ಕನ್ನಡ ಪತ್ರಿಕೋದ್ಯಮ: ಇಂದಿಗೆ 180 ವರ್ಷ


Team Udayavani, Jul 1, 2023, 7:39 AM IST

MANGALORE SAMACHARA

ಪತ್ರಿಕೋದ್ಯಮಕ್ಕೆ 1-7-2023ಕ್ಕೆ ಪೂರ್ತಿ 180 ವರ್ಷಗಳು. 1843ರ ಜುಲೈ 1ರಂದು ಮಂಗಳೂರಿನಲ್ಲಿ ಬಾಸೆಲ್‌ ಮಿಷನ್‌ನವರ ಮುದ್ರಣಾಲಯದಿಂದ ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟವಾಯಿತು. ರೆವರೆಂಡ್‌ ಹರ್ಮನ್‌ ಮೋಗ್ಲಿಂಗ್‌ ಅವರು ಸಂಪಾದಕರಾಗಿದ್ದರು.

ಆಗಿನ ಬರಹದ ವ್ಯಾಕರಣ – ಪದ ಬಳಕೆಯ ಶೈಲಿಯಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಸುಮಾರು 8 ತಿಂಗಳ ಕಾಲ ಸತತವಾಗಿ ಪ್ರಕಟವಾಯಿತು. ಮೂಲತಃ ಜರ್ಮನಿಯವರಾದ
ರೆ| ಮೋಗ್ಲಿಂಗ್‌ ಅವರು 1836ರಲ್ಲಿ ಮಂಗಳೂರಿಗೆ ಬಂದರು. ಕನ್ನಡ ಭಾಷೆಯನ್ನು ಕಲಿತು, 1843ರಲ್ಲಿ ಮೊದಲ ಸಂಚಿಕೆ ಪ್ರಕಟಿಸಿದರು.

ಕನ್ನಡ ಪತ್ರಿಕೋದ್ಯಮದಲ್ಲಿ ಇದು ಪ್ರಥಮ ಪುಟ್ಟ ಹೆಜ್ಜೆ. ಎಲ್ಲ ಮಹಾ ಅಭಿಯಾನಗಳು ಪುಟ್ಟ ಹೆಜ್ಜೆಯೊಂದಿಗೆ ಆರಂಭವಾಗುತ್ತವೆ ಎಂಬ ಮಾತಿಗೆ ಅನುಗುಣವಾಗಿ 180 ವರ್ಷಗಳ ಹಿಂದೆ ಇಲ್ಲಿ ಆರಂಭವಾದ ಪತ್ರಿಕೋದ್ಯಮ ಈಗ ಆಧುನಿಕವಾದ ಮಾಹಿತಿ ತಂತ್ರಜ್ಞಾನದೊಂದಿಗೆ ವಿಸ್ತಾರವಾದ ರೂಪವನ್ನು ಪಡೆದುಕೊಂಡಿದೆ.

ಅಪೂರ್ವ ಸಾಧನೆ

ಈಗ ಮಂಗಳೂರು, ಉಡುಪಿ, ಕಾರವಾರ ಕೇಂದ್ರಗಳಾಗಿ ಕರಾವಳಿಯ ಜಿಲ್ಲೆಗಳು, ನೆರೆಯ ಕಾಸರಗೋಡು ಪತ್ರಿಕೋದ್ಯಮದ ಸಾಧನೆಯ ಶೃಂಗದಲ್ಲಿದೆ. ಅನೇಕ ಪತ್ರಿಕೆಗಳು, ಸ್ಯಾಟಲೈಟ್‌ ಚಾನೆಲ್‌ಗ‌ಳು, ದೇಶದಲ್ಲೇ ಗರಿಷ್ಠ ಎಂಬಂತೆ ಬಹುಭಾಷಾ ಪ್ರಾದೇಶಿಕ ಚಾನೆಲ್‌ಗ‌ಳು, ಆನ್‌ಲೈನ್‌ ಆವೃತ್ತಿಗಳು, ವೆಬ್‌ಸೈಟ್‌ಗಳು, ಸಂಜೆ ಪತ್ರಿಕೆಗಳು, ವೆಬ್‌ ಪತ್ರಿಕೆಗಳು, ಫೇಸ್‌ಬುಕ್‌- ವಾಟ್ಸ್‌ಆ್ಯಪ್‌ ಮಾಹಿತಿ- ಇಂಟರ್‌ನೆಟ್‌ ವಿನಿಮಯ ಗ್ರೂಪ್‌ಗ್ಳು, ನೇರ ಪ್ರಸಾರ ನೀಡುವ ವಾಹಿನಿಗಳು… ಹೀಗೆ ಮಾಧ್ಯಮದ ಎಲ್ಲ ಅವಕಾಶಗಳು ಇಲ್ಲಿ ಕಾರ್ಯರೂಪಕ್ಕೆ ಬಂದಿವೆ. ಅನೇಕ ಪತ್ರಕರ್ತರು ರಾಜ್ಯ- ದೇಶ – ಅಂತಾರಾಷ್ಟ್ರೀಯ ಮಾನ್ಯತೆಗಳಿಗೂ ಪಾತ್ರರಾಗಿದ್ದಾರೆ.

