ಕನ್ನಡ ಪರ ಹೋರಾಟಗಾರರು ಡೋಂಗಿಗಳು ಎಂದ ಯತ್ನಾಳ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ
Team Udayavani, Nov 21, 2020, 5:40 PM IST
ವಿಜಯಪುರ : ಕನ್ನಡ ಪರ ಹೋರಾಟಗಾರರನ್ನು ಡೋಂಗಿಗಳು, ರೋಲ್‍ಕಾಲ್ ಸಂಘಟನೆಗಳು ಎಂದೆಲ್ಲ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕರವೇ ಕಾರ್ಯಕರ್ತರು ನಗರದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಮರಾಠಾ ಅಭಿವೃದ್ಧಿ ನಿಗಮ ರಚನೆಗೆ ಬೆಂಬಲಿಸಿ ಹಾಗೂ ಡಿ.5 ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿರೋಧ ವ್ಯಕ್ತಪಪಡಿಸಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡಿರುವ ಕರವೇ ಕಾರ್ಯಕರ್ತರು ಶನಿವಾರ ನಗರದಲ್ಲಿರುವ ಶಾಸಕ ಕಛೇರಿ ಎದುರು ಪ್ರತಿಭಟನೆ ನಡೆಸಿ, ಶಾಸಕ ಯತ್ನಾಳ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಮರಾಠಿ ಸಮುದಾಯವನ್ನು ಓಲೈಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ನಿರ್ಧಾರ ಸರಿಯಲ್ಲ.
ಇದನ್ನೂ ಓದಿ:ದೇಹಕ್ಕೆ ಧನಾತ್ಮಕ ಶಕ್ತಿ…ರುದ್ರಾಕ್ಷಿ ಧಾರಣೆ ಆರೋಗ್ಯಕ್ಕೂ ಒಳ್ಳೆಯದು
ಕನ್ನಡ ನೆಲದಲ್ಲಿ ಮರಾಠಿಗರ ಓಲೈಕೆಗೆ ಮುಂದಾಗಿರುವುದರಿಂದ ಕನ್ನಡ ಭಾಷಿಕರಿಗೆ ನೋವಾಗಿದೆ. ಹೀಗಾಗಿ ರಾಜ್ಯದ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಆದರೆ ಕನ್ನಡ ನೆಲದಲ್ಲಿ ಕನ್ನಡಗರಿಂದ ಆಯ್ಕೆಯಾಗಿರುವ ವಿಜಯಪುರ ಶಾಸಕ ಯತ್ನಾಳ ಅವರು ಕನ್ನಡಪರ ಸಂಘಟನೆಗಳ ನಾಯಕರನ್ನು ಡೋಂಗಿ ಹೋರಾಟಗಾರರು ಹಾಗೂ ರೋಲ್‍ಕಾಲ್ ಸಂಘಟನೆಗಳೆಂದು ನೀಡಿರುವ ಹೇಳಿಕೆ ಖಂಡನಾರ್ಹ. ಕೂಡಲೇ ಶಾಸಕ ಯತ್ನಾಳ ಬೇಷರತ್ತಾಗಿ ಕ್ಷಮೆ ಕೋರಬೇಕು ಎಂದು ಆಗದ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಹೋರಾಟದಿಂದಲೇ ರಾಜಕೀಯವಾಗಿ ಬೆಳೆದಿರುವ ಶಾಸಕ ಬಸನಗೌಡ ಪಾಟೀಲ ಅವರು, ಕನ್ನಡ ಪರ ಹೋರಾಟಗಾರರ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ. ಹೋರಾಟದ ದಿನಗಳಲ್ಲಿ ಯತ್ನಾಳ ಕೂಡ ನಕಲಿ ರೋಲ್ ಕಾಲ್ ಹೋರಾಟಗಾರರಾಗಿದ್ದರೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಭೀಕರ ಅಪಘಾತ-ಕಾರಿನಲ್ಲಿದ್ದ ಏಳು ಮಂದಿ ಜೀವಂತ ದಹನ, ಓರ್ವ ಮಹಿಳೆ ಪವಾಡಸದೃಶ ಪಾರು
ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ, ಶ್ರೀಕಾಂತ ಬಿಜಾಪುರ ಮಾತನಾಡಿ, ಈಚೆಗೆ ನಗರ ಶಾಸಕ ಯತ್ನಾಳ ಅವರು ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸಲು ಮುಂದಾಗುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ವಿವಾಧಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ನಗರ ಶಾಸಕರು ಮಾನಸಿಕ ಆರೋಗ್ಯದ ಕುರಿತು ಆತಂಕವಾಗಿದ್ದು, ಕೂಡಲೇ ಸರ್ಕಾರ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಮಹಾದೇವ ರಾವಜಿ, ಫಯಾಜ ಕಲಾದಗಿ, ಸಾಯಬಣ್ಣ ಮಡಿವಾಳರ, ಮಲ್ಲು ಮಡಿವಾಳರ, ಮಂಜುನಾಥ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಸಂತೋಷ ಪಾಟೀಲ, ಸುಭಾಸ ಪಾಟೀಲ, ಮಲಕುಗೌಡ ಪಾಟೀಲ, ಪಂಡಿತ ಪೂಜಾರಿ, ಧರ್ಮು ಸಿಂಧೆ, ಭೀಮಪ್ಪ ಕಾಂಬಳೆ, ಮನೋಹರ ತಾಜವ, ಶಿವಾಜಿ ಜಾಧವ, ಬಸವರಾಜ ಬಿ.ಕೆ., ನಶೀಮ ರೋಜಿಂದಾರ, ವಿನೋದ ದಳವಾಯಿ, ಪಿದಾ ಕಲಾದಗಿ, ರಾಜು ಹಜೇರಿ, ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಬಿರಾದಾರ, ರಮೇಶ ಜಾವಗರ, ಸುರೇಶ ಪೂಜಾರಿ, ಸೋಮು ಕರನಾಳ, ಎಸ್.ವೈ.ನಡುವಿನಕೇರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.