Chennai: ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಚಾಲಕಿಗೆ ಕಾರ್ ಗಿಫ್ಟ್ ಕೊಟ್ಟ ಕಮಲ್ ಹಾಸನ್
Team Udayavani, Jul 1, 2023, 9:08 PM IST
ಚೆನ್ನೈ: DMK ಸಂಸದೆ ಕನಿಮೊಳಿ ಅವರು ತಮಿಳುನಾಡಿನ ಕೊಯಂಬತ್ತೂರ್‌ಗೆ ಭೇಟಿ ನೀಡಿದ್ದ ವೇಳೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದ ಕೊಯಂಬತ್ತೂರಿನ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರಿಗೆ ನಟ, MNM ಪಕ್ಷದ ನಾಯಕ ಕಮಲ್ ಹಾಸನ್ ಅವರು ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಲ್ಲದೇ, ಇಷ್ಟು ದಿನ ಉದ್ಯೋಗಿಯಾಗಿದ್ದ ಶರ್ಮಿಳಾ ಇನ್ನು ಹಲವಾರು ಜನರಿಗೆ ಉದ್ಯೋಗವನ್ನು ನೀಡುವವಳಾಗಲಿ ಎಂದು ಹಾರೈಸಿದ್ದಾರೆ.
ಘಟನೆಯ ಹಿನ್ನಲೆ:
ಇತ್ತೀಚೆಗೆ ಡಿಎಂಕೆ ಸಂಸದೆ ಕನಿಮೋಳಿ ಅವರು ಇತ್ತೀಚೆಗೆ ಕೊಯಂಬತ್ತೂರ್‌ಗೆ ಭೇಟಿ ನೀಡಿದ್ದ ವೇಳೆ ಅವರು ಏರಿದ ಖಾಸಗಿ ಬಸ್‌ಗೆ ʻನಗರದ ಮೊದಲ ಮಹಿಳಾ ಬಸ್ ಚಾಲಕಿʼ ಖ್ಯಾತಿಯ ಶರ್ಮಿಳಾ ಅವರೇ ಚಾಲಕಿಯಾಗಿದ್ದರು. ಈ ವೇಳೆ ಬಸ್‌ನ ಕಂಡಕ್ಟರ್ ಕನಿಮೋಳಿ ಅವರಿಗೆ ಟಿಕೆಟ್ ನೀಡಿದ್ದರು. ಕಂಡಕ್ಟರ್ ವರ್ತನೆಗೆ ಡ್ರೈವರ್ ಶರ್ಮಿಳಾ ಆಕ್ಷೇಪ ವ್ಯಕ್ತಪಡಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಇದಕ್ಕೆ ವಿರುದ್ಧವಾಗಿ ಕಂಡಕ್ಟರ್ ಕೂಡಾ ಶರ್ಮಿಳಾ ಮೇಲೆ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಸೆಲೆಬ್ರಿಟಿಗಳನ್ನು ಬಸ್‌ನಲ್ಲಿ ಪ್ರಯಾಣ ಮಾಡಲು ಆಹ್ವಾನಿಸಿ ಇತರೆ ಪ್ರಯಾಣಿಕರಿಗೆ ಅನನುಕೂಲತೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದರು. ಇಬ್ಬರ ವಾದವನ್ನೂ ಆಲಿಸಿದ ಆಡಳಿತ ಮಂಡಳಿ ಶರ್ಮಿಳಾರನ್ನು ಕೆಲಸದಿಂದ ವಜಾ ಮಾಡಿತ್ತು. ಈ ವಿಚಾರ ಬಹಳಷ್ಟು ಚರ್ಚೆಯನ್ನೂ ಹುಟ್ಟು ಹಾಕಿತ್ತು.
ಈ ಸಂಗತಿ ನಟ, ಮಕ್ಕಳ್ ನೀಧಿ ಮಯಮ್ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರ ಕಿವಿಗೂ ಬಿದ್ದಿದೆ. ಅವರು ಕೆಲಸ ಕಳೆದುಕೊಂಡಿದ್ದ ಶರ್ಮಿಳಾ ಅವರಿಗೆ 3 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ್ದೂ ಅಲ್ಲದೆ ಸ್ವಂತವಾಗಿ ಉದ್ಯಮ ಆರಂಭಿಸಲು 7 ಸೀಟರ್‌ಗಳ ಮಲ್ಟಿ ಯುಟಿಲಿಟಿ ವಾಹನವನ್ನು ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ, ಇಷ್ಟು ದಿನ ಉದ್ಯೋಗಿಯಾಗಿದ್ದ ಶರ್ಮಿಳಾ ಇನ್ನು ಹಲವಾರು ಜನರಿಗೆ ಉದ್ಯೋಗವನ್ನು ನೀಡುವವಳಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: STOCK EXCHANGE ಬಗ್ಗೆ ಕುತೂಹಲಕರ ಮಾಹಿತಿಗಳು ಇಲ್ಲಿವೆ ನೋಡಿ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.