ಕೇರಳದಲ್ಲಿ ಎಡಪಕ್ಷಗಳು, ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಟೀಕೆ
ಕೈ, ಸಿಪಿಎಂಗೆ ಸೈದ್ಧಾಂತಿಕ ಗೊಂದಲ
Team Udayavani, Mar 28, 2021, 7:30 AM IST
ಚಕ್ರಕ್ಕಲ್ (ಕೇರಳ): ಕಾಂಗ್ರೆಸ್ ಮತ್ತು ಎಡಪಕ್ಷಗಳು ಸದ್ಯದ ಮಟ್ಟಿಗೆ ಸೈದ್ಧಾಂತಿಕ ಗೊಂದಲದಲ್ಲಿ ಬಿದ್ದು ಒದ್ದಾಡುತ್ತಿವೆ. ಹಾಗಾ ಗಿಯೇ, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧೆಗೆ ಇಳಿದಿರುವ ಈ ಪಕ್ಷಗಳು, ದೂರದ ಪಶ್ಚಿಮ ಬಂಗಾಲದಲ್ಲಿ ಒಟ್ಟಿಗೆ ಕೈ ಜೋಡಿಸಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ.
ಕೇರಳದ ಚಕ್ರಕ್ಕಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ. ಪದ್ಮನಾಭನ್ ಅವರ ಪರವಾಗಿ ಆಯೋಜಿಸಲಾಗಿದ್ದ ಬಿಜೆಪಿ ರೋಡ್ ಶೋನಲ್ಲಿ ಮಾತನಾಡಿದ ಅವರು, ದಶಕಗಳಗಟ್ಟಲೆ ಈ ಎರಡೂ ಪಕ್ಷಗಳು ತಮ್ಮದೇ ಆದ ಸಿದ್ಧಾಂತಗಳನ್ನು ನಂಬಿಕೊಂಡು ಬಂದಿವೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ತಮ್ಮ ಸಿದ್ಧಾಂತಗಳ ಬಗ್ಗೆಯೇ ಗೊಂದಲದಲ್ಲಿ ಬಿದ್ದಿವೆ. ಹಾಗಾಗಿ ಇಲ್ಲಿ ಆ ಪಕ್ಷಗಳು ಶತ್ರುಗಳಾಗಿದ್ದರೆ, ಪಶ್ಚಿಮ ಬಂಗಾಲದಲ್ಲಿ ಮಿತ್ರರಾಗಿದ್ದಾರೆ ಎಂದು ಅವರು ಟೀಕಿಸಿದರು.
ಬಿಜೆಪಿ ಸ್ಥಿರ ನಿಲುವು: ತಮ್ಮ ಭಾಷಣದಲ್ಲಿ ಶಬರಿಮಲೆ ವಿವಾದವನ್ನು ಉಲ್ಲೇಖೀಸಿದ ಅವರು, ಶಬರಿಮಲೆ ವಿವಾದ ಎಲ್ಲರಿಗೂ ಗೊತ್ತಿರು ವಂಥದ್ದು. ಆ ವಿವಾದ ಭುಗಿಲೆದ್ದಿದ್ದಾಗ ಅನೇಕರು ಪ್ರತಿಭಟನೆಗೆ ಇಳಿದಿದ್ದರು. ಆಡಳಿತಾರೂಢ ಸಿಪಿಎಂ ಪಕ್ಷ ಹಾಗೂ ಆ ಪಕ್ಷದ ಮುಖ್ಯ ಮಂತ್ರಿ ಆ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ತನ್ನ ಸಂಪೂರ್ಣ ಶ್ರಮ ಹಾಕಿತು. ಕೇವಲ ಬಿಜೆಪಿ ಮಾತ್ರ ಶಬರಿಮಲೆ ವಿಚಾರದಲ್ಲಿ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹಾಗೂ ಸಿ.ಕೆ. ಪದ್ಮ
ನಾಭನ್, ದಶಕಗಳಿಂದಲೂ ಶಬರಿಮಲೆ ವಿಚಾರದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು.
