ಗುರುವಿನ ಗುರುತರ ಹೊಣೆಗಾರಿಕೆ


Team Udayavani, Jul 14, 2023, 6:19 AM IST

TEACHER SKETCH

ಗುರು ಎಂದರೆ ಸಂಸ್ಕೃತದಲ್ಲಿ ಕತ್ತಲೆಯನ್ನು ದೂರ ಮಾಡುವವನು ಎಂದು ಅರ್ಥ. ನಮ್ಮೊಳಗಿರುವ ಜ್ಞಾನವನ್ನು, ತಿಳಿವಳಿಕೆಯನ್ನು ಕೂಡ ಗುರು ಎನ್ನುತ್ತೇವೆ. ಈ ಅರಿವೇ ಗುರು ಎಂಬ ಅರಿವು ಬರಲು ಗುರುವಿನ ಆವಶ್ಯಕತೆ ಇದೆ. ವಿಶಾಲ ವ್ಯಾಪ್ತಿಯಲ್ಲಿ ನೋಡುವುದಾದರೆ ಗುರು ಎಂದರೆ ಆಧ್ಯಾತ್ಮಿಕ ಸಾಧನೆಗೆ ದಾರಿ ತೋರುವವ ಎಂಬ ಅರ್ಥ ಬರುತ್ತದೆ. ಈ ಅರ್ಥದ ವ್ಯಾಪ್ತಿಯನ್ನು ಕಿರಿದುಗೊಳಿಸಿದರೆ ಶಾಲಾ ಕಾಲೇಜುಗಳಲ್ಲಿ ಪಾಠ ಮಾಡುವವರು ಗುರುಗಳೇ ತಾನೆ? ಒಂದಕ್ಷರ ಕಲಿಸಿದರೂ ಆತ ಗುರು ಎನ್ನುವ ಸಂಸ್ಕೃತಿ ನಮ್ಮದು. ಆಧ್ಯಾತ್ಮಿಕ ಗುರುವಿನ ಹುಡುಕಾಟ ಬದುಕಿನಲ್ಲಿ ಒಂದು ಹಂತ ತಲುಪಿದ ಮೇಲೆ. ಆದರೆ ಮಕ್ಕಳ ಭವಿಷ್ಯ ಮತ್ತು ಅವರ ಮೂಲಕ ದೇಶದ ಭವಿಷ್ಯ ರೂಪಿಸಲು ನಮ್ಮ ಶಾಲಾ ಕಾಲೇಜುಗಳಲ್ಲಿನ ಗುರುಗಳು ತಮಗೆ ತಿಳಿಯದೆಯೇ ಮಹತ್ತರ ಪಾತ್ರ ವಹಿಸುತ್ತಾರೆ.

ಅಧ್ಯಾಪನ ವೃತ್ತಿಯನ್ನು ಕೆಲವರು ಇಷ್ಟಪಟ್ಟು ಮತ್ತೆ ಕೆಲವರು ಆಸಕ್ತಿ ಇಲ್ಲದಿದ್ದರೂ ಅದನ್ನು ಕೇವಲ ಒಂದು ಉದ್ಯೋಗವೆಂದು ಪರಿ ಗಣಿಸಿಯೂ ಆಯ್ಕೆ ಮಾಡುತ್ತಾರೆ. ಇಚ್ಛೆ ಇಲ್ಲದೆ ಬಂದ ಕೆಲವರು ಕ್ರಮೇಣ ಆಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಶಿಕ್ಷಕರಾಗಬಹುದು. ಆದರೆ ಉಳಿದ ಕೆಲವರು ಆಸಕ್ತಿಯೂ ಇಲ್ಲದೆ, ಆಸಕ್ತಿಯನ್ನು ಬೆಳೆಸಿಕೊಳ್ಳವ ಪ್ರಯತ್ನವನ್ನೂ ಮಾಡದೆ, ಕಾಟಾಚಾರಕ್ಕೆ ಈ ವೃತ್ತಿಯಲ್ಲಿ ಮುಂದುವರಿಯುತ್ತಾರೆ. ಇಂಥವರು ತುಂಬಾ ಅಪಾಯಕಾರಿಗಳು. ಕೇಳಲು ಇದು ಸಣ್ಣ ವಿಷಯವೆನಿಸಬಹುದು. ಆದರೆ ಅದರ ಪ್ರಭಾವ ಮಾತ್ರ ತುಂಬಾ ಗಾಢವಾಗಿದೆ.

