ಕಳಸ: ಜೀಪ್ ಢಿಕ್ಕಿಯಾಗಿ 9 ವರ್ಷದ ಬಾಲಕಿ ದಾರುಣ ಸಾವು
Team Udayavani, Feb 1, 2022, 11:38 AM IST
ಕಳಸ: ಪಟ್ಟಣ ಸಮೀಪದ ಕೋಟೆಹೊಳೆ ಎಂಬಲ್ಲಿ ಮಸೀದಿ ಪಾಠ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಜೀಪ್ ಹಿಂದಿನಿಂದ ಬಾಲಕಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.
ಮೃತ ಬಾಲಕಿ 9 ವರ್ಷದವಳಾಗಿದ್ದು, ಪಟ್ಟಣದ ಕಳಶೇಶ್ವರ ನಗರದ ವಜೀರ್ ಅಹಮದ್ ಎಂಬವರ ಮಗಳು ಎಂದು ತಿಳಿದು ಬಂದಿದೆ.
ಮಸೀದಿಯಿಂದ ಮನೆಗೆ ಬರುತ್ತಿದ್ದ ಮೂವರು ಬಾಲಕಿಯರ ಪೈಕಿ ಒಬ್ಬಾಕೆಗೆ ಜೀಪ್ ಬಲವಾಗಿ ಗುದ್ದಿದ್ದು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಜೀಪ್ ಕಳಸ ಪಟ್ಟಣದಿಂದ ಕಳಕೊಡು ಕಡೆಗೆ ಹೋಗುತ್ತಿತ್ತು. ಮಕ್ಕಳು ಮಸೀದಿಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿದ್ದರು.
ಅಪಘಾತ ಎಸಗಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಳಸ ಪೊಲೀಸ್ ಠಾ ಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರಸ್ತೆಯ ಕಾಮಗಾರ ರವಿವಾರವಷ್ಟೇ ಮುಗಿದಿದ್ದು, ರಸ್ತೆಯಲ್ಲಿ ರಸ್ತೆ ಹಂಪ್ಸ್ ಹಾಕಿ ವೇಗ ನಿಯಂತ್ರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್ಕೌಂಟರ್ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.