ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌ ಗೆಲುವು ; ಯಾವ ದೇಶದ ಮೇಲೆ ಏನು ಪರಿಣಾಮ?


Team Udayavani, Nov 8, 2020, 6:35 PM IST

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌ ಗೆಲುವು ; ಯಾವ ದೇಶದ ಮೇಲೆ ಏನು ಪರಿಣಾಮ?

ವಾಷಿಂಗ್ಟನ್ ಡಿಸಿ: ಹಲವು ದಿನಗಳ ಅನಿಶ್ಚಿತತೆಯ ಬಳಿಕ ಡೆಮಾಕ್ರಾಟ್‌ ಪಕ್ಷದ ಜೋ ಬೈಡೆನ್‌ ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಸ್ಥಾನಕ್ಕೇರುವುದು ಖಚಿತವಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ 4 ವರ್ಷಗಳ ಅಧಿಕಾರಾವಧಿಯಲ್ಲಿ ಜಗತ್ತಿನ ವಿವಿಧ ದೇಶಗಳೊಂದಿಗಿನ ಅಮೆರಿಕದ ಸಂಬಂಧದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಈಗ ಬೈಡೆನ್‌ರ ಗೆಲುವು ಅಮೆರಿಕ ಮತ್ತು ಇತರೆ ರಾಷ್ಟ್ರಗಳ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಚೀನಾ
ಮೇಲ್ನೋಟಕ್ಕೆ ಟ್ರಂಪ್‌ ನಿರ್ಗಮನವು ಚೀನಾಗೆ ಸಮಾಧಾನ ತಂದಿದೆ ಎಂದೇ ಎಲ್ಲರೂ ಭಾವಿಸಬಹುದು. ವ್ಯಾಪಾರ ಸಮರ, ಹಲವು ನಿರ್ಬಂಧ, ಕೊರೊನಾ ಸೋಂಕಿನ ಕಳಂಕವನ್ನು ಚೀನಾದ ಮೇಲೆ ಹೊರಿಸಿದ್ದ ಟ್ರಂಪ್‌ರಿಂದಾಗಿ ಚೀನಾ ಕೆಂಡವಾಗಿತ್ತು ನಿಜ. ಆದರೆ, ಅಂತಾರಾಷ್ಟ್ರೀಯ ವಿಶ್ಲೇಷಕರ ಪ್ರಕಾರ, ಟ್ರಂಪ್‌ ಸೋಲಿನಿಂದಾಗಿ ಚೀನಾಗೆ ಒಳಗೊಳಗೇ ನಿರಾಸೆಯಾಗಿದೆ.

ಏಕೆಂದರೆ, ಟ್ರಂಪ್‌ ಯಾವತ್ತೂ ಚೀನಾಗೆ ಪರೋಕ್ಷವಾಗಿ ವರವೇ ಆಗಿದ್ದರು. ದೇಶದೊಳಗೇ ಜನರನ್ನು ವಿಭಜಿಸಿದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾದ ಟ್ರಂಪ್‌ರಿಂದಾಗಿ ಜಗತ್ತಿನಲ್ಲಿ ಅಮೆರಿಕದ ಶಕ್ತಿಯು ಕುಂಠಿತಗೊಳ್ಳುತ್ತಾ ಸಾಗುತ್ತಿದೆ ಎಂಬುದು ಚೀನಾಗೆ ಸಂಭ್ರಮದ ವಿಷಯವಾಗಿತ್ತು. ಅಮೆರಿಕದ ಚುನಾವಣಾ ಫ‌ಲಿತಾಂಶ ಪ್ರಕಟವಾದಾಗಲೂ ಫ‌ಲಿತಾಂಶಕ್ಕಿಂತ ಹೆಚ್ಚಾಗಿ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನೇ ಚೀನಾ ಮಾಧ್ಯಮಗಳು ತೋರಿಸುತ್ತಿದ್ದುದೂ ಇದಕ್ಕೆ ಸಾಕ್ಷಿ.

