ದೇಶಕ್ಕೆ ಕರ್ನಾಟಕವೇ ಮಾದರಿ
ಕೋವಿಡ್-19 ಕಟ್ಟಿಹಾಕಿದ ರಾಜ್ಯಕ್ಕೆ ಮತ್ತೆ ಕೇಂದ್ರ ಶಹಬ್ಟಾಶ್‌ಗಿರಿ
Team Udayavani, Jun 20, 2020, 6:00 AM IST
ಹೊಸದಿಲ್ಲಿ: ದೇಶದಲ್ಲೇ ಮೊದಲ ಕೋವಿಡ್-19 ಸೋಂಕು ಪೀಡಿತನ ಸಾವಿಗೆ ಸಾಕ್ಷಿಯಾಗಿದ್ದ ಕರ್ನಾಟಕ ಈಗ ಇತರ ರಾಜ್ಯಗಳಿಗೇ ಮಾದರಿ. ಕೋವಿಡ್-19 ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಮತ್ತೂಮ್ಮೆ ಶಹಬ್ಟಾಶ್‌ಗಿರಿ ಸಿಕ್ಕಿದೆ. ಕರ್ನಾಟಕ ಅನುಸರಿಸಿದ್ದ ಸಮಗ್ರ ಸಂಪರ್ಕ ಪತ್ತೆ ಮತ್ತು ಭೌತಿಕ-ಫೋನ್ ಆಧಾರಿತ ಸರ್ವೇಯನ್ನು ಇತರ ರಾಜ್ಯಗಳೂ ಅಳವಡಿಸಿಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಕೋವಿಡ್-19 ಜಾಡು ಹಿಡಿದುತೀವ್ರ ಸೋಂಕು ಪೀಡಿತರು ಮಾತ್ರವಲ್ಲದೆ ಕಡಿಮೆ ಅಪಾಯ ಹೊಂದಿರುವವರ ಸಂಪರ್ಕ ಪತ್ತೆಯನ್ನೂ ಮಾಡಿ ರುವ ಕರ್ನಾಟಕ ಅಂಥವರನ್ನು ಕಡ್ಡಾಯ ಕ್ವಾರಂಟೈನ್ ಗೊಳಪಡಿಸಿದೆ. ಹಾಗೆ ಕ್ವಾರಂಟೈನ್‌ಗೆ ಒಳಪಟ್ಟ ಪ್ರತಿ ಯೊಬ್ಬನಿಗೂ ರಾಜ್ಯ ವಿನ್ಯಾಸಗೊಳಿಸಿದ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಲಾಗಿದೆ. 10 ಸಾವಿರಕ್ಕೂ ಅಧಿಕ ಸಿಬಂದಿ ಸಂಪರ್ಕಿತರ ಪತ್ತೆಯ ನಿರ್ದಿಷ್ಟ ಜವಾಬ್ದಾರಿಗಳನ್ನು ಉತ್ತಮವಾಗಿ ಪೂರೈಸಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.
ಡಿಜಿಟಲ್ ಹಾದಿ
ಸಂಪರ್ಕ ಪತ್ತೆಗೆ ಕರ್ನಾಟಕ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ಗಳನ್ನು ವ್ಯಾಪಕವಾಗಿ ಬಳಸಿಕೊಂಡಿದೆ. ಹೀಗಾಗಿ ಅಲ್ಲಿ ಯಾವುದೇ ವ್ಯಕ್ತಿಗೆ ಸೋಂಕನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಕೊಳೆಗೇರಿಗಳಲ್ಲಿ ಕೋವಿಡ್-19 ಕಾಣಿಸಿಕೊಂಡಾಗ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಿದೆ. ಆದ್ದರಿಂದ ಅಲ್ಲಿನ ಕೊಳೆಗೇರಿ ಗಳಲ್ಲಿ ಹೆಚ್ಚಿನ ಬಾಧಿತರು ಕಾಣಸಿಗುವುದಿಲ್ಲ ಎಂದು ವಿವರಿಸಿದೆ.
“ಆಶಾ’ ಕೆಲಸಕ್ಕೂ ಮೆಚ್ಚುಗೆ
ಪೋಲಿಂಗ್ ಬೂತ್ ಮಟ್ಟದ ಆರೋಗ್ಯ ಅಧಿಕಾರಿ ಗಳು ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ. ಆಪ್ತ ಮಿತ್ರ ಸಹಾಯವಾಣಿ (14410) ಮೂಲಕ ಎಲ್ಲ ರಿಗೂ ಅಗತ್ಯ ಮಾರ್ಗದರ್ಶನ ಸಿಕ್ಕಿದೆ. ಆಶಾ ಕಾರ್ಯ ಕರ್ತೆಯರು ಹಳ್ಳಿ ಹಳ್ಳಿಗಳ ಮನೆಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಿ ಕೊರೊನಾವನ್ನು ನಿಯಂತ್ರಿಸಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.