ದಿನದಿಂದ ದಿನಕ್ಕೆ ಕಾಂಗ್ರೆಸ್ ದುರ್ಬಲವಾಗುತ್ತಿರುವುದು ನಿಜ : ಕಪಿಲ್ ಸಿಬಲ್ ಕಳವಳ
Team Udayavani, Feb 28, 2021, 6:40 AM IST
![ದಿನದಿಂದ ದಿನಕ್ಕೆ ಕಾಂಗ್ರೆಸ್ ದುರ್ಬಲವಾಗುತ್ತಿರುವುದು ನಿಜ : ಕಪಿಲ್ ಸಿಬಲ್ ಕಳವಳ](https://www.udayavani.com/wp-content/uploads/2021/02/kapil-1-620x382.jpg)
![ದಿನದಿಂದ ದಿನಕ್ಕೆ ಕಾಂಗ್ರೆಸ್ ದುರ್ಬಲವಾಗುತ್ತಿರುವುದು ನಿಜ : ಕಪಿಲ್ ಸಿಬಲ್ ಕಳವಳ](https://www.udayavani.com/wp-content/uploads/2021/02/kapil-1-620x382.jpg)
ಜಮ್ಮು/ಹೊಸದಿಲ್ಲಿ : ಕಾಂಗ್ರೆಸ್ ಒಳಗಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಗೌರವ ಸೂಚಿಸುವ ಸಂಬಂಧ ಜಮ್ಮುವಿನಲ್ಲಿ ಏರ್ಪಡಿಸಲಾಗಿದ್ದ ಜಿ-23 ಸಭೆಯಲ್ಲಿ ಕಾಂಗ್ರೆಸ್‌ಹಾಲಿ ಸ್ಥಿತಿ ಬಗ್ಗೆ ಹಿರಿಯ ನಾಯಕರೇ ಕಳವಳ ವ್ಯಕ್ತಪಡಿಸಿದ್ದಾರೆ. ಶಾಂತಿ ಸಮ್ಮೇಳನದ ಹೆಸರಿನಲ್ಲಿ ನಡೆದ ಈ ಸಮಾವೇಶದಲ್ಲಿ ಮಾತನಾಡಿದ ಕಪಿಲ್ ಸಿಬಲ್, ಸತ್ಯವೇನೆಂದರೆ ನಾವು ಇಂದು ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೂಮ್ಮೆ ಪಕ್ಷದ ನಾಯಕರ ನಾಯಕತ್ವ ಶೈಲಿಯ ಬಗ್ಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ದುರ್ಬಲವಾಗುತ್ತಿದೆ ಎಂಬುದು ಸತ್ಯ. ಇದರಿಂದಾಗಿಯೇ ನಾವು ಇಲ್ಲಿ ಸೇರಿದ್ದೇವೆ. ಹಿಂದೆಯೂ ನಾವು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ಒಂದಾಗಿದ್ದೆವು ಎಂದು ಕಪಿಲ್ ಸಿಬಲ್ ಹೇಳಿದರು.
ಮತ್ತೂಬ್ಬ ನಾಯಕ ಆನಂದ್ ಶರ್ಮ ಅವರು ಮಾತನಾಡಿ, ನಮ್ಮ ಧ್ವನಿ ಪಕ್ಷವನ್ನು ಗಟ್ಟಿ ಮಾಡುವುದಕ್ಕಾಗಿದೆ . ಈ ಹಿಂದೆಯೂ ನಾವು ಈ ಬಗ್ಗೆ ಮಾತನಾಡಿದ್ದೆವು. ಮುಂದಿನ ದಿನಗಳಲ್ಲಿ ಉತ್ತಮವಾದ ಘಳಿಗೆ ಕಾಣಲಿದ್ದೇವೆ ಎಂದರು.
