Kabaddi: ಇರಾನ್‌ಗೆ ಸೋಲು ಫೈನಲ್‌ಗೆ ಲಗ್ಗೆ ಹಾಕಿದ ಭಾರತ
Team Udayavani, Jun 30, 2023, 6:34 AM IST
ಬೂಸಾನ್: ಬಲಿಷ್ಠ ಇರಾನ್ ತಂಡವನ್ನು 33-28 ಅಂತರದಿಂದ ಪರಾಭವಗೊಳಿಸಿದ ಭಾರತ ಏಷ್ಯನ್ ಕಬಡ್ಡಿ ಚಾಂಪಿ ಯನ್‌ಶಿಪ್ ಫೈನಲ್‌ಗೆ ಲಗ್ಗೆ ಹಾಕಿದೆ. ಶುಕ್ರವಾರ ಪ್ರಶಸ್ತಿ ಸಮರ ಏರ್ಪಡ ಲಿದ್ದು, ಇಲ್ಲಿ ಮತ್ತೆ ಇರಾನ್ ತಂಡವೇ ಎದುರಾಗುವ ಸಾಧ್ಯತೆ ಇದೆ.
ಇದು ಭಾರತಕ್ಕೆ ಒಲಿದ ಸತತ 4ನೇ ಗೆಲುವು. 8 ಅಂಕದೊಂದಿಗೆ ಅಗ್ರಸ್ಥಾನದ ಗೌರವ ಪಡೆದಿದೆ. ಕೊರಿಯಾ, ಚೈನೀಸ್ ತೈಪೆ ಮತ್ತು ಜಪಾನ್ ತಂಡಗಳನ್ನು ಭಾರತ ದೊಡ್ಡ ಅಂತರದಿಂದ ಮಗುಚಿತ್ತು.
ಹಾಗೆಯೇ ಇದು ಇರಾನ್‌ಗೆ ಎದುರಾದ ಮೊದಲ ಸೋಲು. ಅದು 4 ಪಂದ್ಯಗಳಿಂದ 6 ಅಂಕ ಗಳಿಸಿದೆ. ಚೈನೀಸ್ ತೈಪೆ ಕೂಡ 6 ಅಂಕ ಹೊಂದಿದೆ. ಆದರೆ ಅದು ಈಗಾಗಲೇ ಲೀಗ್ ಸ್ಪರ್ಧೆಗಳನ್ನು ಮುಗಿಸಿದೆ. ಜಪಾನ್ 4 ಅಂಕಗ ಳೊಂದಿಗೆ 4ನೇ ಸ್ಥಾನದಲ್ಲಿದೆ. ಶುಕ್ರ ವಾರ ಇರಾನ್-ಜಪಾನ್ ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖೀ ಆಗಲಿವೆ. ಇದನ್ನು ಭಾರೀ ಅಂತ ರದಿಂದ ಗೆದ್ದರಷ್ಟೇ ಜಪಾನ್‌ಗೆ ಫೈನಲ್ ಸಾಧ್ಯ.
ಫೈನಲ್ ಪಂದ್ಯ ಭಾರತೀಯ ಕಾಲಮಾನದಂತೆ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಆದರೆ ಇದಕ್ಕೂ ಮುನ್ನ 7.30ಕ್ಕೆ ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ.
ಜಿದ್ದಾಜಿದ್ದಿ ಪೈಪೋಟಿ
ಭಾರತ-ಇರಾನ್ ಮುಖಾ ಮುಖೀ ಕೂಟದಲ್ಲೇ ತೀವ್ರ ಪೈಪೋಟಿ ಕಂಡ ಪಂದ್ಯವೆನಿಸಿತು. ತ್ರಿವಳಿ ರೈಡರ್‌ಗಳಾದ ಪವನ್ ಸೆಹ್ರಾವತ್, ಅರ್ಜುನ್ ದೇಶ್ವಾಲ್ ಮತ್ತು ಅಸ್ಲಾಮ್ ಇನಾಮಾªರ್ ಉತ್ತಮ ಪ್ರದರ್ಶನ ನೀಡಿದರು. ವಿರಾಮದ ವೇಳೆ ಭಾರತ 10 ಅಂಕಗಳ ಮುನ್ನಡೆ ಸಾಧಿಸಿದ ಹುರುಪಿನಲ್ಲಿತ್ತು. ಸೆಹ್ರಾವತ್ 16 ಅಂಕ ತಂದಿತ್ತರು.
ಇರಾನ್‌ನ ಪ್ರಮುಖ ರೈಡರ್‌ಗಳಾದ ಅಲಿರೇಝ, ಹೈದರ್ ಅಲಿ, ಇಕ್ರಾಮಿ ಉತ್ತಮ ಹೋರಾಟ ಸಂಘಟಿಸಿದರು. ಆದರೆ ಸ್ಟಾರ್ ಲೆಫ್ಟ್ ಕಾರ್ನರ್ ಆಟಗಾರ ಮೊಹಮ್ಮದ್ ರೇಝ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಪಂದ್ಯದ ಮುಕ್ತಾಯಕ್ಕೆ ಇನ್ನೇನು 2 ನಿಮಿಷ ಬಾಕಿ ಇರುವಾಗ ಇರಾನ್ ಪ್ರಬಲ ಹೋರಾಟ ಸಂಘಟಿಸಿತು. ಅಂಕಗಳ ಅಂತರ ಎರಡಕ್ಕೆ ಬಂದು ನಿಂತಿತ್ತು. ಆದರೆ ಅದೃಷ್ಟ ಭಾರತದ ಕಡೆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.