರ್ನೋಬತ್ ಬೆಳ್ಳಿ ಮತ್ತು ಮನು ಭಾಕರ್ ಕಂಚಿನ ಪದಕ ಗೆದ್ದರು.
ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ನಲ್ಲಿ 23 ವರ್ಷದ ಯುವ ಶೂಟರ್ ಚಿಂಕಿ ಯಾದವ್ ಸ್ವರ್ಣ ಪದಕಕ್ಕೆ ಗುರಿ ಇರಿಸಿದರು. ಇಲ್ಲಿ ಚಿಂಕಿ ಯಾದವ್ ಮತ್ತು ರಾಹಿ ಸರ್ನೋಬತ್ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿತು. 32 ಅಂಕಗ ಳೊಂದಿಗೆ ಸ್ಪರ್ಧೆ ಟೈ ಆಯಿತು. ಟೈ-ಬ್ರೇಕರ್ನಲ್ಲಿ ಚಿಂಕಿ 4-3 ಮೇಲುಗೈ ಸಾಧಿಸುವುದರೊಂದಿಗೆ ಬಂಗಾರದಿಂದ ಸಿಂಗಾರಗೊಂಡರು. ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ 9ನೇ ಚಿನ್ನವಾಗಿದೆ. ರಾಹಿ ಬೆಳ್ಳಿ ಪದಕ ಗೆದ್ದರು. 28 ಅಂಕಗಳನ್ನಷ್ಟೇ ಸಂಪಾದಿಸಿದ ಮನು ಭಾಕರ್ ಕಂಚಿಗೆ ಸಮಾಧಾನಪಡಬೇಕಾಯಿತು.
ಪ್ರತಾಪ್ ಸಿಂಗ್ ಪ್ರತಾಪ
ಬೆಳಗ್ಗೆ ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್ನಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬಂಗಾರಕ್ಕೆ ಗುರಿ ಇರಿಸಿದರು.
ಭೋಪಾಲ್ ಮೂಲದ, 20 ವರ್ಷದ ಪ್ರತಾಪ್ ಸಿಂಗ್ ತೋಮರ್ 462.5 ಶಾಟ್ಗಳ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು. ಹಂಗೇರಿಯ ಇಸ್ತವಾನ್ ಪೆನಿ ಬೆಳ್ಳಿ (461.6) ಮತ್ತು ಡೆನ್ಮಾರ್ಕ್ನ ಸ್ಟೆಫನ್ ಓಲ್ಸೆನ್ (450.9) ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.