ಜಾಡಿ, ಹಟ್ಟಿಯಂಗಡಿ ರಸ್ತೆ : ಡಾಮರು ಕಾಮಗಾರಿಗೆ ಮಧ್ಯದಲ್ಲೊಂದು ತೊಡಕು
Team Udayavani, Mar 18, 2021, 5:10 AM IST
ವಂಡ್ಸೆ: ದೇವಲ್ಕುಂದದಿಂದ ಹಟ್ಟಿಯಂಗಡಿ ಕ್ರಾಸ್‌ವರೆಗಿನ ಸುಮಾರು 4 ಕೋಟಿ ರೂ. ವೆಚ್ಚದ ರಸ್ತೆ ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಲ್ಲಿನ ಕಿರು ಸೇತುವೆಯ ಬಳಿ ಒಂದಿಷ್ಟು ವ್ಯಾಪ್ತಿಯ ರಸ್ತೆ ಡಾಮರು ಕಾಮಗಾರಿ ಬಾಕಿ ಉಳಿದಿರುವುದು ಸ್ಥಳೀಯರು ಹಾಗೂ ನಿತ್ಯ ಸಂಚಾರಿಗಳಿಗೆ ಕಿರಿಕಿರಿ ಉಂಟು ಮಾಡಿದೆ.
ಶಾಸಕರ ಪ್ರಯತ್ನದ ಫಲ
ಗ್ರಾಮಸ್ಥರ ಬಹಳಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಬೈಂದೂರು ಶಾಸಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನವನ್ನು ಒದಗಿಸಿದ್ದರು. ಈ ನಡುವೆ ರಸ್ತೆ ವಿಸ್ತ ರ ಣೆ ಸಂದರ್ಭದಲ್ಲಿ ಎದುರಾದ ತಕರಾರು ಕೂಡ ಇತ್ಯರ್ಥಗೊಳಿಸಿ ಕಾಮಗಾರಿ ಮುಂದುವರಿಸಲಾಗಿತ್ತು.
ಅವೈಜ್ಞಾನಿಕ ಕಿರು ಸೇತುವೆ
ನಿರ್ಮಿಸಲಾಗಿರುವ ಕಿರು ಸೇತುವೆ ಅವೈಜ್ಞಾನಿಕವಾಗಿದ್ದು ಆ ಮಾರ್ಗವಾಗಿ ವಾಹನಗಳು ಸಾಗುವಾಗ ಭಯದ ವಾತಾವರಣದಲ್ಲಿ ಸಂಚರಿಸಬೇಕಾಗಿದೆ. ತಿರುವಿನ ನಡುವೆ ನಿರ್ಮಿಸಲಾಗಿರುವ ಸೇತುವೆ ಅಪಘಾತ ಆಹ್ವಾನಿಸುವಂತಿದೆ.
ಪೂರ್ಣಗೊಳ್ಳದ ಕಾಮಗಾರಿ
ಸೇತುವೆ ಸನಿಹದ ಮುಖ್ಯ ರಸ್ತೆಯ ಡಾಮರು ಕಾಮಗಾರಿ ಆರಂಭಗೊಳ್ಳದಿರುವುದು ವಾಹನ ಚಾಲಕರಿಗೆ ಹೊಂಡಮಯ ರಸ್ತೆಯಲ್ಲಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹಟ್ಟಿಯಂಗಡಿ ಕ್ರಾಸ್‌ನಿಂದ ದೇವಲ್ಕುಂದದವರೆಗಿನ ಜಾಡಿ ರಸ್ತೆಯ ಅಪೂರ್ಣಗೊಂಡ ಕಾಮಗಾರಿ ಕೂಡಲೇ ಆರಂಭಗೊಳ್ಳದಿದ್ದಲ್ಲಿ ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸಹಿತ ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಲಿದೆ. ಅವೈಜ್ಞಾನಿಕ ಕಿರುಸೇತುವೆಯ ಬದಲು ನೇರ ಮಾರ್ಗದ ಕಿರುಸೇತುವೆಯ ನಿರ್ಮಾಣದೊಡನೆ ಉಳಿದ ಭಾಗದ ರಸ್ತೆಯ ಕಾಮಗಾರಿ ಪೂರ್ಣಗೊಂಡಲ್ಲಿ ತಲ್ಲೂರು ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ನಿತ್ಯ ಪ್ರಯಾಣಿಕರಿಗೆ ಸುಮಾರು 5 ಕಿ.ಮೀ. ದೂರ ವ್ಯಾಪ್ತಿ ಅಂತರ ಉಳಿತಾಯವಾಗಲಿದ್ದು, ಸುಗಮ ವಾಹನ ಸಂಚಾರಕ್ಕೆ ಹತ್ತಿರದ ಮಾರ್ಗ ವಾಗಿ ರೂಪುಗೊಳ್ಳಲಿದೆ. ಹಟ್ಟಿಯಂಗಡಿ- ಕೊಲ್ಲೂರು ಕ್ಷೇತ್ರ ಯಾತ್ರಾರ್ಥಿಗಳಿಗೆ ಸನಿಹದ ಮಾರ್ಗವಾಗಲಿದೆ.
ಶೀಘ್ರದಲ್ಲಿ ಪೂರ್ಣ
ಮಿಕ್ಕುಳಿದ ರಸ್ತೆ ನಿರ್ಮಾಣ ಕಾಮಗಾರಿ ಅತಿ ಶೀಘ್ರದಲ್ಲಿ ಪೂರ್ಣ ಗೊಳಿಸಲಾಗುವುದು.ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗ ದಂತೆ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.