ಹೆಚ್ಚು ಕಡಿಮೆ 18 ವರ್ಷ ಅಂದರೆ ದ್ವಿತೀಯ ಪಿಯುಸಿ ಮುಗಿಯುವ ತನಕ ವಿದ್ಯಾರ್ಥಿಗಳೆಲ್ಲ ಮಕ್ಕಳೆ. ಅವರ ಮೇಲೆ ಶಿಕ್ಷಕರು ಅಪಾರ ಪ್ರಭಾವ ಬೀರುತ್ತಾರೆ. ಎಷ್ಟೋ ವರ್ಷದ ಹಿಂದೆ ತಯಾರಿಸಿದ ನೋಟ್ಸ್‌ ಅನ್ನು ತರಗತಿಗೆ ತೆಗೆದು ಕೊಂಡು ಬಂದು, ಯಾಂತ್ರಿಕವಾಗಿ ಕಲಿಸುವ ಅಧ್ಯಾಪಕರಿಂದ ವಿದ್ಯಾರ್ಥಿ ಗಳಿಗೆ ಪಾಠದ ಬಗ್ಗೆ ಆಸಕ್ತಿ ಮೂಡುವು ದಾದರೂ ಹೇಗೆ? ಮಾಡುವ ಪಾಠದಲ್ಲೂ ಪದೇ ಪದೆ ತಪ್ಪುಗಳು ಕಂಡು ಬಂದರೆ ಅಂತಹ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಮೂಡಲು ಸಾಧ್ಯವೇ?, ಸಣ್ಣ ಸಣ್ಣ ತಪ್ಪಿಗೂ 10 ಸಲ ಬರೆದು ಕೊಂಡು ಬನ್ನಿ ಎಂದು ಇಂಫೋಸಿಶನ್‌ ಶಿಕ್ಷೆ ವಿಧಿಸುವ ಅಧ್ಯಾಪಕರ ಮೇಲೆ ಪ್ರೀತಿ ಮೂಡಲು ಸಾಧ್ಯವೇ? ತರಗತಿಯಲ್ಲಿ ಪಕ್ಷಪಾತ ಮಾಡುವ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟಪಡುವರೇ? ಹಾಗೆಂದು ವಿದ್ಯಾರ್ಥಿಗಳೆಲ್ಲ ಸಂಭಾವಿತರು ಎಂದಲ್ಲ. ಇಂದಿನ ವಿದ್ಯಾರ್ಥಿಗಳು ಅತೀ ಭಯಂಕರ ರಾಗಿರುತ್ತಾರೆ. ಅವರನ್ನು ಸೂಕ್ಷ್ಮವಾಗಿ ನಿಭಾ ಯಿ ಸುವುದು ಒಂದು ಕಲೆ.

ಪ್ರಾಥಮಿಕ ಶಾಲೆ ಗಳಲ್ಲಿ ಸ್ವಲ್ಪಮಟ್ಟಿಗೆ ದಂಡನೆಯು ಬೇಕಾಗ ಬಹುದು. ಆದರೆ ಇದು ಕೊನೆಯ ಅಸ್ತ್ರವಾಗಿದ್ದರೆ ಒಳ್ಳೆಯದು. ಅವರ ಜತೆ ಒರಟಾಗಿ ವರ್ತಿಸಿ, ಕೇವಲ ಶಿಕ್ಷೆ ವಿಧಿಸಿ ಅವರನ್ನು ತಿದ್ದುವುದಕ್ಕಿಂತ, ಅವರ ಮನಃಪರಿವರ್ತನೆ ಮಾಡಿ ಅವರನ್ನು ಸರಿದಾರಿಗೆ ತರುವುದು ಹೆಚ್ಚು ಸೂಕ್ತ. ಇದು ಒಬ್ಬ ಉತ್ತಮ ಶಿಕ್ಷಕನಿಂದ ಆಗಬೇಕಾದದ್ದು.
ಅಧ್ಯಾಪನ ವೃತ್ತಿಯಲ್ಲಿರುವವರು ಸದಾ ಅಧ್ಯಯನ ಶೀಲರಾಗಿರಬೇಕು. ಬೆರಳ ತುದಿಯಲ್ಲಿ ಬೇಕಾದ ಮಾಹಿತಿ ಸಿಗುವ ಈ ಕಾಲದಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡಲು ಶಕ್ತರಿರಬೇಕು. ಪಾಠ ಮಾಡು ವಾಗ ತಪ್ಪುಗಳಾಗದಂತೆ ತರಗತಿಗೆ ಹೋಗುವ ಮೊದಲು ಸರಿಯಾದ ತಯಾರಿ ನಡೆಸಿರಬೇಕು. ಇದು ಅವರ ಉದ್ಯೋಗಕ್ಕೆ ಅವರು ಕೊಡುವ ಗೌರವ. ಒಂದುವೇಳೆ ತಪ್ಪುಗಳಾದರೂ ಅದನ್ನು ಒಪ್ಪಿಕೊಂಡು ಮುಂದಿನ ತರಗತಿಯಲ್ಲಿ ಅದರ ಸರಿಯಾದ ವಿವರಣೆ ನೀಡಬೇಕು. ಶಾಲಾ ಪಾಠದ ಜತೆಗೆ ಮಕ್ಕಳಿಗೆ ನೀತಿ ಪಾಠವನ್ನು ಸಂದರ್ಭಕ್ಕೆ ಅನುಗುಣ ವಾಗಿ ಕಲಿಸಬೇಕು. ಶಾಲಾ ಪರೀಕ್ಷೆಗೆ ಮುಖ್ಯ ವಾದುದನ್ನು ಮಾತ್ರ ಗಣನೆಗೆ ತೆಗೆದು ಕೊಳ್ಳದೇ ಬದುಕಿನ ಪರೀಕ್ಷೆಗೆ ಬೇಕಾದ್ದನ್ನು ಕಲಿಸ ಬೇಕು.

