ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಶಾಸಕರ ಸಭೆ: ಇನ್ನೊಂದು ಯಾತ್ರೆಗೆ ಸಿದ್ಧತೆ
ನಲವತ್ತೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಕ್ರಾಂತಿ ಯಾತ್ರೆ
Team Udayavani, Feb 1, 2022, 4:33 PM IST
ಬೆಂಗಳೂರು : ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಶಾಸಕರು ಮಂಗಳವಾರ ಮಹತ್ವದ ಸಭೆ ನಡೆಸಿ ನಲವತ್ತೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಕ್ರಾಂತಿ ಯಾತ್ರೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ,ಇವತ್ತು ನಮ್ಮ ಭಾಗದ ಶಾಸಕರ ಸಭೆ ಮಾಡಿದ್ದೇವೆ ಹತ್ತು ಶಾಸಕರು ಭಾಗಿಯಾಗಿದ್ದು , ಉಳಿದವರು ಕರೆ ಮಾಡಿ ಸಲಹೆ ಕೊತ್ತಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಲಾಗಿದೆ. ಅಭಿವೃದ್ಧಿ ಮಾಡಲು ಹಿರಿಯರು 371 ಜೆ ತಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚಿನ ಅನುಧಾನ ನೀಡಲಾಗಿತ್ತು, ಯವುದೇ ಅನುಧಾನ ನಮ್ಮ ಸರ್ಕಾರದಲ್ಲಿ ತಡೆದಿರಲಿಲ್ಲ.ಬಿಜೆಪಿ ಸರ್ಕಾರ ಬಂದು ೩೦ ತಿಂಗಳು ಆಗಿದೆ.ಆದರೆ ಬಿಜೆಪಿ ಸರಕಾರದಿಂದ ಯವುದೇ ಅನುಧಾನ ಬಂದಿಲ್ಲ ಎಂದರು.
ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದು, ನಲವತ್ತೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಕ್ರಾಂತಿ ಯಾತ್ರೆ ಮಾಡುತ್ತೇವೆ ಎಂದು ಹೇಳಿದರು.
ಕೇವಲ ಕಲ್ಯಾಣ ಕರ್ನಾಟಕ ಅಂತ ಮರು ನಾಮಕರಣ ಮಾಡಿದ್ದಾರೆ. ಮೂರು ತಿಂಗಳಿಗೊಮ್ಮೆ ಸಭೆ ಮಾಡಬೇಕಿತ್ತು. ಕ್ರೀಯಾ ಯೋಜನೆ ತರಬೇಕಿತ್ತು, ಸಿಎಂ ಕೇವಲ ಭಾಷಣ ಮಾತ್ರ ಮಾಡುತ್ತಾರೆ. ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ, ಶಿಕ್ಷಕರು ಇಲ್ಲದಿದ್ದರೆ ಮಕ್ಕಳ ಶಿಕ್ಷಣ ಹೇಗೆ ಆಗುತ್ತದೆ. ಕೋವಿಡ್ ನೆಪ ವೊಡ್ಡಿ ಅನುಧಾನ ಕಟ್ ಮಾಡಿದ್ದಾರೆ. ಬೇರೆ ಎಲ್ಲ ಕಾರ್ಯಾಕ್ರಮಗಳಿಗೆ ಅನುಧಾನ ಕೊಟ್ಟಿದ್ದಾರೆ.
ಕೇವಲ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಣ ಕಟ್ ಮಾಡಿದ್ದಾರೆ. ಇಲ್ಲಿಯವರೆಗೆ ಕ್ರೀಯಾ ಯೋಜನೆ ಜಾರಿಯಗಿಲ್ಲ
ಸಾವಿರದ ಐದುನೂರು ಕೋಟಿ ಖರ್ಚು ಮಾಡಿದ್ದು, ಇನ್ನೂ ಮೂರು ಸಾವಿರ ಕೋಟಿ ಕೊಡುವುದಾಗಿ ಸಿಎಂ ಹೇಳಿದ್ದಾರೆ, ಆದರೆ ಕೇವಲ ಇನ್ನೂರೈವತ್ತು ಕೋಟಿ ಖರ್ಚು ಮಾಡಿದ್ದರೆ. ನಮ್ಮನ್ನು ಎರಡನೆ ದರ್ಜೆ ಪ್ರಜೇಗಳಂತೆ ನೋಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಸರ್ಕಾರ ಮಾಡಿಲ್ಲ ಎಂದು ಸಮಸ್ಯೆಗಳ ಸರಮಾಲೆಯನ್ನೇ ಮುಂದಿಟ್ಟರು.
ಪೊಲೀಸ್ ನೇಮಕಾತಿ ಕೂಡ ಆಗಿಲ್ಲ.ಇದರಿಂದಾಗಿ ನಮ್ಮ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಎಲ್ಲ ನೇಮಕಾತಿಯಲ್ಲಿ ಮೊದಲು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಬೇಕು. ಆ ಬಳಿಕ ಸ್ಥಳಿಯ ವೃಂದದ ಪಟ್ಟಿ ತಯಾರು ಮಾಡಬೇಕು. ಆಗ ಮಾತ್ರ ನಮ್ಮ ಭಾಗದ ಅಭ್ಯರ್ಥಿಗಳಿಗೆ ನ್ಯಾಯ ಸಿಗುತ್ತದೆ. ನಮ್ಮ ಅಭ್ಯರ್ಥಿಗಳಿಗೆ ವಂಚಿಸಲು ಹೊಸ ಸರ್ಕ್ಯೂಲರ್ ಹೊರಡಿಸಿದ್ದಾರೆ. ನೇರ ಹುದ್ದೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂದರು.
ನಾಳೆ ಸಿಎಂ ಸಮಯ ಕೇಳಿದ್ದೇವೆ, ಸಿಎಂ ಭೇಟಿಯಾಗಿ ಅನ್ಯಾಯದ ಬಗ್ಗೆ ಗಮನಕ್ಕೆ ತರುತ್ತೇವೆ. ಸರಿ ಪಡಿಸಲು ನಾವೆಲ್ಲ ಮನವಿ ಮಾಡುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.