ಐತಿಹಾಸಿಕ ತೀರ್ಪುಗಳ ಸರದಾರ ನ್ಯಾ. ನಾರಿಮನ್ ನಿವೃತ್ತಿ
- ಶಬರಿಮಲೆ, ಸಲಿಂಗ ಕಾಮ, ಮೂಲಭೂತ ಹಕ್ಕುಗಳ ಬಗ್ಗೆ ಚರಿತ್ರಾರ್ಹ ತೀರ್ಪು ನೀಡಿದ್ದ ಸುಪ್ರೀಂ ನ್ಯಾಯಮೂರ್ತಿ
Team Udayavani, Aug 12, 2021, 9:30 PM IST
ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಿರುವ ಅನೇಕ ಐತಿಹಾಸಿಕ ತೀರ್ಪುಗಳ ಹಿಂದಿದ್ದ ನ್ಯಾ. ರೋಹಿಂಟನ್ ಫಾಲಿ ನಾರಿಮನ್, ಗುರುವಾರ ನಿವೃತ್ತರಾಗಿದ್ದಾರೆ.
2014, ಜು. 7ರಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದ ನ್ಯಾ. ನಾರಿಮನ್, 13,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.
ಮೂಲಭೂತ ಹಕ್ಕುಗಳ ಸಂರಕ್ಷಣೆ, ಐಟಿ ಕಾಯ್ದೆಯಡಿ ಬಂಧಿಸುವ ಅಧಿಕಾರವನ್ನು ರದ್ದುಗೊಳಿಸುವುದು, ಸಲಿಂಗ ಕಾಮವನ್ನು ಶಿಕ್ಷಾರ್ಹ ಪ್ರಕರಣಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದು, ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ ಹೆಗ್ಗಳಿಕೆ ನ್ಯಾ. ನಾರಿಮನ್ ಅವರದ್ದು.
ಇದನ್ನೂ ಓದಿ:ಇನ್ಮುಂದೆ ಸರಕಾರಿ ಕಚೇರಿ ಹೊರತು ಪಡಿಸಿ ಉಳಿದೆಡೆ ಗಾರ್ಡ್ ಆಫ್ ಹಾನರ್ ಬೇಡ : ಸಿಎಂ
ನ್ಯಾಯಾಂಗದ ಆಶಯ ಕಾಪಾಡಿದವರು: ಸಿಜೆಐ
ನ್ಯಾ. ಫಾಲಿಮನ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಇಂದು ನನ್ನ ಸಹೋದರ ನ್ಯಾ. ನಾರಿಮನ್ ಅವರ ನಿವೃತ್ತಿಯಿಂದ ನ್ಯಾಯಾಂಗದ ಆಶಯಗಳನ್ನು ಕಾಪಾಡುತ್ತಿದ್ದ ಸಿಂಹವೊಂದರ ಸೇವೆಯೊಂದು ಮುಕ್ತಾಯವಾದಂತಾಗಿದೆ. ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದು, “ಹಂಸಕ್ಷೀರ’ ಮಾದರಿಯ ನ್ಯಾಯ ವಿಲೇವಾರಿ ಅವರ ವಿಶೇಷತೆಯಾಗಿತ್ತು” ಎಂದು ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.