ಜುಲೈ 12.. ಪಾನಿಪೂರಿ.. ಗೂಗಲ್‌ನಿಂದ ಡೂಡಲ್‌ ಗೌರವ.. ಏನು ಈ ದಿನದ ವಿಶೇಷತೆ ?

ಇಲ್ಲಿದೆ ಕುತೂಹಲಕಾರಿ ಮಾಹಿತಿ

Team Udayavani, Jul 12, 2023, 5:50 PM IST

google doodle

ವಾಷಿಂಗ್ಟನ್‌: ಪಾನಿಪೂರಿ ಯಾರಿಗೆ ಇಷ್ಟ ಇಲ್ಲ ಹೇಳಿ. ಭಾರತದ ಅತ್ಯಂತ ನೆಚ್ಚಿನ ಚಾಟ್ಸ್‌ಗಳಾದ ಪಾನಿ ಪೂರಿ, ಗೋಲ್‌ ಗಪ್ಪ, ಪುಚ್ಕಾಸ್‌ ಇಂದು ಮತ್ತೊಮ್ಮೆ ಜಗತ್ತಿಗೆ ತೆರೆದುಕೊಂಡಿದೆ. ನೀವೇನಾದ್ರೂ ಇಂದು ಗೂಗಲ್‌ ಡೂಡಲ್‌ ನೋಡಿದ್ದೀರಾ ಅಂತಾದರೆ ಖಂಡಿತಾ ನಿಮ್ಮ ಬಾಯಲ್ಲಿ ನೀರೂರದೇ ಇರದು.

ಜುಲೈ 12 ನ್ನು ಜಗತ್ತಿನ ದೈತ್ಯ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಇಂಟರಾಕ್ಟೀವ್‌ ಗೇಮ್‌ ಡೂಡಲ್‌ ಮೂಲಕ ಭಾರತದ ಅತ್ಯಂತ ನೆಚ್ಚಿನ ಸ್ಟ್ರೀಟ್‌ಫುಡ್‌ಗಳಾದ ಪಾನಿ ಪೂರಿ, ಗೋಲ್‌ ಗಪ್ಪ ಮೂಲಕ ಸಂಭ್ರಮಿಸಿದೆ.

ಜುಲೈ 12 ಕ್ಕೂ ಪಾನಿಪೂರಿಗೂ ವಿಶೇಷ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಈ ದಿನ ಗೂಗಲ್‌ ತನ್ನ ಡೂಡಲ್‌ ಮೂಲಕ ಪಾನಿಪೂರಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದೆ.

2015 ರ ಜುಲೈ 12 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿನ ಇಂದೋರಿ ಝೈಕಾ ಮತ್ತು ದೈನಿಕ್‌ ಭಾಸ್ಕರ್‌ ಎನ್ನುವ ರೆಸ್ಟೋರೆಂಟ್‌ಗಳು ಮಾಸ್ಟರ್‌ ಚೆಫ್‌ ನೇಹಾ ಶಾ ಅವರ ಮಾರ್ಗದರ್ಶನದಲ್ಲಿ 51 ಫ್ಲೇವರ್‌ಗಳ ಮೂಲಕ ಪಾನಿಪೂರಿಯನ್ನು ತಯಾರಿಸಿ ವಿಶ್ವ ದಾಖಲೆ ಬರೆದಿತ್ತು. ಈ ದಾಖಲೆ ಬರೆದ ಸುಮಾರು 8 ವರ್ಷಗಳ ಬಳಿಕ ಇದೇ ದಿನ ಗೂಗಲ್‌, ಪಾನಿಪೂರಿಯ ತನ್ನ ಡೂಡಲ್‌ ಗೇಮ್ಸ್‌ನ್ನು ಬಿಡುಗಡೆ ಮಾಡಿ ಪಾನಿಪೂರಿಗೆ ವಿಶೇಷ ಗೌರವ ಸಲ್ಲಿಸಿದೆ.

