ದ್ವಿತೀಯ ಟೆಸ್ಟ್ : ಜೇಮ್ಸ್ ಆ್ಯಂಡರ್ಸನ್‌ಗೆ ರೆಸ್ಟ್ ?
Team Udayavani, Feb 11, 2021, 11:31 PM IST
ಚೆನ್ನೈ: ಇಂಗ್ಲೆಂಡಿನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರಿಗೆ ದ್ವಿತೀಯ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡಲಾಗುವುದೇ? ಈ ಪ್ರಶ್ನೆ ಅನೇಕ ದಿಕ್ಕುಗಳಿಂದ ಕೇಳಿ ಬಂದಿದೆ. ಇಂಗ್ಲೆಂಡ್ “ಆವರ್ತನ ಪದ್ಧತಿ’ಗೆ ಹೆಚ್ಚಿನ ಒತ್ತು ಕೊಡುವುದರಿಂದ ಇಂಥದೊಂದು ಸಾಧ್ಯತೆ ಇದೆ ಎಂಬ ಸುಳಿವನ್ನು ತಂಡದ ಪ್ರಧಾನ ಕೋಚ್ ಕ್ರಿಸ್ ಸಿಲ್ವರ್‌ವುಡ್ ಬಿಟ್ಟುಕೊಟ್ಟಿದ್ದಾರೆ.
“ಆ್ಯಂಡರ್ಸನ್ ಅವರನ್ನು ಬಿಡುವುದಾದರೆ ಅದೊಂದು ಕಠಿನ ನಿರ್ಧಾರವಾಗಲಿದೆ. ಅವರೋರ್ವ ಕ್ಲಾಸ್ ಬೌಲರ್. ಕಾದು ನೋಡೋಣ. ಆದರೆ ನಾನು ಗೆಲುವಿನ ತಂಡದಲ್ಲಿ ಯಾವುದೇ ಬದಲಾವಣೆ ಬಯಸುವುದಿಲ್ಲ. ಸ್ಟುವರ್ಟ್ ಬ್ರಾಡ್ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಜತೆಗೆ ನಮ್ಮಲ್ಲಿ ಇನ್ನೂ ಕೆಲವು ಬೌಲರ್ ಇದ್ದಾರೆ. ಇವರೆಲ್ಲ ಯಾವ ಸಂದರ್ಭದಲ್ಲೂ ಆಡಬಹುದು’ ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.
ಇದನ್ನೂ ಓದಿ:ಮರುಪಾವತಿಯಾಗದ 22 ಕೋಟಿ ಸಾಲ…200 ಎಕರೆ ಕಾಫಿ ಎಸ್ಟೇಟ್ ಮುಟ್ಟುಗೋಲು
ಈ ವರ್ಷ ಆ್ಯಶಸ್ ಸೇರಿದಂತೆ ಬಹಳಷ್ಟು ಅಂತಾರಾಷ್ಟ್ರೀಯ ಸರಣಿ ಆಡಬೇಕಿರುವುದರಿಂದ ಇಂಗ್ಲೆಂಡ್ “ರೊಟೇಶನ್ ಸಿಸ್ಟಮ್’ಗೆ ಆದ್ಯತೆ ನೀಡಿದೆ. ಹೀಗಾಗಿ ಶ್ರೀಲಂಕಾ ಸರಣಿ ಮುಗಿದೊಡನೆಯೇ ಜಾನಿ ಬೇರ್‌ಸ್ಟೊ ಅವರನ್ನು ಭಾರತ ಪ್ರವಾಸಕ್ಕೆ ಆರಿಸದೆ ನೇರವಾಗಿ ಇಂಗ್ಲೆಂಡಿಗೆ ಕಳುಹಿಸಲಾಗಿತ್ತು. ಅವರೀಗ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.