ಯಾರಿಂದಲೂ ಕದಿಯಲಾಗದ ಸಂಪತ್ತು ವಿದ್ಯೆ ಎಂದು ಮಕ್ಕಳ ಮನದಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆ, ಬುದ್ಧಿಮಟ್ಟ, ಮುಂತಾದವುಗಳನ್ನು ಗಮನಿಸದೇ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ಭಾವದಿಂದ ಕಾಣಬೇಕು. ಮಕ್ಕಳು ಕೇಳಿ ತಿಳಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುತ್ತಾರೆ. ಹಾಗಾಗಿ ಶಿಕ್ಷಕರು ತಾವು ಸ್ವತಃ ಮಕ್ಕಳಿಗೆ ಆದರ್ಶ ಪ್ರಾಯರಾಗಿರಬೇಕು. ತಾವು ಪಾಠ ಮಾಡುವ ವಿಷಯದ ಮೇಲೆ ಸಂಪೂರ್ಣ ಹಿಡಿತ ಹೊಂದಿರಬೇಕು. ಮಕ್ಕಳ ಜತೆ ಆತ್ಮೀಯವಾಗಿ ಬೆರೆಯಬೇಕು. ವಿದ್ಯಾರ್ಥಿ ದೆಸೆ ಯಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದು ಪ್ರತಿಯೊಬ್ಬ ಗುರುವಿನ ಕರ್ತವ್ಯ.

ಈಗಿನ ಶಿಕ್ಷಣ ಪದ್ಧತಿಯಲ್ಲಿ ಪಾಠ ಮಾಡುವುದರ ಜತೆಜತೆಗೆ ಇರುವ ಅಸಂಖ್ಯಾತ ಇತರ ಜವಾಬ್ದಾರಿ ಗಳಿಂದ ಅಧ್ಯಾಪಕ ಹೈರಾಣಾಗಿರುವುದು ನಿಜ. ಆದರೂ ಸಿಕ್ಕ ಸಮಯದಲ್ಲಿ ಆದರ್ಶ ವಿದ್ಯಾರ್ಥಿ ಗಳನ್ನು ರೂಪಿಸುವಲ್ಲಿ ಪ್ರಯತ್ನಿಸುವುದು ಪ್ರತಿ ಯೊಬ್ಬ ಶಿಕ್ಷಕನ ಜವಾಬ್ದಾರಿ. ಹಾಗೆಯೇ ಒಬ್ಬ ಆದರ್ಶ ಶಿಕ್ಷಕ ಮಕ್ಕಳ ಜತೆ ಸ್ವಲ್ಪ ಅಂತರ ಕಾಪಾಡಿ ಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವೃತ್ತಿಗೂ ಅದರದೇ ಆದ ಘನತೆ ಇರುತ್ತದೆ. Once a teacher always a teacher. ಹಾಗಾಗಿ ಇಷ್ಟಪಟ್ಟೋ, ಕಷ್ಟಪಟ್ಟೋ ಒಮ್ಮೆ ಒಂದು ವೃತ್ತಿಯನ್ನು ಆರಿಸಿದ ಅನಂತರ ಅದಕ್ಕೆ ನ್ಯಾಯ ಒದಗಿಸಲೇಬೇಕು. ಅದರಲ್ಲೂ ಶಿಕ್ಷಕ ವೃತ್ತಿಯ ಜವಾಬ್ದಾರಿ ಒಂದು ತೂಕ ಹೆಚ್ಚೆ. ಶಿಕ್ಷಕರು ಶಾಲೆಯ ಒಳಗೂ ಹೊರಗೂ ತಮ್ಮ ನಡತೆಯಲ್ಲಿ ಒಂದು ಘನತೆಯನ್ನು ಕಾಪಾ ಡಿಕೊಳ್ಳಬೇಕಾಗುತ್ತದೆ.