ಮಾವ-ಅಳಿಯ ಗೆದ್ದರೆ ದಾಖಲೆ : ಎ. 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆ ಯಲ್ಲಿ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಯುವ ನೇತಾರ ಪಿ.ಎ. ಮೊಹಮ್ಮದ್ ರಿಯಾಸ್ ಗೆದ್ದರೆ, ಕೇರಳ ಮಟ್ಟಿಗೆ ಒಂದೇ ಚುನಾವಣೆಯಲ್ಲಿ ಮಾವ-ಅಳಿಯ ಇಬ್ಬರೂ ಗೆದ್ದ ದಾಖಲೆಗೆ ಭಾಜನರಾಗಲಿದ್ದಾರೆ.
ಪ್ರಭಾಕರನ್ ಭಾವಚಿತ್ರ!: ಎಲ್‌ಟಿಟಿಇ ಮಾಜಿ ನಾಯಕ ವೇಲುಪಿಳ್ಳೆ„ ಪ್ರಭಾಕರನ್ ಅಸುನೀಗಿ 10 ವರ್ಷಗಳೇ ಕಳೆದಿವೆ. ಆದರೆ ಪ್ರಸಕ್ತ ತಮಿಳುನಾಡು ವಿಧಾನಸಭಾ ಚುನಾವಣ ರ್ಯಾಲಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಆತನ ಭಾವಚಿತ್ರವನ್ನೇ ಬಳಸಿ ಪ್ರಚಾರ ಮಾಡುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವೈಕೋ ನೇತೃತ್ವದ ಎಂಡಿಎಂಕೆ, ಧೋಲ್ ತಿರುಮಾವಲವನ್ ನೇತೃತ್ವದ ವಿಸಿಕೆ, ಸೀಮನ್ ಅವರ ಎನ್‌ಟಿಕೆ, ರಾಮದಾಸ್ ನೇತೃತ್ವದ ಪಿಎಂಕೆ ಹಾಗೂ ಟಿ. ವೇಲುಮುರುಗನ್ ನೇತೃತ್ವದ ಟಿವಿಕೆ ಪಕ್ಷಗಳ ರ್ಯಾಲಿಗಳಲ್ಲಿನ ಪಕ್ಷದ ಬ್ಯಾನರ್‌ಗಳಲ್ಲಿ ಪ್ರಭಾಕರನ್ ಚಿತ್ರ ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಡಾ| ಸಿಂಗ್-ಮೋದಿ ನಡುವಿನ ವ್ಯತ್ಯಾಸ
2011ರಲ್ಲಿ ಶಬರಿಮಲೆಯಲ್ಲಿ ಕಾಲು¤ಳಿತಕ್ಕೆ 106 ಯಾತ್ರಿಕರು ಸಾವನ್ನಪ್ಪಿದ್ದಾಗ ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸೌಜನ್ಯಕ್ಕಾದರೂ ಕೇರಳಕ್ಕೆ ಆಗಮಿಸಲಿಲ್ಲ. ನೊಂದವರಿಗೆ ಸಾಂತ್ವನ ಹೇಳಲಿಲ್ಲ. ಆದರೆ 2016ರಲ್ಲಿ ಕೇರಳದ ಪರವೂರ್‌ನ ಪುತ್ತಿಂಗಲ್ ದೇವಸ್ಥಾನದ ಆವರಣದಲ್ಲಿ ಪಟಾಕಿ ಅವಘಡದಿಂದ 114 ಜನರು ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ನೊಂದವರಿಗೆ ಸಾಂತ್ವನ ಹೇಳಿದರು. ಕೇರಳದ ಜನತೆ ಈ ಎರಡೂ ಘಟನೆಗಳಲ್ಲಿ ಪ್ರಧಾನಿಗಳಾಗಿದ್ದವರು ನಡೆದ ರೀತಿಯನ್ನು ನೆನಪಿನಲ್ಲಿಟ್ಟುಕೊಳ್ಳ ಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.