ಜಗದ್ಗುರು ಪೀಠಗಳ ಹಂಗಿಲ್ಲದೇ ಪಂಚಮಸಾಲಿ ಮಠಾಧೀಶರ ಒಕ್ಕೂಟ ರಚನೆಗೆ ನಿರ್ಧಾರ
Team Udayavani, Jul 5, 2021, 7:36 PM IST
ವಿಜಯಪುರ: ಪಂಚಮಸಾಲಿ ಜಗದ್ಗುರು ಪೀಠಗಳ ಹಂಗಿಲ್ಲದೇ ಸಮುದಾಯದ ನೂರು ಮಠಗಳ ಮಠಾಧೀಶರ ಒಕ್ಕೂಟ ರಚಿಸಲು ಮನಗೂಳಿ ಹಿರೇಮಠದಲ್ಲಿ ಸಭೆ ಸೇರಿದ್ದ ಪಂಚಮಸಾಲಿ ಸ್ವಾಮಿಗಳು ನಿರ್ಧರಿಸಿದ್ದಾರೆ.
ಸೋಮವಾರ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಠದ ಅಭಿನವ ಸಂಗನಬಸವ ಶ್ರೀಗಳ ಅತಿಥ್ಯದಲ್ಲಿ ಸಭೆ ಸೇರಿದ್ದ ವಿವಿಧ ಪರಂಪರೆ ಹೊಂದಿರುವ ಪಂಚಮಸಾಲಿ ಮಠಾಧೀಶರ ಸಭೆಯಲ್ಲಿ ಸಮಾಜದ ಎಲ್ಲ ಸ್ವಾಮಿಗಳನ್ನು ಒಳಗೊಂಡ ಒಕ್ಕೂಟ ರಚನೆಗೆ ನಿರ್ಧರಿಸಲಾಗಿದೆ.
ಮಠಾಧೀಶರ ಒಕ್ಕೂಟ ರಚನೆಗಾಗಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದು, ಮನಗೂಳಿಯಲ್ಲಿ ಮೂರನೇ ಸಭೆ ನಡೆಸಲಾಗಿದೆ. ಸದರಿ ಸಭೆಯಲ್ಲಿ ಜಗದ್ಗುರು ಪೀಠಗಳ ಹಂಗಿಲ್ಲದೇ ಹಾಗೂ ಅಧ್ಯಕ್ಷ ಸಂಚಾಲಕ ಎಂಬ ಪದಾಧಿಕಾರಿಗಳು ಇಲ್ಲದೇ ಸಾಮೂಹಿಕ ನಾಯಕತ್ವದಲ್ಲಿ ಮಠಾಧೀಶರ ಒಕ್ಕೂಟ ರಚಿಸಲು ನಿರ್ಧರಿಲಾಗಿದೆ.
ಪಂಚಮಸಾಲಿ ಹರಿಹರ, ಕೂಡಲಸಂಗಮ ಪೀಠಗಳು ದೊಡ್ಡ ಕುರ್ಚಿ ವ್ಯಾಮೋಹದಲ್ಲಿ ಸಮಾಜದ ಇತರೆ ಮಠಾಧೀಶರನ್ನು ಅವಮಾನಿಸುವ ಕೆಲಸ ಮಾಡುತ್ತಿವೆ. ರಾಜಕೀಯ ಪ್ರೇರಿತ ಕಾರ್ಯವೈಖರಿ ಜಗದ್ಗುರುಗಳು ಪೀಠಗಳ ಸ್ಥಾಪನೆಯ ಆಶ್ರಯ ಈಡೇರುವಲ್ಲಿ ವಿಫಲವಾಗಿವೆ. ಹೀಗಾಗಿ ರಾಜಕೀಯ ರಹಿತವಾದ ಹಾಗೂ ಸನಾಜಮುಖಿ ಕಾರ್ಯಗಳನ್ನು ಮಾಡಲು ಮಠಾಧೀಶರ ಒಕ್ಕೂಟ ರಚಿಸಿದ್ದೇವೆ. ಶೀಘ್ರವೇ ಒಕ್ಕೂಟದ ಕಾರ್ಯ- ವಿಧಾನಗಳ ಕುರಿತು ಅಂತಿಮ ರೂಪುರೇಷೆ ನಿರ್ಧಾರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದನ್ನೂ ಓದಿ :ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರ ಪುತ್ರ ವಿಜಯೇಂದ್ರನಿಂದ : ಎಚ್. ವಿಶ್ವನಾಥ್
ಪಂಚಮಸಾಲಿ ಮಠಾಧೀಶರ ಒಕ್ಕೂಟ ರಚನೆ ಹಾಲಿ ಇರುವ ಎರಡೂ ಪೀಠಗಳಿಗೆ ವಿರೋಧವೂ ಇಲ್ಲ, ಪರ್ಯಾವೂ ಅಲ್ಲ. ಮೂರನೇ ಪೀಠ ಕಟ್ಡುವ ಉದ್ದೇಶ ಇಲ್ಲವೇ ಇಲ್ಲ. ಬದಲಾಗಿ ಸಮಾಜದ ಜನರಲ್ಲಿ ಧಾರ್ಮಿಕ ಸಂಸ್ಕಾರ ನೀಡುವ, ತಾಲೂಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತೇ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಭಿನವ ಸಂಗನಬಸವ ಶ್ರೀಗಳು ತಿಳಿಸಿದ್ದಾರೆ.
ಮಠಾಧೀಶರ ಸದರಿ ಒಕ್ಕೂಟಕ್ಕೆ ಜಗದ್ಗುರು ಪೀಠಗಳ ಸ್ವಾಮಿಗಳನ್ನು ನಾವು ಆಹ್ವಾನಿಸಿಲ್ಲ. ಅವರ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದಿದ್ದರೂ ಸಮಾಜದ ಕೆಲಸವೆಂದು ನಾವೇ ಹೋಗುತ್ತೇವೆ. ಮೀಸಲು ಹೋರಾಟದ ಸಂದರ್ಭದಲ್ಲೂ ನಾವಾಗೇ ಹೋಗಿ ಪಾಲ್ಗೊಂಡಿದ್ದೇವೆ. ಮಠಾಧೀಶರ ಒಕ್ಕೂಟಕ್ಕೂ ಪೀಠಗಳ ಸ್ವಾಮಿಗಳು ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಿಲೋಗಿ ಮಠದ ಸಿದ್ಧಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಸದರಿ ಒಕ್ಕೂಟಕ್ಕೆ ಸೇರಲು 65 ಮಠಾಧೀಶರು ಸಮ್ಮತಿಸಿದ್ದು, ಮನಗೂಳಿ ಸಭೆಯಲ್ಲಿ 42 ಮಠಗಳ ಸ್ವಾಮಿಗಳು ಪಾಲ್ಗೊಂಡಿದ್ದರು ಎಂದು ಉಭಯ ಶ್ರೀಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.