ಕಣ-ಚಿತ್ರಣ: ಅಕ್ಕನ ಕ್ಷೇತ್ರದಲ್ಲಿ ಅಣ್ಣನ ರಾಜಕೀಯ ಚದುರಂಗ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
Team Udayavani, Apr 29, 2023, 8:33 AM IST
ಬೆಳಗಾವಿ: ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯ ಕದನ. ಅದೂ ಅಂತಿಂತಹ ಸಮರ ಅಲ್ಲ. ಎಲ್ಲರೂ ಕುತೂಹಲದಿಂದ ನೋಡುವ ಸೆಣಸಾಟ. ಇಲ್ಲಿ ಎಲ್ಲರ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಡಲಾಗಿದೆ. ಇದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ವಿಶೇಷ.
ಇಲ್ಲಿ ಕೆಪಿಸಿಸಿ ರಾಜ್ಯ ವಕ್ತಾರರಾದ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ 2ನೇ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ಒಂದು ಕಡೆಯಾದರೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರ ಬಹಿರಂಗ ಹಸ್ತಕ್ಷೇಪ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದೆ.
ಕಳೆದ ಚುನಾವಣೆಯಲ್ಲಿ ಹೆಬ್ಟಾಳ್ಕರ್ ಅವರ ಗೆಲುವಿಗೆ ಪರಿಶ್ರಮಪಟ್ಟಿದ್ದ ರಮೇಶ್ ಜಾರಕಿಹೊಳಿ ಈಗ ಖುದ್ದಾಗಿ ಹೆಬ್ಟಾಳ್ಕರ್ ವಿರುದ್ಧ ಜಿದ್ದಿಗೆ ಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಗೇಶ ಮುನ್ನೋಳಕರ ಅಕ್ಷರಶಃ ಮೂಕಪ್ರೇಕ್ಷಕರಂತೆ ಜಾರಕಿಹೊಳಿ ಸಲಹೆಗಳನ್ನು ಪಾಲಿಸುತ್ತಿದ್ದಾರೆ. ಇದು ಹೆಬ್ಟಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಪ್ರತಿಷ್ಠೆಯ ಸಮರ ಎಂಬ ಭಾವನೆ ಎಲ್ಲರಲ್ಲಿ ಬಂದಿರುವುದರಿಂದ ಚುನಾವಣೆ ಬಹಳ ಕುತೂಹಲಕ್ಕೆ ಕಾರಣವಾಗಿದೆ.
ಅಭಿವೃದ್ಧಿ ವಿಷಯದ ಜತೆಗೆ ಈ ಕ್ಷೇತ್ರದಲ್ಲಿ ಗಿಫ್ಟ್ಗಳ ಭರಾಟೆಯೂ ಹೆಚ್ಚಾಗಿದೆ. ಇನ್ನು ವಿಧಾನಸಭೆ, ಲೋಕಸಭೆ ಚುನಾವಣೆ ಗಳೆರಡನ್ನೂ ಕಂಡಿರುವ ಲಕ್ಷ್ಮೀ ಹೆಬ್ಟಾಳ್ಕರ್ ರಾಜ ಕೀಯದಲ್ಲಿ ಬಹಳ ಪಳಗಿದ್ದಾರೆ. ಎಲ್ಲ ತಂತ್ರಗಾರಿಕೆ ಮತ್ತು ರಾಜಕೀಯ ಪಟ್ಟುಗಳು ಕರಗತವಾಗಿವೆ.
ಬಿಜೆಪಿ ಅಭ್ಯರ್ಥಿ ನಾಗೇಶ ಮುನ್ನೋಳಕರ ರಾಜಕೀಯವಾಗಿ ಪಳಗಿದವರಲ್ಲ. ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರಾಗಿದ್ದ ನಾಗೇಶ ಅವರು ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಆಪ್ತರು. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ವಲಯದಲ್ಲಿ ಸಹ ಅಷ್ಟಾಗಿ ಚಿರಪರಿಚಿತರಲ್ಲ. ಆದರೆ ರಾಜ್ಯದಲ್ಲಿ ಸಂಚಲನ ಉಂಟುಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಂತೋಷ ಪಾಟೀಲ್ ಪರ ಹೇಳಿಕೆ ನೀಡುವ ಮೂಲಕ ನಾಗೇಶ ಸುದ್ದಿಯಾಗಿದ್ದರು.
ಎಂಇಎಸ್ ಅಭ್ಯರ್ಥಿ, ಗುತ್ತಿಗೆದಾರ ಆರ್.ಎಂ.ಚೌಗುಲಾ ಈ ಕ್ಷೇತ್ರದಲ್ಲಿ ಪವಾಡ ಮಾಡುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿ ಹಾಗೂ ಅಪಸ್ವರದ ಲಾಭ ತಮಗೆ ಆಗಲಿದೆ ಅಂದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಂಕರಗೌಡ ಪಾಟೀಲ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಟರ್ನಿಂಗ್ ಪಾಯಿಂಟ್: ಬಿಜೆಪಿ ಟಿಕೆಟ್ ವಂಚಿತರು ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿಲ್ಲ. ಆದರೆ ಒಳಗೊಳಗೇ ಅದರ ನೋವು ಕಾಡುತ್ತಿದೆ. ಇದು ಪಕ್ಷದ ಅಭ್ಯರ್ಥಿ ನಾಗೇಶ ಮುನ್ನೋಳಕರಗೆ ದುಬಾರಿ ಯಾದರೂ ಅಚ್ಚರಿಯಿಲ್ಲ. ಬಿಜೆಪಿಯಲ್ಲಿನ ಅಸಮಾಧಾನ ತಮಗೆ ಟರ್ನಿಂಗ್ ಪಾಯಿಂಟ್ ಆಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಮತ್ತು ಎಂಇಎಸ್ ಅಭ್ಯರ್ಥಿಗಳದ್ದಾಗಿದೆ.
~ ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.