ಹೈದರಾಬಾದ್ ಸುತ್ತಿ ಕೊನೆಗೂ ಕಲಬುರಗಿಗೆ ಬಂದಿಳಿದ ಅಲಯನ್ಸ್ ಏರ್ ವಿಮಾನ
Team Udayavani, Aug 16, 2020, 6:42 PM IST
ಕಲಬುರಗಿ: ಹವಾಮಾನ ವೈಪರೀತ್ಯದಿಂದಾಗಿ ಇಳಿಯಲು ಸಾಧ್ಯವಾಗದೆ ಹೈದರಾಬಾದ್ ಗೆ ಮಾರ್ಗ ಬದಲಾವಣೆ ಮಾಡಿದ್ದ ಅಲಯನ್ಸ್ ಏರ್ ವಿಮಾನ ಕೊನೆಗೂ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಬೆಂಗಳೂರಿನಿಂದ ರವಿವಾರ ಬೆಳಿಗ್ಗೆ 10.15ಕ್ಕೆ 50 ಜನ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿ 11.45ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ಮೋಡಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದ್ದ ಕಾರಣ ವಿಮಾನ ಲ್ಯಾಂಡ್ ಆಗಿರಲಿಲ್ಲ.
ಕಲಬುರಗಿ ಸುತ್ತ-ಮುತ್ತ 40 ನಿಮಿಷಗಳ ಕಾಲ ಆಗಸದಲ್ಲೇ ವಿಮಾನ ಸುತ್ತುವರಿದರೂ ಲ್ಯಾಂಡಿಂಗ್ ಗೆ ಎಟಿಸಿ ಸಿಗ್ನಲ್ ಅನುಮತಿ ನೀಡಿರಲಿಲ್ಲ. ಹೀಗಾಗಿ ತನ್ನ ಮಾರ್ಗವನ್ನು ಬದಲಿಸಿ ಹೈದರಾಬಾದ್ ಗೆ ಅಲಯನ್ಸ್ ವಿಮಾನ ತೆರಳಿತ್ತು. ನಂತರದಲ್ಲಿ ವಾತಾವರಣ ತಿಳಿಯಾಗಿದ್ದರಿಂದ ಹೈದರಾಬಾದ್ ನಿಂದ ಕಲಬುರಗಿಗೆ ಸುರಕ್ಷತವಾಗಿ ಬಂದು ಇಳಿಯಿತು.
ಸಂಜೆ 4.20ಕ್ಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿ, ಇಲ್ಲಿಂದ 5ಗಂಟೆಗೆ ಬೆಂಗಳೂರಿಗೆ ಹಾರಾಟ ಮಾಡಿತು. ಕಲಬುರಗಿಯಿಂದ 53 ಜನ ಪ್ರಯಾಣಿಕರು ಪ್ರಯಾಣಿಸಿದರು. ಇನ್ನು, ಲ್ಯಾಂಡಿಂಗ್ ಸಮಸ್ಯೆಯಿಂದ ಬೆಂಗಳೂರಿಗೆ ವಾಪಸ್ ಹೋಗಿದ್ದ ಸ್ಟಾರ್ ಏರ್ ವಿಮಾನ ಮರಳಿ ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.