![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 24, 2023, 5:35 AM IST
ಕಾಪು: ಕಟಪಾಡಿ ಫಾರೆಸ್ಟ್‌ಗೇಟ್ ಬಳಿ ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದು ತಂದೆ-ಮಗಳು ಗಾಯಗೊಂಡ ಘಟನೆ ಮಾ. 21ರಂದು ನಡೆದಿದೆ.
ಎರ್ಮಾಳು ನಿವಾಸಿ ದಿನೇಶ್ ಆಚಾರ್ಯ (53) ಮತ್ತು ಅವರ ಮಗಳು ಯುಕ್ತಾ ಆಚಾರ್ಯ (8) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರ್ಮಾಳಿನಿಂದ ಉಡುಪಿಗೆ ತೆರಳುತ್ತಿದ್ದ ಬೈಕ್‌ಗೆ ಹಿಂಬಯಿಂದ ಮಂಗಳೂರು-ಉಡುಪಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಈ ಆಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಬೈಕ್‌ನಲ್ಲಿದ್ದ ತಂದೆ-ಮಗಳು ರಸ್ತೆಗೆ ಬಿದ್ದಿದ್ದು ಇಬ್ಬರಿಗೂ ಗಾಯಗಳುಂಟಾಗಿವೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.