ನೇಕಾರ ಸಮ್ಮಾನ್ ನೆರವು ಜಮೆಗೆ ಇಂದು ಚಾಲನೆ
Team Udayavani, Jan 11, 2023, 6:45 AM IST
ಬೆಂಗಳೂರು: ವಿದ್ಯುತ್ ಮಗ್ಗ ನೇಕಾರರಿಗೆ, ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಒದಗಿಸುವ ಪ್ರಕ್ರಿಯೆಗೆ ಬುಧವಾರ ಚಾಲನೆ ಸಿಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ. 11ರ ಬೆಳಗ್ಗೆ 11.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಇದಕ್ಕೆ ಚಾಲನೆ ನೀಡಲಿದ್ದಾರೆ.
ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ 2022-23ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ 5 ಸಾವಿರ ರೂ.ಗಳ ವಾರ್ಷಿಕ ಆರ್ಥಿಕ ನೆರವನ್ನು ಡಿಬಿಟಿ ಮೂಲಕ ಒದಗಿಸಲಾಗುವುದು.
ಇಲಾಖೆಯ ಮಾಹಿತಿಯಂತೆ ಈವರೆಗೆ ನೋಂದಾಯಿತರಾದ 1,02,980 ನೇಕಾರರು, ಕಾರ್ಮಿಕರು ತಲಾ 5 ಸಾವಿರ ರೂ.ಗಳ ಆರ್ಥಿಕ ನೆರವನ್ನು ಪಡೆಯಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.