ಕಾರ್ಕಳ: CC ಕೆಮರಾ ಇಲ್ಲದೆ ಭದ್ರತೆಗೆ ಸವಾಲು: CC ಕೆಮರಾ ಕುರಿತ ನಿಯಮ ಇಲ್ಲಿ ಪಾಲನೆಯಾಗಿಲ್ಲ

Team Udayavani, Mar 17, 2021, 5:40 AM IST

ಕಾರ್ಕಳ: CC ಕೆಮರಾ ಇಲ್ಲದೆ ಭದ್ರತೆಗೆ ಸವಾಲು: CC ಕೆಮರಾ ಕುರಿತ ನಿಯಮ ಇಲ್ಲಿ ಪಾಲನೆಯಾಗಿಲ್ಲ

ಕಾರ್ಕಳ: ನಗರದಲ್ಲಿ ಚಟುವಟಿಕೆಗಳ ಮೇಲೆ ಹದ್ದಿನ‌ ಕಣ್ಣಿಡಬೇಕಾದ ಸಿಸಿ ಕೆಮರಾಗಳು ಇಲ್ಲದೆ ಕಾನೂನು ಸುವ್ಯವಸ್ಥೆ ಸುಭದ್ರವಾಗಿಲ್ಲ . ಪುರಸಭೆ ವ್ಯಾಪ್ತಿಯಲ್ಲಿ 3ರಿಂದ 4 ಸಿಸಿ ಕೆಮರಾ, ಡಿವೈಎಸ್ಪಿ ವಿಭಾಗದಲ್ಲಿ ಒಟ್ಟು 8 ಸಿಸಿ ಕೆಮರಾಗಳಿವೆ. ಕಾರ್ಕಳ ಮುಖ್ಯ ಪೇಟೆಗೆಯ ಹೊರ ವಲಯದಲ್ಲಿ ಹಾದು ಹೋಗುವ ಬೈಪಾಸ್‌ ರಸ್ತೆ, ಇನ್ನಿತರ ಕಡೆಗಳಲ್ಲಿ ಕೆಮರಾ ಅಳವಡಿಸಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲೂ ಇಲ್ಲ. ಆಯಕಟ್ಟಿನ ಸ್ಥಳಗಳಲ್ಲೂ ಇಲ್ಲ.

ಬೈಪಾಸ್‌ ರಸ್ತೆಯ ಸರ್ವಜ್ಞ ವೃತ್ತ, ಜೋಡು ರಸ್ತೆಯ ರಾಘವೇಂದ್ರ ವೃತ್ತದ ಬಳಿ, ಅಂಬೇಡ್ಕರ್‌ ವೃತ್ತ (ಗಣಪತಿ ದೇವಸ್ಥಾನದ ಬಳಿ,) ಅನಂತಶಯನ, ಬಸ್‌ಸ್ಟಾಂಡ್‌, ಆನೆಕೆರೆ, ಬಾಹುಬಲಿ ಬೆಟ್ಟ, ಕೋಟಿಚೆನ್ನಯ ಥೀಮ್‌ ಪಾರ್ಕ್‌ ಮೊದಲಾದ ಪ್ರಮುಖ ಕೇಂದ್ರಗಳಲ್ಲಿ ಕಣ್ಗಾವಲಿನ ಅವಶ್ಯವಿದೆ.

ಕಡ್ಡಾಯ ನಿಯಮ ಪಾಲನೆಯಾಗಿಲ್ಲ
100ರಿಂದ 500 ಜನ ಸೇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ಕಾನೂನನ್ನು
ಈ ಹಿಂದೆ ರಾಜ್ಯ ಸರಕಾರ ಜಾರಿಗೆ ತಂದಿತ್ತು. ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಧಾರ್ಮಿಕ ಸಂಕೀರ್ಣಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ತಾಣಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವಿದೆ.

