ಸುಲಭ ರೆಸಿಪಿ…ಬಾಯಿ ಚಪ್ಪರಿಸುವಷ್ಟು ರುಚಿ ಈ ಹಲಸಿನ ಕಾಯಿ ಮಂಚೂರಿ
ಹಲಸಿನ ಕಾಯಿಯ ಮಂಚೂರಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.
ಶ್ರೀರಾಮ್ ನಾಯಕ್, Jan 6, 2023, 6:32 PM IST
ಇನ್ನೇನು ಹಲಸು ಸೀಸನ್ ಪ್ರಾರಂಭವಾಗುತ್ತಿದೆ. ನಾನಾ ವಿಧದ ಹಲಸು ಹೇರಳವಾಗಿಯೇ ಸಿಗುತ್ತಿದೆ. ಹಪ್ಪಳ, ಚಿಪ್ಸ್ ತಯಾರಿಸಬಹುದಾದ ಈ ಹಲಸಿನಿಂದ ಅನೇಕ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಉತ್ತಮ ನಾರಿನಂಶ, ಪೋಷಕಾಂಶಗಳನ್ನು ಒಳಗೊಂಡಿರುವ ಹಲಸು ಆರೋಗ್ಯದ ಪಾಲನೆಗೆ ಸಹಕಾರಿಯಾಗಿದೆ. ಹಲಸಿನಿಂದ ಪಲ್ಯ, ಸಾಂಬಾರು ಮಾಡುವ ಬದಲು ಒಂದಷ್ಟು ವಿಭಿನ್ನ ರುಚಿ ಮಾಡಿ ನೋಡಬಹುದು. ಈ ಹಿನ್ನೆಲೆ ಪನ್ನೀರ್ ,ಗೋಬಿ, ಮಶ್ರೂಮ್ ಮಂಚೂರಿಯನ್ನು ಎಲ್ಲರೂ ಸವಿದಿರುತ್ತಾರೆ. ಆದರೆ ಹಲಸಿನ ಕಾಯಿಯ ಮಂಚೂರಿ ಬಗ್ಗೆ ಕೇಳಿದ್ದೀರಾ ಇಲ್ಲವಾದರೆ ರುಚಿರುಚಿಯಾದ ಹಲಸಿನ ಕಾಯಿಯ ಮಂಚೂರಿಯನ್ನು ಮನೆಯಲ್ಲೇ ಮಾಡಬಹುದಾಗಿದ್ದು, ವಿಭಿನ್ನ ರುಚಿಯನ್ನು ಸವಿಯಬಹುದು.
ಹಲಸಿನ ಕಾಯಿಯ ಮಂಚೂರಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ. ಹಾಗಾದ್ರೆ ಇನ್ನೇಕೆ ತಡ, ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಹಲಸಿನ ಕಾಯಿಯ ಮಂಚೂರಿ ಮಾಡುವ ಬನ್ನಿ.
ಬೇಕಾಗುವ ಸಾಮಗ್ರಿಗಳು
ಎಳೆಯ ಹಲಸಿನ ಕಾಯಿ 2 ಕಪ್, ಮೈದಾ 1/2 ಕಪ್, ಕಾನ್ ಫ್ಲೋರ್ 1/4 ಕಪ್, ಮೆಣಸಿನ ಪುಡಿ 4ಚಮಚ, ಅರಶಿನ ಪುಡಿ -2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಈರುಳ್ಳಿ 2, ದೊಣ್ಣೆ ಮೆಣಸು(ಕ್ಯಾಪ್ಸಿಕಂ)ಸಣ್ಣದು 1, ಸೋಯಾ ಸಾಸ್ 2ಚಮಚ, ಟೊಮೆಟೋ ಸಾಸ್ 3 ಚಮಚ, ರೆಡ್ ಚಿಲ್ಲಿ ಸಾಸ್ 2 ಚಮಚ, ವಿನೆಗರ್ ಸ್ವಲ್ಪ, ಎಣ್ಣೆ, ಕೊತ್ತಂಬರಿ ಸೊಪ್ಪು(ಅಲಂಕಾರಕ್ಕೆ), ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ, ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಹದ ಗಾತ್ರದ ಹೋಳುಗಳಾಗಿ ಮಾಡಿಟ್ಟ ಎಳೆಯ ಹಲಸಿನ ಕಾಯಿ ,ಮೆಣಸಿನ ಪುಡಿ, ಅರ್ಧ ಟೀಸ್ಪೂನ್ ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸುಮಾರು 5ನಿಮಿಷಗಳ ಕಾಲ ಬೇಯಿಸಿ ಇಟ್ಟುಕೊಳ್ಳಿ . ತದನಂತರ ಇನ್ನೊಂದು ಪಾತ್ರೆಯಲ್ಲಿ ಮೈದಾ, ಕಾನ್ ಫ್ಲೋರ್, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿಟ್ಟ ಹಲಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ .ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದನಂತರ ಮಾಡಿಟ್ಟ ಹಲಸಿನ ಕಾಯಿ ಮಿಶ್ರಣವನ್ನು ಹಾಕಿ ಸರಿಯಾಗಿ ಫ್ರೈ ಮಾಡಿ. ಆಮೇಲೆ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿಯಿರಿ. ತದನಂತರ ಟೊಮೆಟೋ ಸಾಸ್, ರೆಡ್ ಚಿಲ್ಲಿ ಸಾಸ್ ಮತ್ತು ವಿನೆಗರ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಕಾಯಿಸಿಟ್ಟಿದ್ದ ಹಲಸಿನ ಕಾಯಿಯನ್ನುಹಾಕಿ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿರಿ. ಅಂತಿಮವಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿರಿ.
ಬಿಸಿ-ಬಿಸಿಯಾದ ಹಲಸಿನ ಕಾಯಿ ಮಂಚೂರಿ ಸವಿಯಲು ಸಿದ್ಧ.
-ಶ್ರೀರಾಮ್ ಜಿ.ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.