ಮತ್ತೂಬ್ಬ ಕಾಂಗ್ರೆಸ್ ರಾಜಕಾರಣಿ ರಾಜ್ ಬಬ್ಬರ್ ಅವರು ಮಾತನಾಡಿ, ನಮ್ಮನ್ನು ಜಿ-23 ಎಂದು ಕರೆಯುತ್ತಾರೆ. ಆದರೆ ನಾವು ಗಾಂಧಿ 23. ಕಾಂಗ್ರೆಸ್ ಗಟ್ಟಿಗೊಳ್ಳಬೇಕು, ಇದೇ ಜಿ-23ಕ್ಕೆ ಬೇಕಾಗಿರುವುದು ಎಂದಿದ್ದಾರೆ.
ರಾಹುಲ್‌ಗೆ ಆಜಾದ್ ಟಾಂಗ್
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಗುಲಾಂ ನಬಿ ಆಜಾದ್, “ನೀವು ಜಮ್ಮು-ಕಾಶ್ಮೀರದವರಾಗಿರಿ ಅಥವಾ ಲಡಾಖ್‌ನವರಾಗಿರಿ; ನಾವು ಎಲ್ಲ ಧರ್ಮ, ಜನ ಮತ್ತು ಜಾತಿಗಳಿಗೆ ಗೌರವ ನೀಡಬೇಕು. ಇದೇ ನಮ್ಮ ಶಕ್ತಿ, ಇದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ನಾವು ಯಾರ ವಿರುದ್ಧವೂ ಅಲ್ಲ
ಜಿ -23 ಬಗ್ಗೆ ಉಲ್ಲೇಖೀಸಿದ ಆಜಾದ್, ಇದು ಮಾಧ್ಯಮಗಳು ಸೃಷ್ಟಿಸಿದ ಪದ. ನಾವು ಯಾರ ವಿರುದ್ಧವೂ ಅಲ್ಲ. ನಾವು ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ, ಹಲವಾರು ಮಂದಿ ದೇಶವನ್ನು ವಿಭಜಿಸಲು ನೋಡುತ್ತಿದ್ದಾರೆ, ನಾವು ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ ಎಂದರು. ಜತೆಗೆ, “ನಾನು ರಾಜ್ಯಸಭೆಯಿಂದ ನಿವೃತ್ತಿಯಾಗಿರಬಹುದು. ಆದರೆ ಸಕ್ರಿಯ ರಾಜಕಾರಣದಿಂದ ಅಲ್ಲ, ನನ್ನ ಹೋರಾಟ ಮುಂದೆಯೂ ಹಾಗೆಯೇ ಇರುತ್ತದೆ ಎಂದೂ ಘೋಷಿಸಿದರು.
ಆಜಾದ್ ಅನುಭವ ಬೇಕಿತ್ತು
ಗುಲಾಂ ನಬಿ ಆಜಾದ್ ಅವರನ್ನು ರಾಜ್ಯಸಭೆಯಲ್ಲಿ ಮುಂದುವರಿಸದೆ ಇರುವ ಪಕ್ಷದ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಪಿಲ್ ಸಿಬಲ್, ಅನುಭವಿ ರಾಜಕಾರಣಿ ಆಜಾದ್ ರಾಜ್ಯಸಭೆಯಿಂದ ಹೊರಗೆ ಬಂದಿರುವುದು ಬೇಸರ ತಂದಿದೆ ಎಂದಿದ್ದಾರೆ.
ಆಜಾದ್ ಅವರಿಗೆ ದೇಶದ ಪ್ರತೀ ಜಿಲ್ಲೆಯ ಪರಿಚಯವಿದೆ. ಇಂಥವರನ್ನು ಮುಂದುವರಿಸಬೇಕಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-150x90.jpg)

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
![19](https://www.udayavani.com/wp-content/uploads/2025/02/19-3-150x80.jpg)
![19](https://www.udayavani.com/wp-content/uploads/2025/02/19-3-150x80.jpg)
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
![1-tengu-dsdsa](https://www.udayavani.com/wp-content/uploads/2025/02/1-tengu-dsdsa-150x88.jpg)
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
![1-namm-mannu-1](https://www.udayavani.com/wp-content/uploads/2025/02/1-namm-mannu-1-150x84.jpg)
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