ಸಿಸಿಟಿವಿ ಅಳವಡಿಕೆಯು ಕಳ್ಳತನ ಸೇರಿದಂತೆ ಅಪರಾಧ ಪತ್ತೆ ಹಚ್ಚಲು ಮತ್ತು ವ್ಯಕ್ತಿಗಳ ದಾಖಲೆಗಳನ್ನು ಪಡೆಯಲು ಕಣ್ಗಾವಲು ವ್ಯವಸ್ಥೆ ಅಗತ್ಯವಿದೆ.

ಬೇಡಿಕೆ ಪತ್ರ ಬಂದಿದೆ
ಸಿಸಿ ಕೆಮರಾಕ್ಕೆ ಪೊಲೀಸ್‌ ಇಲಾಖೆಯಿಂದ ಬೇಡಿಕೆ ಪತ್ರ ಬಂದಿದೆ. ಪುರಸಭೆ ವತಿಯಿಂದ ಪೇಟೆಯಲ್ಲಿ ಸಿಸಿ ಕೆಮರಾ ಅಳವಡಿಸಲು
ಗಮನ ಹರಿಸಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದಿವೆ.
-ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

32 ಸಿಸಿ ಕೆಮರಾ ಅಗತ್ಯ
ಇಲಾಖೆ ವತಿಯಿಂದ ಹೆಚ್ಚಿನ ಸಿಸಿ ಕೆಮರಾಕ್ಕೆ ಬೇಡಿಕೆ ಇರಿಸಲಾಗಿದೆ. ಸಾರ್ವಜನಿಕರ ಸಹಕಾರ ಕೂಡ ಕೇಳಿದ್ದೇವೆ. ಪುರಸಭೆಗೂ ಮನವಿ ಮಾಡಿದ್ದೇವೆ.ಸುಮಾರು 32 ಸಿಸಿ ಕೆಮರಾಗಳ ಅಗತ್ಯವಿದೆ.
-ಭರತ್‌ ರೆಡ್ಡಿ , ಡಿವೈಎಸ್ಪಿ, ಕಾರ್ಕಳ

ಪೊಲೀಸರಿಗೂ ಕಿರಿಕಿರಿ!
ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಬೇಕಿದ್ದ ಸಿಸಿ ಕೆಮರಾ ಇಲ್ಲದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಅಪರಾಧ ಪ್ರಕರಣಗಳು ಒಂದೆಡೆ ಹೆಚ್ಚುತ್ತಿದೆ. ಅಂತಾರಾಜ್ಯ ಕಳ್ಳತನ, ಗೋ ಕಳ್ಳತನ, ಮನೆಗಳ್ಳತನ, ಸರಗಳ್ಳತನ ವಾಹನ ಕಳ್ಳತನ ಇದೆಲ್ಲ ಪ್ರಕರಣಗಳನ್ನು ಅತೀ ಶೀಘ್ರ ಭೇದಿಸಲು ಪೊಲೀಸರಿಗೆ ಹೆಚ್ಚು ಸಹಾಯವಾಗುವುದು ಸಿಸಿ ಕೆಮರಾಗಳು. ಇಷ್ಟು ದೊಡ್ಡ ನಗರದಲ್ಲಿ ಬೆರಳೆಣಿಕೆಯ ಸಿಸಿ ಕೆಮರಾಗಳಿರುವುದು ಪೊಲೀಸರ ತನಿಖೆಗೂ ಹಿನ್ನಡೆಯಾಗಿದೆ. ಅಪರಾಧ ನಡೆದಾಗ ಖಾಸಗಿ ಕೆಮರಾ ಮಾಲಕರ ಮೊರೆ ಹೋಗುವುದು ಪೊಲೀಸರಿಗೂ ಮುಜುಗರ ತರುತ್ತಿದೆ. ಜತೆಗೆ ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ಸಿಸಿ ಕೆಮರಾ ಇಲ್ಲದ್ದರಿಂದ ಸವಾಲಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.