ಮಂಗಳೂರು ಆಕಾಶವಾಣಿ ಕೇಂದ್ರ, ದೂರದರ್ಶನ ಮರುಪ್ರಸಾರ ಕೇಂದ್ರ… ಹೀಗೆ 24×7 ಎಂಬಂತೆ ಸುದ್ದಿ, ಮಾಹಿತಿ, ಮನೋರಂಜನೆ.

ಉದ್ಯೋಗಾವಕಾಶ
ಈ 180 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಹಲವು ಸಾಧ್ಯತೆಗಳಿಗೆ ತನ್ನನ್ನು ತಾನು ತೆರೆದು ಕೊಂಡಿದೆ. ಕನ್ನಡ, ಆಂಗ್ಲ ಭಾಷೆಗಳ ಹೆಚ್ಚಿನ ಎಲ್ಲ ರಾಜ್ಯ- ರಾಷ್ಟ್ರೀಯ ಪತ್ರಿಕೆಗಳು ಮಂಗಳೂರಿನಲ್ಲಿ ಮುದ್ರಣವಾಗುತ್ತಿವೆ ಎಂಬುದು ಈ ಸಂದರ್ಭದಲ್ಲಿ ಉಲ್ಲೇಖನೀಯ.

ಮುದ್ರಣ, ಎಲೆಕ್ಟ್ರಾನಿಕ್‌ ಮಾಧ್ಯಮ ಸಹಿತ ಪತ್ರಿಕೋದ್ಯಮ ಈಗ ಅಪಾರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ. ವಿ.ವಿ. ಹಾಗೂ ಕೆಲವು ಕಾಲೇಜುಗಳಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದ ಪದವಿ, ಸ್ನಾತಕೋತ್ತರ, ಪಿಎಚ್‌.ಡಿ. ಅವಕಾಶಗಳಿವೆ.

ಮಂಗಳೂರು ದರ್ಶನದಿಂದ ಉಲ್ಲೇಖೀತ ಭಾಗವಿದು
ಆ ಕಾಲದಲ್ಲಿ ಅಂದರೆ- ಸುಮಾರು ಒಂದೂವರೆ ಶತಮಾನಗಳ ಹಿಂದೆ, ಸಂಪರ್ಕ ಸಾಧನಗಳು ಏನೇನೂ ಇಲ್ಲದಿದ್ದಾಗ ಮೋಗ್ಲಿಂಗ್‌ ತನ್ನ ಪತ್ರಿಕೆಗಳಲ್ಲಿ ಸ್ಥಳೀಯ ವಾರ್ತೆಗಳ ಜತೆಗೆ ದೇಶ ವಿದೇಶಗಳ ವಾರ್ತೆಯನ್ನು ಪ್ರಕಟಿಸು ತ್ತಿದ್ದರೆಂಬುದು ಅವರ ವಾರ್ತಾಪ್ರಜ್ಞೆಗೆ ಸಾಕ್ಷಿಯಾಗಿದೆ.

ಕಂನಡ ಸಮಾಚಾರ ಆಯಿತು!

ಮಂಗಳೂರು ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವೂರ ವರ್ತಮಾನಗಳು, ಸರಕಾರಿ ನಿರೂಪಗಳು/ ಕಾನೂನು, ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ಕತೆಗಳು, ಸರ್ವರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣ ಗಳಾಗಿದ್ದವೆಂದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕಂನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು. ಪತ್ರಿಕೆಯ ಸಂಪಾದಕ ರೆ| ಮೋಗ್ಲಿಂಗ್‌ (1811-1881) ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ.

ಕನ್ನಡ ಮಾತನಾಡುವ ಎಲ್ಲ ಜನರಲ್ಲೂ ಇದು ಪ್ರಸಾರಕ್ಕೆ ಬರಲಿ ಎಂಬ ಆಶಯದಿಂದ ಹೀಗೆ ಮಾಡಿದ್ದೇವೆ. ಇದರ ಮೊದಲ ಸಂಚಿಕೆ 1-3- 1844ರಂದು ಪ್ರಕಟವಾಯಿತು. ಪುಟ ಸಂಖ್ಯೆ 4ರಿಂದ 8ಕ್ಕೆ ಏರಿತು. ಬೆಲೆಯು ಹಿಂದಿನ ಒಂದು ದುಡ್ಡು (ಹಿಂದಿನ ಎರಡು ಕಾಸು) ಇದ್ದದ್ದು ಎರಡು ದುಡ್ಡಿಗೆ ಏರಿತು. ಈ ಪತ್ರಿಕೆ ದೀರ್ಘಾಯುವಾಗಲಿಲ್ಲ. ಆದರೆ ಕನ್ನಡ ಪತ್ರಿಕೋ ದ್ಯಮ ಮಾತ್ರ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರಿತು!

ಅಂದಹಾಗೆ..
180 ವರ್ಷಗಳ ಹಿಂದೆ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದಲ್ಲಿ ಸಂಪಾದಕ ಮೋಗ್ಲಿಂಗ್‌ ಅವರು ಪತ್ರಿಕೆಯ ಆಶಯವನ್ನು ಹೀಗೆ ವಿವರಿಸಿದ್ದಾರೆ. ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಶಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.