ಇದನ್ನೂ ಓದಿ:ಪೆರ್ನೆ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ : ದರೋಡೆಕೋರರ ಬಗ್ಗೆ ಮಹತ್ವದ ಮಾಹಿತಿ ಲಭ್ಯ!

ಅಲ್ಲದೆ, ಹವಾಮಾನ ಬದಲಾವಣೆಯಂಥ ಪ್ರಮುಖ ವಿಚಾರಗಳ ಕುರಿತು ಸಹಕಾರ ಕೋರುವ ಬೈಡೆನ್‌ರ ನಿಲುವು ಚೀನಾಗೆ ನೆರವಾಗಲಾರದು. ಅಲ್ಲದೆ, ಅಮೆರಿಕದ ಮಿತ್ರರಾಷ್ಟ್ರಗಳೊಂದಿಗಿನ ಬಾಂಧವ್ಯ ವೃದ್ಧಿಗೆ ಬೈಡೆನ್‌ ಮುಂದಾಗಿರುವುದು ಕೂಡ ಚೀನಾಗೆ ಬಿಸಿ ಮುಟ್ಟಿಸುವ ಅಂಶವೇ ಆಗಿದೆ. ಚೀನಾದ ಸೂಪರ್‌ಪವರ್‌ ಗುರಿಗೆ ಈಗ ಬೈಡೆನ್‌ ಅಡ್ಡಗಾಲಾಗಿರುವುದಂತೂ ಸತ್ಯ.

ಭಾರತ
ಕಮಲಾ ಹ್ಯಾರಿಸ್‌ ಮೂಲ ಭಾರತವಾಗಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಆದರೆ, ಪ್ರಧಾನಿ ಮೋದಿ ವಿಚಾರಕ್ಕೆ ಬಂದರೆ, ಬೈಡೆನ್‌ ಅವರ ಸ್ಪಂದನೆ ನೀರಸವಾಗಿರಬಹುದು ಎನ್ನುತ್ತಾರೆ ತಜ್ಞರು. ಭಾರತವು ದೀರ್ಘ‌ಕಾಲದಿಂದಲೂ ಅಮೆರಿಕಕ್ಕೆ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರ. ಹೀಗಾಗಿ, ಈ ಸಂಬಂಧ ಬೈಡೆನ್‌ ಅಧ್ಯಕ್ಷತೆಯಲ್ಲೂ ಮುಂದುವರಿಯುವುದು ಖಚಿತ. ಚೀನಾದ ಪ್ರಾಬಲ್ಯ ತಗ್ಗಿಸಲು ಮತ್ತು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸಾಥ್‌ ನೀಡುವ ದಕ್ಷಿಣ ಏಷ್ಯಾದ ಪ್ರಮುಖ ದೇಶವೂ ಭಾರತವಾಗಿದೆ. ಅಲ್ಲದೆ, ವ್ಯಾಪಾರ ಸೇರಿದಂತೆ ಎಲ್ಲ ವಿಚಾರದಲ್ಲೂ ಅಮೆರಿಕಕ್ಕೆ ಭಾರತ ಬೇಕು, ಭಾರತಕ್ಕೆ ಅಮೆರಿಕ ಬೇಕು. ಇನ್ನು, ಕಾಶ್ಮೀರ, ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಸ್ವಲ್ಪಮಟ್ಟಿಗಿನ ಭಿನ್ನ ಅಭಿಪ್ರಾಯ ಇರುವ ಕಾರಣ ವೈಯಕ್ತಿಕವಾಗಿ ಬೈಡೆನ್‌-ಮೋದಿ ಸಂಬಂಧ ಹೇಳಿಕೊಳ್ಳುವಂತೆ ಇರಲಿಕ್ಕಿಲ್ಲ.