ದೇಶದ ಮುಂದಿನ ಭವಿಷ್ಯವಾದ ಒಂದು ಪೀಳಿಗೆಯು ತಯಾರಾಗುವುದು ಈ ಶಾಲಾ ಕಾಲೇಜುಗಳಲ್ಲಿ. ಅಲ್ಲಿಯೇ ಅವರಿಗೆ ಬೇಕಾದ ಸತ್ವ ದೊರಕಿದರೆ, ಮುಂದೆ ಅವರು ಒಂದು ಉತ್ತಮ ನಾಡು ಕಟ್ಟುವುದರಲ್ಲಿ ಸಂಶಯವಿಲ್ಲ. ದೇಶದಲ್ಲಿ ಒಂದು ಆದರ್ಶ ಶಿಕ್ಷಕ ವೃಂದ ತಯಾರಾಗಲಿ ಮತ್ತು ಅವರಿಂದ ಒಂದು ಸದೃಢ ಯುವ ಪೀಳಿಗೆಯ ನಿರ್ಮಾಣವಾಗಲಿ ಎಂದು ಹಾರೈಸೋಣ.

ಅಪಾರ ಗೌರವ
ಗುರು ಅಥವಾ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಕಾಲಚಕ್ರ ಉರುಳಿದಂತೆ ಶಿಕ್ಷಕ ವೃತ್ತಿ ಎನ್ನುವುದು ಇತರ ವೃತ್ತಿಗಳಂತಾಗಿ ಕೇವಲ ವೇತನ ಪಡೆಯಲೋಸುಗ ಒಂದು ಉದ್ಯೋಗ ಎಂದು ಪರಿಭಾವಿಸಲ್ಪಟ್ಟಿರಬಹುದು. ಆದರೆ ಇಂದಿಗೂ ಸಮಾಜದಲ್ಲಿ ಶಿಕ್ಷಕ ಎಂದರೆ ಪ್ರತಿಯೋರ್ವನಿಗೂ ಒಂದು ಅವ್ಯಕ್ತ ಭಯ, ಪ್ರೀತಿ, ಗೌರವ ಇದ್ದೇ ಇರುತ್ತದೆ. ಆದರೆ ಈ ಹಿಂದಿನಂತೆ ಆತ ಶಿಕ್ಷಕರ ಮೇಲಣ ತನ್ನ ಈ ಎಲ್ಲ ಭಾವನೆಗಳನ್ನು ಸಮಾಜದ ಮುಂದೆ ತೋರ್ಪಡಿಸಲಾರ. ಹಾಗೆಂದು ಆತನಿಗೆ ಶಿಕ್ಷಕರ ಮೇಲೆ ಆದರಾಭಿಮಾನ ಇಲ್ಲ ಎಂದಲ್ಲ.

ಅದರಲ್ಲೂ ಪ್ರಾಥಮಿಕ ಹಂತದಲ್ಲಿ ಕಲಿಸಿದ ಶಿಕ್ಷಕರೆಂದರೆ ಅವರ ಮೇಲೆ ಒಂದಿಷ್ಟು ಹೆಚ್ಚೇ ಗೌರವವಿರುತ್ತದೆ. ಎಳೆಯ ಮಕ್ಕಳ ಪುಂಡಾಟಗಳನ್ನೆಲ್ಲ ಸಹಿಸಿಕೊಂಡು ಅವರನ್ನು ತಿದ್ದಿತೀಡಿ, ವಿದ್ಯಾರ್ಜನೆಯ ಹಸಿವುಳ್ಳ ಓರ್ವ ವಿದ್ಯಾರ್ಥಿಯನ್ನು ರೂಪಿಸುವ ಹೊಣೆಗಾರಿಕೆ ಪ್ರಾಥಮಿಕ ಶಾಲಾ ಶಿಕ್ಷಕರದ್ದಾಗಿದ್ದರೆ ದೇಶದ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಗುರುತರ ಜವಾಬ್ದಾರಿ ಪ್ರೌಢ ಮತ್ತು ಕಾಲೇಜು ಶಿಕ್ಷಕರದ್ದಾಗಿದೆ. ಹೀಗಾಗಿ ವಿದ್ಯಾರ್ಥಿಯ ಪ್ರತಿಯೊಂದೂ ಶೈಕ್ಷಣಿಕ ಹಂತದಲ್ಲೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಲ್ಲ ಅಡೆತಡೆಗಳ ನಡುವೆ ತಮ್ಮ ಈ ಹೊಣೆಗಾರಿಕೆಯನ್ನು ಅರಿತುಕೊಂಡು ಶಿಕ್ಷಕರು ಕಾರ್ಯನಿರ್ವಹಿಸಿದಾಗ ಸಹಜವಾಗಿಯೇ ಸಮಾಜದಲ್ಲಿ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ.

ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.