![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 21, 2023, 7:08 AM IST
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಪ್ರಾಣಪ್ರತಿಷ್ಠೆ 2024ರ ಜ. 14ರ ಮಕರ ಸಂಕ್ರಾಂತಿ ಯಿಂದ 24ರ ವರೆಗೆ ನಡೆಯಲಿದೆ. ಕೊನೆಯ ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವ ರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಪ್ರಾಣಪ್ರತಿಷ್ಠೆಯ ಬಳಿಕ ಜ. 25ರಿಂದ ಮಂದಿರ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿವೆ. ದೇಶ-ವಿದೇಶಗಳ ಭಕ್ತರು ಅದನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೀಪಾವಳಿ ವೇಳೆಗೆ ಅಂದರೆ ಅಕ್ಟೋಬರ್ ಅಂತ್ಯಕ್ಕೆ ದೇಗುಲದ ಮೊದಲ ಅಂತಸ್ತಿನ ಕೆಲಸ ಪೂರ್ಣಗೊಳ್ಳಲಿದೆ. ನಾಲ್ಕು ಅಂತಸ್ತುಗಳ ದೇಗುಲ ಸಮುತ್ಛಯ ಪೂರ್ಣಗೊಂಡ ಬಳಿಕ ಮೊದಲ ಅಂತಸ್ತನ್ನು “ರಾಮ ಕಥೆ’ ನಡೆಸಲು ಮೀಸಲಾಗಿ ಇರಿಸಲಾಗುತ್ತದೆ ಎಂದೂ ಮಿಶ್ರಾ ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.