ಮನೆ ಕಳೆದುಕೊಳ್ಳುವ ಭೀತಿ: ಮೃತ ತಾಯಿಯ ದೇಹವನ್ನು 10 ವರ್ಷ ಫ್ರೀಜರ್‌ನಲ್ಲಿಟ್ಟಿದ್ದ ಮಹಿಳೆ!
Team Udayavani, Jan 30, 2021, 10:26 PM IST
ಟೋಕ್ಯೋ (ಜಪಾನ್): ಜಪಾನಿ ಮಹಿಳೆಯೊಬ್ಬರು, ಶೀತಕದಲ್ಲಿ (ಫ್ರೀಜರ್) ತನ್ನ ತಾಯಿಯ ದೇಹವನ್ನು ಹತ್ತು ವರ್ಷಗಳ ಕಾಲ ಬಚ್ಚಿಟ್ಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಇದಕ್ಕೆ ಕಾರಣ ತಾನು ವಾಸ ಮಾಡುತ್ತಿದ್ದ ಮನೆ ಕಳೆದುಕೊಳ್ಳುವ ಭೀತಿ! ಈ ಘಟನೆಗೆ ಕಾರಣವಾದ ಯೋಶಿನೊ ಯುಮಿ (48) ಬಂಧನವಾದ ಮೇಲೆ ಹೊರಜಗತ್ತಿಗೆ ಈ ಘಟನೆ ಗೊತ್ತಾಗಿದೆ. 10 ವರ್ಷಗಳ ಕೆಳಗೆ, ಆಗ 60 ವರ್ಷವಿದ್ದ ತಾಯಿ ಮರಣ ಹೊಂದಿದ್ದರು. ಅವರ ಹೆಸರಿನಲ್ಲಿ ಭೋಗ್ಯಕ್ಕೆ ಮನೆಯನ್ನು ಪಡೆಯಲಾಗಿತ್ತು. ತಾಯಿ ಸತ್ತ ಮೇಲೆ ಆ ಜಾಗದಲ್ಲಿ ತನ್ನನ್ನು ಉಳಿದುಕೊಳ್ಳಲು ಬಿಡುವುದಿಲ್ಲ. ತಾಯಿಯಿದ್ದ ಮನೆಯನ್ನು ಬಿಡಲು ತನಗೆ ಇಷ್ಟವಿರಲಿಲ್ಲ ಎನ್ನುವುದು ಯೋಶಿನೊ ಹೇಳಿಕೆ!
ಈ ತಿಂಗಳ ಮಧ್ಯಭಾಗದಲ್ಲಿ, ಅಪಾರ್ಟ್‌ಮೆಂಟ್‌ನ ಬಾಡಿಗೆಯನ್ನು ಸರಿಯಾಗಿ ಪಾವತಿ ಮಾಡುತ್ತಿಲ್ಲವೆಂಬ ಕಾರಣದಿಂದ, ಯೋಶಿನೊರನ್ನು ಬಲವಂತವಾಗಿ ಹೊರಹಾಕಲಾಗಿತ್ತು. ನಂತರ ಮನೆಯನ್ನು ಸ್ವತ್ಛಗೊಳಿಸುತ್ತಿದ್ದ ವ್ಯಕ್ತಿಗೆ, ಶೀತಕದಲ್ಲಿ ಮಹಿಳೆಯ ದೇಹ ಕಂಡಿದೆ. ಆಗ ಎಲ್ಲ ವಿಚಾರಗಳು ಗೊತ್ತಾಗಿವೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮುಂದುವರಿಕೆ : ಜೆಪಿ ನಡ್ಡಾ ಘೋಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.