Kanguva Teaser ರಿಲೀಸ್: ಯುದ್ಧರಂಗದಲ್ಲಿ ಗಮನ ಸೆಳೆದ ಭಯಾನಕ ದೃಶ್ಯ ವೈಭವ
Team Udayavani, Mar 20, 2024, 11:09 AM IST
ಚೆನ್ನೈ: ಸೂರ್ಯ ಅಭಿನಯದ ʼಕಂಗುವʼ ಸಿನಿಮಾದ ಪೋಸ್ಟರ್ ಗಳು ಹೈಪ್ ಹೆಚ್ಚಿಸಿದ ಬಳಿಕ, ಇದೀಗ ಸಿನಿಮಾದ ಟೀಸರ್ ಹವಾ ಎಬ್ಬಿಸಿದೆ. ಪುಟ್ಟ ಟೀಸರ್ ನೋಡಿ ಸೂರ್ಯ ಅವರ ಫ್ಯಾನ್ಸ್ ಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಸೂರ್ಯ ಸಿನಿಕೆರಿಯರ್ ನಲ್ಲಿ ವಿಭಿನ್ನ ಸಿನಿಮಾವೆಂದೇ ಹೇಳಲಾಗುತ್ತಿರುವ ʼಕಂಗುವʼ ಅನೌನ್ಸ್ ಆದ ಸಮಯದಿಂದ ಸದ್ದು ಮಾಡಿದೆ. ʼಅನ್ನಾಥೆʼ, ʼವಿಶ್ವಾಸಂʼ, ವೇದಾಲಂʼ.. ಹೀಗೆ ಕಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವ ʼಕಂಗುವʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈಗಾಗಲೇ ಸಿನಿಮಾದ ಗ್ಲಿಂಪ್ಸ್ ವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಇದೀಗ ಚಿತ್ರತಂಡ ಬಹುನಿರೀಕ್ಷಿತ ಸಿನಿಮಾದ ಟೀಸರ್ ರಿಲೀಸ್ ಮಾಡಿದೆ.
ಯುದ್ಧದದಲ್ಲಿ ಹೋರಾಡುವ ಸೈನ್ಯ, ಸೈನ್ಯಕ್ಕೊಬ್ಬ ನಾಯಕ. ಆ ನಾಯಕನ ರೌದ್ರ ಅವಾತರ ಹೀಗೆ ಸೂರ್ಯ ಹಾಗೂ ಬಾಬಿ ಡಿಯೋಲ್ ಅವರ ಪಾತ್ರದ ಝಲಕ್ ನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಇದೊಂದು ಪಕ್ಕಾ ಮಾಸ್ ಸಿನಿಮಾವೆನ್ನುವುದು, ಹಾಗೂ ಸಿನಿಮಾದಲ್ಲಿ ದೃಶ್ಯಗಳು ರೋಮಾಂಚನವಾಗಿರುತ್ತದೆ ಎನ್ನುವುದು ಸಿನಿಮಾದ ಟೀಸರ್ ನೋಡುವಾಗಲೇ ಗೊತ್ತಾಗುತ್ತದೆ.
ಇದನ್ನೂ ಓದಿ: ಶೂಟಿಂಗ್ ಶುರುವಾಗೋ ಮುನ್ನವೇ ʼಕಾಂತಾರ-1ʼ ಓಟಿಟಿ ಹಕ್ಕನ್ನು ಖರೀದಿಸಿದ ಅಮೇಜಾನ್ ಪ್ರೈಮ್
ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ʼಉಧಿರನ್ ʼ ಪಾತ್ರದಲ್ಲಿ ಬಾಬಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ಜೊತೆ ದಿಶಾ ಪಟಾನಿ ನಟಿಸಿದ್ದಾರೆ. ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಆನಂದರಾಜ್, ರವಿ ರಾಘವೇಂದ್ರ, ಕೆಎಸ್ ರವಿಕುಮಾರ್ ನಟಿಸಿದ್ದಾರೆ.
ಛಾಯಾಗ್ರಹಣವನ್ನು ವೆಟ್ರಿ ಪಳನಿಸಾಮಿ ಮಾಡಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.
ಇದೇ ವರ್ಷ 10 ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ತ್ರೀ ಡಿಯಲ್ಲೂ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.