ಸೂರ್ಯ ಹೊಣೆಯಲ್ಲ: ವಿಷಾದ ವ್ಯಕ್ತಪಡಿಸಿದ ‘ಜೈ ಭೀಮ್’ ನಿರ್ದೇಶಕ
Team Udayavani, Nov 21, 2021, 7:29 PM IST
ಚೆನ್ನೈ: ಯಾವುದೇ ನಿರ್ದಿಷ್ಟ ಸಮುದಾಯವನ್ನು ನೋಯಿಸುವ ಉದ್ದೇಶ ಖಂಡಿತವಾಗಿ ಇಲ್ಲ, ಎಂದು ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರದ ನಿರ್ದೇಶಕ ತಾ ಸೇ ಜ್ಞಾನವೇಲ್ ಭಾನುವಾರ ಹೇಳಿದ್ದಾರೆ.
ಚಿತ್ರದ ತಯಾರಿಕೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಅವಹೇಳನ ಮಾಡುವ ಒಂದು ಸಣ್ಣ ಆಲೋಚನೆಯೂ ಇರಲಿಲ್ಲ ಎಂದು ಒತ್ತಿ ಹೇಳಿದ ಜ್ಞಾನವೇಲ್, “ಮನನೊಂದವರಿಗೆ ಮತ್ತು ದುಃಖಿತರಿಗೆ ನನ್ನ ಹೃತ್ಪೂರ್ವಕ ವಿಷಾದವನ್ನು ತಿಳಿಸುತ್ತೇನೆ” ಎಂದು ಹೇಳಿದರು.
ವಿವಾದದ ಹಿನ್ನೆಲೆಯಲ್ಲಿ ನಾಯಕ ನಟ ಮತ್ತು ಜೈ ಭೀಮ್ ನಿರ್ಮಾಪಕ ಸೂರ್ಯ ಅವರಿಗೆ ಉಂಟಾದ ಕಷ್ಟಕ್ಕೆ ಚಿತ್ರ ನಿರ್ದೇಶಕ ವಿಷಾದ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆಯಲ್ಲಿ ನೇತಾಡುವ ಕ್ಯಾಲೆಂಡರ್ ಸಮುದಾಯವನ್ನು ಉಲ್ಲೇಖಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇದನ್ನು ಒಂದು ನಿರ್ದಿಷ್ಟ ಸಮುದಾಯದ ಉಲ್ಲೇಖದ ಸಂಕೇತವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ.ಅದು 1995 ರ ಅವಧಿಯನ್ನು ಪ್ರತಿಬಿಂಬಿಸುವುದಾಗಿದೆ ಎಂದು ಜ್ಞಾನವೇಲ್ ಹೇಳಿದ್ದಾರೆ.
ಚಿತ್ರೀಕರಣ ಅಥವಾ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ, ಕೆಲವು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುವ ಕ್ಯಾಲೆಂಡರ್ ದೃಶ್ಯಗಳು ನಮ್ಮ ಗಮನವನ್ನು ಸೆಳೆಯಲಿಲ್ಲ, ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುವ ಮೊದಲು, ಅದನ್ನು ಹಲವಾರು ಜನರಿಗೆ ಪ್ರದರ್ಶಿಸಲಾಗಿತ್ತು.ಆ ಸಮಯದಲ್ಲಿ ಅದು ನಮ್ಮ ಗಮನಕ್ಕೆ ಬಂದಿದ್ದರೆ, ನಾವು ಅದನ್ನು ಬಿಡುಗಡೆ ಮಾಡುವ ಮೊದಲು ಬದಲಾಯಿಸುತ್ತಿದ್ದೆವು. ಸಾಮಾಜಿಕ ಮಾಧ್ಯಮಗಳ ಮೂಲಕ ಹಿನ್ನೆಲೆಯಕ್ಯಾಲೆಂಡರ್ ಬಗ್ಗೆ ತಿಳಿದುಕೊಂಡ ನಂತರ ಚಿತ್ರ ಬಿಡುಗಡೆಯಾದ ನಂತರ, ಮರುದಿನ ಬೆಳಿಗ್ಗೆ ಅದನ್ನು ಬದಲಾಯಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು ಎಂದರು.
ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ, ಸೂರ್ಯ ಅವರನ್ನು ಜವಾಬ್ದಾರಿಯನ್ನು ಹೊರುವಂತೆ ಕೇಳುವುದು ದುರದೃಷ್ಟಕರ. ನಿರ್ದೇಶಕನಾಗಿ, ಇದು ನನ್ನ ಮಾತ್ರ ಜವಾಬ್ದಾರಿ ಮಾತ್ರ, ನಾನು ತೆಗೆದುಕೊಳ್ಳಬೇಕಾದ ವಿಷಯ ಎಂದರು.
ನವೆಂಬರ್ 1 ರಂದು ತಮಿಳು ಮತ್ತು ತೆಲುಗು ಸೇರಿದಂತೆ ಭಾಷೆಗಳಲ್ಲಿ ಬಿಡುಗಡೆಯಾದ ‘ಜೈ ಭೀಮ್’ ನಲ್ಲಿ ತಮಿಳುನಾಡಿನ ವನ್ನಿಯಾರ್ ಸಂಗಮ್ ಸಮುದಾಯದ ಸದಸ್ಯರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಗಲಾಟೆಗೆ ಕಾರಣವಾಗಿತ್ತು, ಮಾತ್ರವಲ್ಲದೆ ಸೂರ್ಯ ಅವರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಚಿತ್ರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾದ ವನ್ನಿಯಾರ್ ಅಥವಾ ವನ್ನಿಯಾ ಕುಲ ಕ್ಷತ್ರಿಯರು ರಾಜ್ಯದ ಉತ್ತರದ ಜಿಲ್ಲೆಗಳಲ್ಲಿದ್ದಾರೆ. ವನ್ನಿಯಾರ್ ಸಂಗಮ್‌ನ ಚಿಹ್ನೆಯು ಉರಿಯುತ್ತಿರುವ ಬೆಂಕಿಯ ಕುಂಡ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.