ದೇಶದ ಬೇರೆ ಬೇರೆ ಭಾಗಗಳಲ್ಲಿ ಪಾನಿಪೂರಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ಕೇವಲ ಹೆಸರಷ್ಟೇ ಅಲ್ಲ, ಪಾನಿಪೂರಿ ತಯಾರಿಕೆಯಲ್ಲಿನ ವಿಧಾನ, ರುಚಿ, ಬಳಸುವ ಸಾಮಗ್ರಿಗಳಲ್ಲೂ ವ್ಯತ್ಯಾಸಗಳಿವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿ ದಕ್ಷಿಣ ಭಾರತದ ಭಾಗಗಳಲ್ಲಿ ಬಟಾಣಿ, ಮಸಾಲೆ ಪಾನಿಯ ಮಿಶ್ರಣವನ್ನು ಹಾಕಿದ ಪೂರಿಯೊಂದಿಗೆ ಸವಿಯಲು ನೀಡಲಾಗುತ್ತದೆ.

ಪಂಜಾಬ್‌, ಜಮ್ಮು-ಕಾಶ್ಮೀರ, ನವದೆಹಲಿಯಲ್ಲಿ ಬೇಯಿಸಿದ ಆಲೂಗಡ್ಡೆ, ಕಡಲೆ, ಜಲ್ಜೀರಾ ಫ್ಲೇವರ್‌ನ ಪಾನಿಯನ್ನು ಸಣ್ಣ ಪೂರಿಯ ಒಳಗೆ ಹಾಕಿ ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ʻಗೋಲ್‌ ಗಪ್ಪʼ ಎಂದು ಕರೆಯಲಾಗುತ್ತದೆ.

ಇನ್ನು ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಹುಣಸೆ ಹಣ್ಣಿನ ತಿರುಳನ್ನು ಬಳಸಿ ಪಾನಿಪೂರಿಯನ್ನು ತಯಾರಿಸುತ್ತಾರೆ. ಇದನ್ನು ಪುಚ್ಕಾಸ್‌ ಅಥವಾ ಫುಚ್ಕಾಸ್‌ ಎಂದು ಅಲ್ಲಿನ ಜನ ಕರೆಯುತ್ತಾರೆ.

ಒಟ್ಟಾರೆಯಾಗಿ ತನ್ನ ಇಂದಿನ ಡೂಡಲ್‌ ಗೇಮ್‌ ಬಗ್ಗೆ ಬರೆದುಕೊಂಡಿರುವ ಗೂಗಲ್‌ ಪಾನಿಪೂರಿಯನ್ನು, ʻಆಲೂಗಡ್ಡೆ, ಕಡಲೆ, ಮೆಣಸಿನಕಾಯಿ, ಮಸಾಲೆಗಳು ಮತ್ತು ಸುವಾಸನೆಯುಕ್ತ ನೀರಿನ್ನು ತುಂಬಿರುವ ಗರಿಗರಿಯಾದ ಚಿಪ್ಪಿನಿಂದ ಕೂಡಿದ ದಕ್ಷಿಣ  ಏಷ್ಯಾದ ಜನಪ್ರಿಯ ಆಹಾರʼ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: Explainer;ವಿವೇಕಾನಂದರ ಬಗ್ಗೆ ಅವಹೇಳನ…ಅಮೋಘ ದಾಸ್‌ ಗೆ ಇಸ್ಕಾನ್‌ ನಿಷೇಧ..ಏನಿದು ವಿವಾದ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Reliance AGM 2024: ರಿಲಯನ್ಸ್‌ನಿಂದ ಜಿಯೋ ಬ್ರೈನ್‌,100 ಜಿಬಿ ಉಚಿತ ಕ್ಲೌಡ್ ಸೇವೆ!

Reliance AGM 2024: ರಿಲಯನ್ಸ್‌ನಿಂದ ಜಿಯೋ ಬ್ರೈನ್‌,100 ಜಿಬಿ ಉಚಿತ ಕ್ಲೌಡ್ ಸೇವೆ!

Tech Review: Oneplus Nord 4-ಮೆಟಲ್ ಬಾಡಿಯ ಸುಂದರ ಸಮರ್ಥ ಕಾರ್ಯಾಚರಣೆ

Tech Review: Oneplus Nord 4-ಮೆಟಲ್ ಬಾಡಿಯ ಸುಂದರ ಸಮರ್ಥ ಕಾರ್ಯಾಚರಣೆ

iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ

iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ

X

X ಜಾಗತಿಕ ಸ್ಥಗಿತ;ಅನೇಕ ‘ಎಕ್ಸ್’ ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.