ಗಡಿ ರಸ್ತೆಗೆ ಝಾರ್ಖಂಡ್‌ ಕಾರ್ಮಿಕರು!

ಚೀನ ಜತೆಗಿನ ಗುದ್ದಾಟದ ನಡುವೆ ಸದೃಢ ರಸ್ತೆ ನಿರ್ಮಾಣ

Team Udayavani, Jun 9, 2020, 6:15 AM IST

ಗಡಿ ರಸ್ತೆಗೆ ಝಾರ್ಖಂಡ್‌ ಕಾರ್ಮಿಕರು!

ರಾಂಚಿ: ಚೀನವು ಶಾಂತಿ ಸಂಧಾನಕ್ಕೆ ಒಪ್ಪಿಕೊಂಡರೂ ಭಾರತ ಅದನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ಲಡಾಖನ್ನು ಬಲಿಷ್ಠಗೊಳಿಸುವ ಹೊಣೆಯನ್ನು ಝಾರ್ಖಂಡ್‌ನ‌ 8 ಸಾವಿರ ಕಾರ್ಮಿಕರಿಗೆ ವಹಿಸಿದೆ. ಈ ಕಟ್ಟಾಳುಗಳು ಅಲ್ಲಿ ಸದೃಢ ರಸ್ತೆಗಳನ್ನು ನಿರ್ಮಿಸಲಿದ್ದಾರೆ.

ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಇತ್ತೀಚೆಗಷ್ಟೇ ಝಾರ್ಖಂಡ್‌ ಸರಕಾರ ವನ್ನು ಕೇಳಿಕೊಂಡಿತ್ತು. ಅಲ್ಲಿನ ಸಿಎಂ ಹೇಮಂತ್‌ ಸೊರೇನ್‌ ಇದಕ್ಕೆ ಸಮ್ಮತಿಸಿದ್ದಾರೆ. ಚೀನ ಗಡಿಯಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದ ಬಿಆರ್‌ಒ ಈಗ “ಆಪರೇಷನ್‌ ವಿಜಯಕ್‌’ ಅಡಿ ಲಡಾಖ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲಿದೆ.

11,800 ಕಾರ್ಮಿಕರು!
ಝಾರ್ಖಂಡ್‌ ಒಟ್ಟು 11,800 ಕಾರ್ಮಿಕರನ್ನು ಕಳುಹಿಸಿದೆ. ಇವರಲ್ಲಿ ಕೆಲವರು ಉತ್ತರಾಖಂಡ ಗಡಿಯ ಶಿವಾಲಿಕ್‌ ಯೋಜನೆ, ಹಿಮಾಚಲ ಪ್ರದೇಶ ಅಂಚಿನ ದೀಪಕ್‌ ಯೋಜನೆ ಮತ್ತು ಕಾಶ್ಮೀರದ ಬೀಕಾನ್‌ ರಸ್ತೆ ಯೋಜನೆಗಾಗಿ ಕೆಲಸ ಮಾಡಲಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಲಡಾಖ್‌ ರಸ್ತೆ ನಿರ್ಮಾಣದ ಅಖಾಡಕ್ಕೆ ಇಳಿಯಲಿದ್ದಾರೆ.

