ಜಪಾನ್ ಓಪನ್ ಪ್ರಣಯ್-ಶ್ರೀಕಾಂತ್ ಮುಖಾಮುಖಿ
Team Udayavani, Jul 25, 2023, 11:36 PM IST
ಟೋಕಿಯೊ: ಮಂಗಳವಾರ ಮೊದಲ್ಗೊಂಡ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ. 10 ಆಟಗಾರ ಎಚ್.ಎಸ್. ಪ್ರಣಯ್ ದೊಡ್ಡ ಬೇಟೆಯಾಡಿ ಸುದ್ದಿಯಾಗಿದ್ದಾರೆ. ಅವರು ಈ ಬಾರಿಯ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್, ಚೀನದ ನಂ.6 ಆಟಗಾರ ಲಿ ಶಿ ಫೆಂಗ್ ಅವರನ್ನು 21-17, 21-13 ನೇರ ಗೇಮ್ಗಳಿಂದ ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು. ಇಲ್ಲಿ ಭಾರತದ ಮತ್ತೋರ್ವ ಆಟ ಗಾರ ಕೆ. ಶ್ರೀಕಾಂತ್ ಅವರನ್ನು ಎದುರಿಸಲಿದ್ದಾರೆ.
ದಿನದ ಇನ್ನೊಂದು ಪಂದ್ಯದಲ್ಲಿ ಕೆ. ಶ್ರೀಕಾಂತ್ 21-13, 21-13 ಅಂತರದಿಂದ ತೈವಾನ್ನ ಚೌ ತೀನ್ ಚೆನ್ ಅವರನ್ನು ಪರಾಭವಗೊಳಿಸಿದರು. ಇಲ್ಲಿ ಗೆದ್ದವರು ಅಗ್ರ ಶ್ರೇಯಾಂಕದ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೆಣಸಬೇಕಿದೆ. ವನಿತಾ ಡಬಲ್ಸ್ನಲ್ಲಿ ಟ್ರೀಸಾ ಜಾಲಿ- ಗಾಯತ್ರಿ ಗೋಪಿಚಂದ್ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಅವರು ಜಪಾನ್ನ ಸಯಾಕಾ ಹೊಬಾರಾ-ಯುಯಿ ಸುಯಿಜು ವಿರುದ್ಧ 11-21, 21-15, 21-14 ಅಂತರದಿಂದ ಗೆದ್ದು ಬಂದರು.
ವನಿತಾ ಸಿಂಗಲ್ಸ್ನಲ್ಲಿ ಆಕರ್ಷಿ ಕಶ್ಯಪ್ ಆತಿಥೇಯ ದೇಶದ ಅನುಭವಿ ಆಟ ಗಾರ್ತಿ ಅಕಾನೆ ಯಮಾಗುಚಿ ಅವರಿಗೆ ಸಾಟಿ ಯಾಗಲಿಲ್ಲ. ಯಮಾಗುಚಿ 21-17, 21-17ರಿಂದ ಭಾರತದ ಆಟಗಾರ್ತಿಗೆ ಸೋಲುಣಿ ಸಿದರು. ಮಿಕ್ಸೆಡ್ ಡಬಲ್ಸ್ನಲ್ಲಿ ಎನ್. ಸಿಕ್ಕಿ ರೆಡ್ಡಿ-ರೋಹನ್ ಕಪೂರ್ ಕೂಡ ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.