ಇದನ್ನೂ ಓದಿ:ಕೋವಿಡ್ ತಡೆಗಟ್ಟಲು ಬಿಸಿಜಿ ಲಸಿಕೆ ಪರಿಣಾಮಕಾರಿ ?: ಭಾರತೀಯ ವೈದ್ಯರಿಂದ ಹೊಸ ಅಧ್ಯಯನ

ಉತ್ತರ ಕೊರಿಯಾ
ಉತ್ತರ ಕೊರಿಯಾವು ಈ ಹಿಂದೆ ಬೈಡೆನ್‌ನರನ್ನು “ರ್ಯಾಬಿಡ್‌ ಡಾಗ್‌’ ಎಂದು ಕರೆದಿದ್ದರು. ಆದರೆ, ಈಗ ಕಿಮ್‌ ಜಾಂಗ್‌ ಉನ್‌ ಬಹಳ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಕಿಮ್‌ ಅವರಿಗೂ ಟ್ರಂಪ್‌ ಇನ್ನೂ 4 ವರ್ಷ ಅಧಿಕಾರದಲ್ಲಿರುವುದೇ ಬೇಕಿತ್ತು ಎನ್ನುತ್ತಾರೆ ಸಿಯೋಲ್‌ ರಾಜಕೀಯ ವಿಶ್ಲೇಷಕರಾದ ಲಾರಾ ಬಿಕೆರ್‌. ಟ್ರಂಪ್‌- ಕಿಮ್‌ ಭೇಟಿಯು ಕೇವಲ ಫೋಟೋಗೆ ಸೀಮಿತವಾಯಿತೇ ಹೊರತು ಹೇಳಿಕೊಳ್ಳುವಂಥ ಬದಲಾವಣೆ ಉಂಟುಮಾಡಲಿಲ್ಲ. ಅತ್ತ ಕಿಮ್‌ ಅವರು ಅಣ್ವಸ್ತ್ರ ಕ್ರೋಡೀಕರಣವನ್ನು ಮುಂದುವರಿಸಿದರೆ, ಅಮೆರಿಕವು ನಿರ್ಬಂಧವನ್ನು ಮುಂದುವರಿಸಿತು. ಆದರೆ, “ಕಿಮ್‌ ಜೊತೆಗೆ ಯಾವುದೇ ಸಭೆ ನಡೆಸುವ ಮುನ್ನ, ಅಣ್ವಸ್ತ್ರಗಳಿಂದ ದೂರ ಸರಿಯುವ ಅವರ ಯೋಜನೆಯನ್ನು ನಮ್ಮ ಮುಂದಿಡಬೇಕು’ ಎಂಬ ಷರತ್ತನ್ನು ಜೋ ಬೈಡೆನ್‌ ವಿಧಿಸಿದ್ದಾರೆ. ಮುಂದೇನಾಗುತ್ತೋ ನೋಡಬೇಕು.

ಯು.ಕೆ.
ಅಮೆರಿಕ ಮತ್ತು ಯು.ಕೆ. ನಡುವಿನ “ವಿಶೇಷ ಸಂಬಂಧ’ವು ಬೈಡೆನ್‌ ನಾಯಕತ್ವದಲ್ಲಿ ಸ್ವಲ್ಪಮಟ್ಟಿಗೆ ಕ್ಷೀಣಿಸುವ ಸಾಧ್ಯತೆಯಿದೆ. ಏಕೆಂದರೆ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ನಡುವೆ ಬಹಳ ಸಾಮ್ಯತೆಯಿತ್ತು. ಒಂದು ಬಾರಿ ಟ್ರಂಪ್‌ ಅವರು ಬೋರಿಸ್‌ರನ್ನು “ಬ್ರಿಟನ್‌ನ ಟ್ರಂಪ್‌’ ಎಂದೇ ಸಂಭೋದಿಸಿದ್ದರು. ಅಲ್ಲದೆ, ಬ್ರೆಕ್ಸಿಟ್‌ ವಿಚಾರದಲ್ಲಿ ಬೋರಿಸ್‌ ನಿಲುವು ಕೂಡ ಡೆಮಾಕ್ರಾಟ್‌ಗಳಿಗೆ ರುಚಿಸಿರಲಿಲ್ಲ. ಹೀಗಾಗಿ ಬೋರಿಸ್‌-ಬೈಡೆನ್‌ ದೋಸ್ತಿ ಬೋರಿಸ್‌-ಟ್ರಂಪ್‌ರಂತೆ ಇರುವ ಸಾಧ್ಯತೆ ಕಡಿಮೆ.

