ಜೂ. 26: ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಚಾಲನೆ
Team Udayavani, Jun 16, 2023, 7:49 AM IST
ಬೆಂಗಳೂರು: ಹುಬ್ಬಳ್ಳಿ- ಧಾರವಾಡದಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಡುವಿನ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂ.26ರಂದು ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ರೈಲಿಗೆ ಹಸುರು ನಿಶಾನೆ ತೋರಲಿದ್ದಾರೆ ಎನ್ನಲಾಗಿದೆ.
ಹೊಸ ರೈಲು ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನವೂ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಅದಕ್ಕೆ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆ ಇರಲಿದೆ. ಪ್ರಯಾಣದ ಅವಧಿ 6 ಗಂಟೆ 55 ನಿಮಿಷ.ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ರೈಲಿನ ಸರಾಸರಿ ವೇಗ ಗಂಟೆಗೆ 70.54 ಕಿ.ಮೀ. ಆಗಿರಲಿದೆ.
ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಡಲಿರುವ ರೈಲು ಧಾರವಾಡಕ್ಕೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಅಂದೇ ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ. ಅಂದ ಹಾಗೆ ಇದು ಮಿನಿ ವಂದೇಭಾರತ್ ಆಗಿದ್ದು, ಎಂಟು ಬೋಗಿಗಳು ಇರಲಿವೆ. ಸಾಮಾನ್ಯ ವಂದೇಭಾರತ್‌ನಲ್ಲಿ 16 ಬೋಗಿಗಳು ಇರುತ್ತವೆ.
ಸದ್ಯ ಚೆನ್ನೈನಿಂದ ಮೈಸೂರಿಗೆ ಸಂಚರಿಸುವ ರೈಲು ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಇದಲ್ಲದೆ ಮುಂಬಯಿ-ಗೋವಾ, ಪಟ್ನಾ-ರಾಂಚಿ, ಭೋಪಾಲ್- ಇಂದೋರ್ ಮತ್ತು ಭೋಪಾಲ್- ಜಬಲ್ಪುರ ನಡುವೆ ಸಂಚರಿಸಲಿರುವ ರೈಲುಗಳನ್ನೂ ಮೋದಿಯೇ ಉದ್ಘಾಟಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.