ಭದ್ರತೆ ನಿಮ್ಮ ಹೊಣೆ
ಝಾರ್ಖಂಡ್‌ನ‌ ಬುಡಕಟ್ಟು ಜನಾಂಗದ ಕೆಲಸಗಾರರು ಈ ಹಿಂದೆಯೂ ಭಾರತದ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಭಾಗವಹಿಸಿದ್ದರು. ದೇಶಕ್ಕಾಗಿ ಅತೀ ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವ ಅವರಿಗೆ ಸೂಕ್ತ ರಕ್ಷಣೆ, ಆಶ್ರಯ, ಇನ್ನಿತರ ಮೂಲಸೌಕರ್ಯ ಒದಗಿಸುವುದು ಬಿಆರ್‌ಒ ಹೊಣೆ. ಜೀವವಿಮೆ, ವೈದ್ಯಕೀಯ ವೆಚ್ಚಗಳನ್ನೂ ಭರಿಸಬೇಕು ಎಂದು ಸೊರೇನ್‌ ಸೂಚಿಸಿದ್ದಾರೆ. ಎಲ್ಲ ಷರತ್ತುಗಳಿಗೂ ಒಪ್ಪಿರುವ ಬಿಆರ್‌ಒ, ಕೂಲಿಯನ್ನೂ ಶೇ.15-20ರಷ್ಟು ಏರಿಸಿದೆ. ಜೂ.10ರಿಂದ ರಸ್ತೆ ಕಾಮಗಾರಿ ಆರಂಭವಾಗಲಿದ್ದು, ಈಗಾಗಲೇ 11 ರೈಲು, ಟ್ರಕ್ಕುಗಳ ಮೂಲಕ ಕಾರ್ಮಿಕರು, ನಿಗದಿತ ಸ್ಥಳ ತಲುಪಿದ್ದಾರೆ.

ಮಿಲಿಟರಿ ತಂತ್ರಜ್ಞಾನಗಳ ಮೇಲೆ ಚೀನ ಕಣ್ಣು
ಮಿಲಿಟರಿ ತಂತ್ರಜ್ಞಾನದ ರಹಸ್ಯಗಳನ್ನು ಕದಿಯಲು ಚೀನ ಜಗತ್ತಿನಾದ್ಯಂತ ಸಂಶೋಧಕರನ್ನು ನೇಮಿಸುತ್ತಿದೆ ಎಂದು ತಿಳಿದುಬಂದಿದೆ. ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನ (ಸಿಪಿಸಿ)ದ ಕೇಂದ್ರ ಸಮಿತಿಯು “ಯುನೈಟೆಡ್‌ ಫ್ರಂಟ್‌ ವರ್ಕ್‌’ ಇಲಾಖೆಗೆ ಈ ಹೊಣೆಯನ್ನು ವಹಿಸಿದೆ ಎನ್ನಲಾಗಿದೆ.ಅಮೆರಿಕದ ಲ್ಯಾಬ್‌ಗಳ ವೈದ್ಯಕೀಯ ರಹಸ್ಯ ಕದಿಯಲು ಚೀನ ಸಂಶೋಧಕರನ್ನು ನೇಮಿಸಿದ್ದ ಸಂಗತಿ ಕೆಲವು ತಿಂಗಳ ಹಿಂದಷ್ಟೇ ಬಯಲಾಗಿತ್ತು. ಇದೇ ಕಳ್ಳಬುದ್ಧಿಯನ್ನು ಮಿಲಿಟರಿ ಕ್ಷೇತ್ರಕ್ಕೂ ವಿಸ್ತರಿಸಲು ಅದು ಮುಂದಾಗಿದೆ.

ಬಿಕ್ಕಟ್ಟು ಶಮನಕ್ಕೆ ಚೀನ ಒಲವು
ಲಡಾಖ್‌ ಸಭೆಯ ಅನಂತರ ಇದೇ ಮೊದಲ ಬಾರಿಗೆ ಚೀನ ಪ್ರತಿಕ್ರಿಯಿಸಿದೆ. ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಗಡಿವಿವಾದ ಭವಿಷ್ಯದಲ್ಲಿ ಉಲ್ಬಣಗೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡಲು ಲಡಾಖ್‌ ಸಭೆ ತೀರ್ಮಾನಿಸಿದೆ. ಪ್ರಸ್ತುತ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಡಿ ಬಿಕ್ಕಟ್ಟನ್ನು ದೀರ್ಘ‌ ಕಾಲದ ವರೆಗೆ ಮುಂದುವರಿಸದೆ, ಮಾತುಕತೆ ಮೂಲಕ ಶೀಘ್ರವೇ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳು ಬಯಸುತ್ತಿವೆ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಹೇಳಿದ್ದಾರೆ.

ಟಾಪ್ ನ್ಯೂಸ್

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಕುಟುಂಬ ಸದಸ್ಯರಿಗೆ ಆಘಾತ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

11-sagara

Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

10-hosanagara

Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.