ಇರಾನ್‌
ಟ್ರಂಪ್‌ ಅವಧಿಯಲ್ಲಿ ಹಳಸಿರುವ ಅಮೆರಿಕ-ಇರಾನ್‌ ಸಂಬಂಧ ಮತ್ತೆ ಹಳಿಗೆ ಬರುವ ಸಾಧ್ಯತೆ ಇದೆ. ಟ್ರಂಪ್‌ ಆಡಳಿತಾವಧಿಯಲ್ಲಿ ಇರಾನ್‌ ಭಾರೀ ನಿರ್ಬಂಧವನ್ನು ಎದುರಿಸಿದ್ದಲ್ಲದೆ, ಆ ದೇಶದ ಆರ್ಥಿಕತೆ ನೆಲಕಚ್ಚಿತ್ತು. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಅವರ ಆಪ್ತ ಸ್ನೇಹಿತ ಜನರಲ್‌ ಖಾಸಿಂ ಸೊಲೆಮನಿಯನ್ನು ಕೊಲ್ಲಲು ಟ್ರಂಪ್‌ ಆದೇಶಿಸಿದ್ದು ಇರಾನ್‌ ಅನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ ಟ್ರಂಪ್‌ ಮತ್ತು ಇರಾನ್‌ ಸಂಬಂಧ ಹಾವು-ಮುಂಗುಸಿಯಂತಾಯಿತು. ಆದರೆ, ಈಗ ಬೈಡೆನ್‌ ಅವರನ್ನು ಇರಾನ್‌ ಅನ್ನು ಮತ್ತೆ ಸಂಧಾನದ ಮೇಜಿಗೆ ಕರೆಯುವ ಸಾಧ್ಯತೆ ಅಧಿಕವಾಗಿದೆ.

ರಷ್ಯಾ
ಇತ್ತೀಚೆಗಷ್ಟೇ ಬೈಡೆನ್‌ ಅವರು ರಷ್ಯಾವನ್ನು “ಅಮೆರಿಕಕ್ಕಿರುವ ಅತಿದೊಡ್ಡ ಬೆದರಿಕೆ’ ಎಂದು ಬಣ್ಣಿಸಿದ್ದರು. 2011ರಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್‌ ರಷ್ಯಾ ಚುನಾವಣೆ ಕುರಿತು ಪ್ರಸ್ತಾಪಿಸಿ, “ನಾನೇನಾದರೂ ಪುಟಿನ್‌ ಆಗಿದ್ದರೆ, ಮತ್ತೂಂದು ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರಲಿಲ್ಲ’ ಎಂದಿದ್ದರು. ಇದನ್ನು ಪುಟಿನ್‌ ಮರೆತಿರಲಿಕ್ಕಿಲ್ಲ. ಅಲ್ಲದೆ, 2016ರ ಅಮೆರಿಕ ಚುನಾವಣೆಯ ಫ‌ಲಿತಾಂಶದಲ್ಲಿ ರಷ್ಯಾದ ಕೈವಾಡವಿತ್ತು ಎಂಬ ಆರೋಪವೂ ಡೆಮಾಕ್ರಾಟ್‌ಗಳನ್ನು ಕೆರಳಿಸಿತ್ತು. ಈಗ ಬೈಡೆನ್‌ಗೆ ನಾಯಕತ್ವ ಸಿಕ್ಕಿದರೆ, ತಮ್ಮ ಮೇಲೆ ಇನ್ನಷ್ಟು ಒತ್ತಡ, ಮತ್ತಷ್ಟು ನಿರ್ಬಂಧ ಖಚಿತ ಎಂದು ರಷ್ಯಾ ಭಾವಿಸಿದೆ.

ಟಾಪ್ ನ್ಯೂಸ್

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.